ಜಗಮೆಚ್ಚಿದ ಗುರು.ತರಳಬಾಳು ಜಗದ್ಗುರುಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

#Dr_Shivamurthy_Shivacharya_Swamigalu_Jagamechida_Guru
ಸಿರಿಗೆರೆಯ ಪೂಜ್ಯ ಶ್ರೀ ಮದುಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು* ಲಿಂಗೋದಯ/ಜನ್ಮದಾಳಿದ್ದು ಶಿವಮೊಗ್ಗ ಜಿಲ್ಲೆಯ ಸೂಗೂರಿನಲ್ಲಿ. ಪೂಜ್ಯರು 1946 ರ ಜೂನ್ 16 ರಂದು ಈಶ್ವರಯ್ಯ ಮತ್ತು ಗಂಗಮ್ಮನವರ ಮಗನಾಗಿ ಜನ್ಮತಾಳಿದರು. ಪೂಜ್ಯರು ಜನ್ಮತಾಳಿದಾಗ ,ಬಾಲಕನಿಗೆ ಶಿವಮೂರ್ತಿ ಎಂದು ನಾಮಕರಣ ಮಾಡಿದವರು, ಶ್ರೀ ತರಳಬಾಳು ಗುರುಪರಂಪರೆಯ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳು. ಒಮ್ಮೆ ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಸೂಗುರಿನ ಹತ್ತಿರದ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಸಭೆಯಲ್ಲಿ ತೆಂಗಿನ ಚಿಪ್ಪಿನಿಂದ ಸಿದ್ಧವಾದ ವಾದ್ಯದಿಂದ ಸಭೆಯಲ್ಲಿ ವಚನ ಗೀತೆ ಹಾಡಿದ ಬಾಲಕ ಶಿವಮೂರ್ತಿ ಕಂಡಂತಹ ಮಾತ್ರೃ ವಾತ್ಸಲ್ಯದ ಪರಮಪೂಜ್ಯ ಶಿವಕುಮಾರ ಗುರುಗಳು ಮರುದಿನವೇ ಸಿರಿಗೆರೆಯ ಮಠದಲ್ಲಿದ್ದ ಪೀಟಿಲ ನ್ನು ಬಾಲಕ ಶಿವಮೂರ್ತಿಗೆ ವಚನಗೀತೆಗಳನ್ನು ಪೀಟಿಲಿನೊಂದಿಗೆ ತರಬೇತಿ ಹೊಂದಲು ಸಿರಿಗೆರೆಯಿಂದ ಶಿವಮೊಗ್ಗಕ್ಕೆ ಬರುವ ಗಜಾನನ ಬಸ್ಸಿಗೆ ಶಿಷ್ಯನ ಮೂಲಕ ಕಳುಹಿಸಿಕೊಟ್ಟರು.ಈ ಪೀಟಿಲಿನ ತಂತಿಗಳೇ ಸಿರಿಗೆರೆಗೂ-ಸೂಗೂರಿಗೂ ಹಾಗೆಯೇ ಶಿವಕುಮಾರ ಗುರುಗಳಿಗೂ-ಬಾಲಕ ಶಿವಮೂರ್ತಿಗೂ ಗುರು-ಶಿಷ್ಯ ಸಂಬಂಧ ಏರ್ಪಡಿಸಿ,ಶಿಷ್ಯನಾಗಿ-ಗುರುವಾಗಿ-ಜಗದ್ಗುರುವಾಗಿ ಕ್ರಾಂತಿ ಮಾಡಿದ ಆಧ್ಯಾತ್ಮಿಕ ಘಟನೆಗಳಿವು.
ಸಿರಿಗೆರೆಯ ತರಳಬಾಳು ಬ್ರೃಹನ್ಮಠದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಸನಾಧೀಶ ಶ್ರೀ ೧೧೦೮ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು,ತಮ್ಮ ಪರಮಾರಾದ್ಯ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರಕಮಲಸಂಜಾತರು.ಪೂಜ್ಯರ ದ್ರೃಷ್ಟಿಕೋನಗಳೇ ಹಾಗೇ, ಜಾತಿ:ಮತ:ಪ್ರಾಂತ್ಯ:ಪ್ರದೇಶ ಮುಂತಾದ ಸಂಕುಚಿತತೆಗಳಿಗೆ ಮೀರಿದ ವಿಶಾಲವಾದ ಸತ್ ಚಿಂತನೆ ಅವರದು."ಬಿಸಿಲು ಬೆಳದಿಂಗಳು"ಎಂಬ ಅಂಕಣವನ್ನು ಸತತ 13 ವರ್ಷಗಳಿಗಿಂತಲೂ ಹಿಂದಿನಿಂದಲೂ ಪೂಜ್ಯ ಜಗದ್ಗುರುಗಳವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆಯುವ ಮೂಲಕ ಸಮಾಜದ ಏಳು-ಬೀಳುಗಳ ಬಗೆಗೆ ಸಮಾಜಕೆ ಬರಹ ಮುಖೇನಾ ತೋರಿಸುತ್ತಿದ್ದಾರೆ ಹಾಗೆಯೇ ತಿದ್ದುತ್ತಿದ್ದಾರೆ.ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ* ಯ ಲೀಪಗಳನು ಸರ್ಕಾರದ ಮಟ್ಟದಲ್ಲಿ ತೋರಿಸಿ,ರೈತರಿಗೆ ಅದರ ವಿಮೆಯು ಸಂಪೂರ್ಣವಾಗಿ ದೊರಕುವಂತೆ ಮಾಡಿದ ಆಧುನಿಕ ತಂತ್ರಜ್ಞಾನ ಬಲ್ಲವರು.ಕೆರೆಗಳಿಗೆ ನೀರು ಹರಿಸುವ ಕಾಯಕ* ದ " "ಆಧುನಿಕ ಭಗೀರಥ" ಪೂಜ್ಯರು.ಸಿರಿಗೆರೆಯಲ್ಲಿ ಪ್ರತೀ ಸೋಮವಾರ ನೊಂದವರ ಬಾಳಿಗೆ 'ಸತ್ಯ-ಅಹಿಂಸೆ-ನ್ಯಾಯ-ನೀತಿ ಗಳೆಂಬ ಮೌಲ್ಯಯುತ ತಕ್ಕಡಿಯ ಸದ್ಧರ್ಮ ನ್ಯಾಯಪೀಠ ದ ಮೂಲಕ ಸರ್ವರಿಗೂ ಸಮಪಾಲು;ಸರ್ವರಿಗೂ ಸಮಬಾಳು ಎಂಬ ನ್ಯಾಯದಾನ*ವಿಶ್ವ ಧರ್ಮ ಸಮ್ಮೇಳನಗಳಲಿ ಭಾರತದ ಸಂಸ್ಕೃತಿ-ಪರಂಪರೆಗಳ ಬಗೆಗೆ ಆಶೀರ್ವಚನವೀಯುವ ಮೌಲ್ಯಯುತ ಆಧ್ಯಾತ್ಮಿಕ ಹರಿಕಾರರು,ಏತ ನೀರಾವರಿ ಯೋಜನೆ ಗಳಿಗೆ ಸಾಕಾರ,
ಪೂಜ್ಯರ ಪರಿಸರ ಕಾಳಜಿ-ಕಳಕಳಿ ಯ ಕಾಯಕಗಳು,
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಡಿ ಕರ್ನಾಟಕದ 14 ಜಿಲ್ಲೆಗಳಲ್ಲಿ 260 ಶಿಕ್ಷಣ ಸಂಸ್ಥೆಗಳ ಮೂಲಕ ಪ್ರಸ್ತುತ ಸುಮಾರು 55000(ಐವತೈದು ಸಾವಿರ) ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡುತ್ತಿರುವ ಪೂಜ್ಯನೀಯರು,
ಶರಣ ಪರಂಪರೆಯ ಸಾವಿರಾರು ವಚನಗಳನು ಆಂಗ್ಲಭಾಷೆಗೆ ಭಾಷಾಂತರಮಾಡಿ ಬಸವಾದಿ ಶಿವಶರಣರ ಆದರ್ಶಗಳ ನಡೆ-ನುಡಿಗಳ ಮೌಲ್ಯಗಳನು ಬಿತ್ತುತ್ತಿರುವ ತತ್ವಪ್ರಚಾರಕರು-ಪ್ರಸಾರಕರು,
ಸಂಸ್ಕೃತದಲಿ ಅಗಾಧ ಪಾಂಡಿತ್ಯ ಹೊಂದಿದ್ದು, ೭೦ ದಶಕದಲ್ಲಿಯೇ ಕಾಶಿಯ ಬನಾರಸ್ ವಿಶ್ವವಿದ್ಯಾಲಯದ ಮೂಲಕ ಡಾಕ್ಟರೇಟ್ ಸಲ್ಲಿಕೆ ಯಾಗಿರುವ ಅದ್ವೀತಿಯ ಪ್ರೌಡಿಮೆ ಹೊಂದಿದ ಪೂಜನೀಯರು,
ದಿಟ್ಟ ಹೆಜ್ಜೆ:ದೀರ ಗುರು ಶ್ರೀ ಶಿವಕುಮಾರ ಗುರುಗಳ ಶಿಷ್ಯರಾಗಿ ಗುರುವಿಗಂಜಿ ಶಿಷ್ಯರು: ಶಿಷ್ಯರಿಗಂಜಿ ಗುರು ವು ಇರುವ ಮಠವು ಉದ್ದಾರವಗುತ್ತದೆ'. ಹಾಗೂ ಮಠವೆಂದರೆ ಸಿರಿಗೆರೆ ಮಠ:ಗುರುಗಳೆಂದರೆ ಸಿರಿಗೆರೆ ಮಠದ ಗುರುಗಳು: ಭಕ್ತರೆಂದರೆ ಸಿರಿಗೆರೆ ಮಠದ ಭಕ್ತರು ಎಂಬ ಮಾತನ್ನು ಮೌಲ್ಯಯುತವಾಗಿ ಜಗಜ್ಜಾಹೀರು ಮಾಡಿ, ಕಾಲ-ಕಾಯಕ-ಕಾಸು ಎಂಬ ಮಾತುಗಳಿಗೆ ಸಾರ್ಥಕ ಬೆಲೆ ದಯಪಾಲಿಸುತ್ತಿರುವ ಪೂಜ್ಯರು ಮತ್ತು ಬೇಡಲಾಗದು ಜಂಗಮ:ಬೇಡಿಸಿಕೊಳ್ಳಲಾಗದು ಭಕ್ತ ಎಂಬ ಶರಣ ಪರಂಪರೆಯ ಮೂಲಕ 'ದುಗ್ಗಾಣಿ ಮಠವಾಗಿದ್ದ ,ಸಿರಿಗೆರೆಯ ತರಳಬಾಳು ಮರವನ್ನು ದುಡಿಯುವ ಮಠ ವನ್ನಾಗಿ ಆರ್ಥಿಕವಾಗಿ ಸದ್ರೃಡವಾಗುವಂತೆ ಮಾಡುವಲ್ಲಿ ಅವಿರತವಾಗಿ ದೂರಾಲೋಚಿಸಿದ ಶರಣರು,
ಹಿರಿಯ ಗುರುಗಳ ಶಿಷ್ಯರಾಗಿ ಗುರುಗಳ ಆದರ್ಶಗಳನು ಯಥಾವತ್ತಿನಿಂದ ಕಾಯಾ-ವಾಚಾ-ಮನಸಾ ಅರ್ಥಪೂರ್ಣವಾಗಿ ಸಮಾಜಕೆ ಉಣಬಡಿಸುತ್ತಿರುವ ಜ್ಞಾನಯೋಗಿಗಳು ಪೂಜ್ಯ ಜಗದ್ಗುರುಗಳು.
ಮದ್ಯಪಾನವೊಂದು ದುಶ್ಚಟ ವೆಂಬುವ ಅನಾರೋಗ್ಯವನು ಹಲವು ದಶಕಗಳ ಹಿಂದೆಯೇ ಹೋರಾಟದ ಮೂಲಕ ಸರ್ಕಾರಗಳಿಗೆ ಮತ್ತು ದುಶ್ಚಟಗಳ ದಾಸರಿಗೆ ಚಾಟಿ ಬೀಸುವುದರ ಜೊತೆ ಸದ್ಬುದ್ದಿಯ ಸುಗಮ ದಾರಿ ಯ ತೋರಿ, ಇಂದಿಗೂ ಈ ಮದ್ಯಪಾನದ ಬಗೆಗೆ ಹೋರಾಟದ ಶಾಂತಿಯ ಕ್ರಾಂತಿಯ ಮಾಡುತ್ತಿರುವ ಸಮಾಜಮುಖಿ ಚಿಂತಕರು,
ಧರ್ಮದ ಹಾದಿಯ ಮೂಲಕ ರಾಜಕೀಯ ಮಾಡುತ್ತಿರುವ ಜನಾನುರಾಗಿಗಳು ನಮ್ಮ ಗುರುವರ್ಯರು ಮತ್ತು ತರಳಬಾಳು ಗುರುಪರಂಪರೆ..
-- ಈ ರೀತಿ ಇತರರಿಗೆ ಮಾದರಿಯಾದ ತರಳಬಾಳು ಮಠವನ್ನು ಪಡೆದ, ಜಾತ್ಯಾತೀತ -ಧರ್ಮಾತೀತ ಸಂಕಲ್ಪದ ಹೆಜ್ಜೆ ಹಾಕಿರುವ ಸಂತರನು ಹೊಂದಿರುವ ತರಳಬಾಳು ಗುರು ಪರಂಪರೆ ಯು ನಮ್ಮದೆನ್ನಲು ಸದಾ ಹೆಮ್ಮೆಯ ಅಭಿಮಾನ ನಮ್ಮದು..ಸಮಾಜದ ಎಲ್ಲ ಬಂಧು ಬಾಂಧವರಿಗೆ ಹಾಗೂಇತರ ಸ್ವಾಮೀಜಿಗಳಿಗೆ ದಾರಿದೀಪ-ಜ್ಞಾನಚೇತನ-ಮಾರ್ಗದರ್ಶನ ನೀಡುವ ನಮ್ಮ ಗುರುಗಳಿಗೆ ಭಕ್ತಿಪೂರ್ವಕ ದೀರ್ಘದಂಡ ನಮಸ್ಕಾರಗಳು..
ಬಹುಶಃ ನಮ್ಮ ಅಭಿಪ್ರಾಯ-ಅನಿಸಿಕೆ-ಆಶಯಗಳಲಿ------- ಇವುಗಳನು ಅರಿಯದವರು ಸಿರಿಗೆರೆಯ ತರಳಬಾಳು ಬ್ರೃಹನ್ಮಠದ ಭಕ್ತರಾಗಲು,ಪೂಜ್ಯರ ಶಿಷ್ಯಾರಾಗಲು ಅರ್ಥಪೂರ್ಣವಾಗಿ-ಅಪ್ಪಟತನದಿಂದ ಸಾದ್ಯವಿಲ್ಲ ಎಂಬುದು ತರಳಬಾಳು ಬ್ರೃಹನ್ಮಠದ ಲಕ್ಷಾಂತರ ಶಿಷ್ಯಾಭಿಮಾನಿಯಲ್ಲೊಬ್ಬನಾದ ಪ್ರವೀಣ್ ಕುಮಾರ್ ಎ.ಆರ್.ಅಧ್ಯಾಪಕರು ಬಿ.ದುರ್ಗ ರವರ ನನ್ನದೊಂದು ವೈಯಕ್ತಿಕ ಅಭಿಲಾಷೆಯಾಗಿದೆ....
ಶರಣ ಬಂಧುಗಳೇ, ಇವುಗಳೇ ಸಾಮಾಜಿಕ ಚಿಂತನೆ,ಭಕ್ತರ ಹಿತ,ಜಾತ್ಯಾತೀತ ಕಾಯಕಗಳು,ಮೌಲ್ಯಯುತ ಚಟುವಟಿಕೆಗಳು ಎಂದರೆ...ಕೇವಲ ಧೂಪ-ದೀಪ,ಕಾಣಿಕೆ-ಪಾದಪೂಜೆ,ಆಶೀರ್ವಾದ-ಆಶೀರ್ವಚನಗಳ ಸಾಂಕೇತಿಕ ಕಾರ್ಯಗಳನು ಹೊರತುಪಡಿಸಿ, ಭಕ್ತರ ತನು-ಮನವನು ಅರಿತು, ಭಕ್ತರ ಕಾಯಾ-ವಾಚಾ-ಮನಸಾ ಅರಿತು,ಅವರ ಮನ-ಧ್ವನಿಗಳಲಿ ಪೂಜ್ಯತೆಯಿಂದ ಬೆರೆತವರು ನಮ್ಮ ಗುರುಗಳ ಕಾರ್ಯಗಳೇ ತಾನೇ? ಬಂಧುಗಳೇ....
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬಾಲಕರಾಗಿದ್ದಾಗ, ಅವರ ವಚನ ಕಂಠಸಿರಿಯೇ ಸಿರಿಗೆರೆಯ ಮಠ,ಓದು,ಅಭ್ಯಾಸ,ಗುರು,ಜಗದ್ಗುರುಗಳಾಗಿ, ಅಂತರಾಷ್ಟ್ರೀಯ ತಂತ್ರಜ್ಞಾನ, ಸಾಮಾಜಿಕ ಚಳುವಳಿಗಳು, ಮದ್ಯಪಾನ ವಿರೋದಿ ಕಾರ್ಯಗಳು, ಕೆರೆಗೆ ನೀರು ಹರಿಸುವ ಕಾಯಕಗಳು,ನೆಲ-ಜಲ,ಬದುಕು-ಬರಹ,ದೇಶ-ಭಾಷೆ,ನಾಡು-ನುಡಿ,ಸಾಹಿತ್ಯ-ಸಂಸ್ಕೃತಿ, ಇತಿಹಾಸ-ಕಲೆಗಳ ಬಗೆಗೆ ಸಿರಿಗೆರೆಯ ಮಠಕೆ ಹೊಸ ಭಾಷ್ಯದ ಮನ್ವಂತರವ ಬರೆಯಲು ಸಾದ್ಯವಾಯಿತು.. ಸಿರಿಗೆರೆಯ ಪೂಜ್ಯರು ಅಂದಿನ ವಚನದ ಕಂಠಸಿರಿಯ ಮೂಲಕವೇ ಸಿರಿಗೆರೆಯ ಲಿಂಗೈಕ್ಯ ಶ್ರೀ ಶಿವಕುಮಾರ ಗುರುಗಳಿಗೆ ಪರಿಚಯವಾದದ್ದು ಎಂಬ ಬಗೆಗಿನ ದ್ರೃಶ್ಯ..-ಬರಹ ಪ್ರಸಾರದ ಸ್ಮರಣೆ-ಶರಣ ಪ್ರವೀಣ್ ಕುಮಾರ್.ಎ.ಆರ್.ಅಧ್ಯಾಪಕರು. ಬಿ.ದುರ್ಗ.

Пікірлер: 16

  • @modi8278
    @modi8278 Жыл бұрын

    ಜೈ ತರಳಬಾಳು ಜಗದ್ಗುರು ಶ್ರೀ👏👏👏👏

  • @darshandp8762
    @darshandp8762 Жыл бұрын

    ಜೈ ತರಳಬಾಳು🚩🚩

  • @gurudevanagavi8877
    @gurudevanagavi88772 жыл бұрын

    " ನೀವು ಸಣ್ಣವರು ಇದ್ದಾಗ ಕೂಡ ಸಂಗೀತದ ಬಗ್ಗೆ ಆಸಕ್ತಿ ಮುಂದೆ ಈ ಮಠಕ್ಕೆ ಪಿತದಿಪತಿಯಗಿದ್ದು ಒಳ್ಳೆಯದೇ ಗುರುಗಳೇ ನಿಮ್ಮನ್ನು ಪಡೆದ ನಾವುಗಳೇ ಧನ್ಯರು " 💐🙏

  • @gurudevanagavi8877
    @gurudevanagavi88772 жыл бұрын

    " ನಿಮ್ಮ ತರಳಬಾಳು ಹುಣ್ಣಿಮೆ ಅಂತೂ ಅದ್ಭುತವಾಗಿ ಮೂಡಿಬಂದಿದೆ ಈ ಕಾರ್ಯಕ್ರಮವನ್ನು ನೋಡಿದ ಭಕ್ತರ ಜೀವನ ಪವನವಾಗುತ್ತದೆ ಈ ಕಾರ್ಯಕ್ರವನ್ನು ಆಯೋಜಿಸುತ್ತಿರುವ ನಿಮಗೆ ಅನಂತ್ ಕೋಟಿ ಶಿರ ಸಾಷ್ಟಾಂಗ ನಮಸ್ಕಾರ ಗಳು ರಿ ಬುದ್ಧಿ " 💐💐🙏🙏

  • @mahadevaswamymp8047

    @mahadevaswamymp8047

    9 ай бұрын

    0:59 1:02

  • @rahulrakeshgn2830
    @rahulrakeshgn283010 ай бұрын

    💐🙏🌼🚩💐

  • @user-kn7zf3ce9y
    @user-kn7zf3ce9y4 ай бұрын

    ಬಾಳು ಬಾಳು ತರಳಬಾಳು 🌏👑🧡

  • @praveentaralabalu9052

    @praveentaralabalu9052

    4 ай бұрын

    ನಮಸ್ಕಾರಗಳು. ತಮಗೆ ಹೃದಯಪೂರ್ವಕ ಧನ್ಯವಾದಗಳು. ಶರಣು ಶರಣಾರ್ಥಿಗಳು.

  • @HanumanthaHanumantha-ql3kz
    @HanumanthaHanumantha-ql3kz2 жыл бұрын

    🙏🙏🙏🙏🙏

  • @srinivasaks3987
    @srinivasaks39878 ай бұрын

    🙏

  • @NagarajNayak-jd6ys
    @NagarajNayak-jd6ys7 ай бұрын

    ಗುರು ಎಂಧರೆ ಈಗಿರ್ಬೇಕು

  • @NagarajaB-bf7rp
    @NagarajaB-bf7rp Жыл бұрын

    BBM nagaraj

  • @VidyaBP
    @VidyaBPАй бұрын

    Please Share This Full episode link we want to watch this full episode

  • @dr.shiddalingeshwarayyavas198
    @dr.shiddalingeshwarayyavas1983 жыл бұрын

    Sirigere srigalige jayavagali

  • @NagarajaB-bf7rp
    @NagarajaB-bf7rp Жыл бұрын

    BBM nagaraj

Келесі