ಗೃಹಭಂಗ 1 - ಎಸ್.ಎಲ್.ಭೈರಪ್ಪ || Ghrahabhanga 1 - S.L.Bhyrappa

ಧ್ವನಿ : ಶ್ರೀಮತಿ ಸುಬ್ಬಲಕ್ಷ್ಮೀ
ಗೃಹಭಂಗ.
ಪುಸ್ತಕ ಪರಿಚಯ :ಶ್ರೀಮತಿ ಶಾಂತಾ ಪಾಟೀಲ್.
ಬೇಜವಾಬ್ದಾರಿ ಪತಿ,ಗಯ್ಯಾಳಿ ಅತ್ತೆ ಸಂಸ್ಕಾರವಿಲ್ಲದ ಜೀವನಕ್ರಮ ಹೇಗೆ
ಒಂದು ಮನೆತನವನ್ನೇ ಅಧಃಪತನಕ್ಕೆ ನೂಕುತ್ತೆ ಅನ್ನೋದು ತಿಳಿಯಬೇಕಾದ್ರೆ ಎಸ್.ಎಲ್.ಭೈರಪ್ಪನವರ ಗೃಹಭಂಗ ಓದಿ.
ಹೆಣ್ಮಕ್ಕಳನ್ನು ಯಾವುದಾದರೂ ಮನೆಗೆ ಸೊಸೆಯಾಗಿ ಕಳಿಸುವ ಮೊದಲು ಮತ್ತು ಮನೆಗೆ ಸೊಸೆಯಾಗಿ ತರುವ ಮೊದಲು ಆ ಕುಟುಂಬದ ಪೂರ್ವಾಪರ ತಿಳಿಯದೇ ಮದುವೆ ಮಾಡಿದರೆ ಸಂಸಾರ ಹೇಗೆ ಅವನತಿ ಕಾಣ್ತಾವೆ ಎನ್ನುವುದಕ್ಕೆ ಈ ಕಾದಂಬರಿಯೇ ಸಾಕ್ಷಿ.
ನಂಜಮ್ಮ:
ಶಾನುಭೋಗ ಗಂಗಮ್ಮನ ಮನೆಗೆ ಹಿರಿಸೊಸೆಯಾಗಿ ಬರುವ ನಂಜಮ್ಮಬೇಜವಾಬ್ದಾರಿ‌
ತಿರಸೆಟ್ಟಿ ಚೆನ್ನಿಗಾರಯನಂತ ಗಂಡನನ್ನು ತಿದ್ದಲಾಗದೇ ಅವನ ಶಾನುಭೋಗಿಕೆ ಲೆಕ್ಕ ತಾನೇ ಬರೆದು ತನ್ನ ಮಕ್ಕಳಿಗಾಗಿ ಗಟ್ಟಿತನಕ್ಕೆ ಬಿದ್ದು ಸಮಸ್ಯೆಗಳನ್ನು ಎದುರಿಸುವ ಪರಿ ಎಂತವರನ್ನೂ ಕ್ಷಣ ವಿಷಾದಭಾವಕ್ಕೆ ತಳ್ಳುತ್ತೆ.
ಕೊನೆಗೆ ತನ್ನ ಬೆಳೆದ ಎರಡು ಮಕ್ಕಳು (ಕಷ್ಟಪಟ್ಟು ಮದುವೆ ಮಾಡಿಕೊಟ್ಟ ಪಾರ್ವತಿ,ಮತ್ತು ಬುದ್ದಿವಂತ ಹಿರಿಮಗ ರಾಮಣ್ಣ)ಪ್ಲೇಗ್ ಮಹಾಮಾರಿಗೆ ತುತ್ತಾದಾಗ ಅವಳು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕಿರಿಯ ಮಗನಿಗಾಗಿ ಬದುಕಬೇಕೆಂದು ಹಿಂತುರಿಗಿ ಬಂದು ಸ್ವಂತ ಮನೆ ಮಾಡಿಕೊಂಡು ಜೀವಿಸಬೇಕೆನ್ನುವಾಗ ಅವಳು ಪ್ಳೇಗ್ ಗೆ ತುತ್ತಾಗಿ ಸಾಯುವುದು ದುರಂತ.
ಕಾದಂಬರಿಯಲ್ಲಿ ಬರುವ ಇನ್ನೊಂದು ಪಾತ್ರ ನರಸಿ:
ಇವಳು ವೃತ್ತಿಯಲ್ಲಿ ಬೆಲೆವೆಣ್ಣು ಅನ್ನಿಸಿಕೊಂಡರು ತನ್ನ ಮಾನವೀಯತೆ ಮನಸಿನಿಂದ ಮನದಿ ನಿಲ್ಲುತ್ತಾಳೆ.
ಹಾಗೆಯೇ ನಂಜಮ್ಮಳ ಮಗಳು ಪಾರ್ವತಿಯನ್ನು ಮದುವೆಯಾಗುವ ಸೂರ್ಯನಾರಾಯಣನ ಪಾತ್ರ ಮತ್ತು ಶಾಲೆಯ ಮೇಸ್ಟ್ರು ವೆಂಕಟೇಶಯ್ಯನೋರು,
ಈಶ್ವರ ಗುಡಿಯ ಮಾದೇವಯ್ಯನೋರು,ಕುರುಬರಹಳ್ಳಿಯ ಗುಂಡೇಗೌಡ ಮುಂತಾದವರು ಗಂಡಸರೆಲ್ಲರೂ ಕೆಟ್ಟವರಿರುವುದಿಲ್ಲ ಎನುವುದಕ್ಕೆ ನಿದರ್ಶನವಾಗ್ತಾರೆ.
ಗಂಡನೇ ಸರಿಯಿಲ್ಲ ನಾನೇನು ಮಾಡ್ಲಿ ಎನುವಂತ ಗಂಗಮ್ಮನ ಕಿರಿಯ ಮಗ ಅಪ್ಪಣ್ಣಯ್ಯನ ಹೆಂಡ್ತಿ
ದಾರಿ ತಪ್ಪಿ ಹಾದರಕ್ಕಿಳಿಯೋದು ಗೃಹಭಂಗಕ್ಕೆ(ಅವನತಿ) ಉದಾಹರಣೆ.
ಇವುಗಳಲ್ಲದೆ ನಂಜಮ್ಮನ ತಂದೆ ಕಂಠಿ ಜೋಯ್ಸರು,ಅಣ್ಣಯ್ಯ ಜೋಯ್ಸರ ವರ್ತನೆ ಧರ್ಮ,ಸಂಸ್ಕಾರಗಳ ಇನ್ನೊಂದು ಮುಖವನ್ನು ಪರಿಚಯಿಸುತ್ತವೆ.
ನಂಜಮ್ಮನ ಅಜ್ಜಿ ಅಕ್ಕಮ್ಮ,ಅಣ್ಣ ಕಲ್ಲೇಶ ಅವನ ಹೆಂಡತಿ ಕಮಲಿ,ರೇವಣ ಶೆಟ್ಟಿ-ಸರ್ವಕ್ಕ,
ಪಟೇಲ ಶಿವರಾಮೇಗೌಡ,ಶಿವಲಿಂಗ,ಕುಳುವಾಡಿ
ಇತ್ಯಾದಿ ಪಾತ್ರಗಳು ಬದುಕಿನ ಮಜಲನ್ನು ಅನಾವರಣಗೊಳಿಸುತ್ತವೆ.
ಕಾದಂಬರಿ ಅಂತ್ಯದಲ್ಲಿ ತಾಯಿ ಇಲ್ಲದ ತಬ್ಬಲಿ ಮಗು ವಿಶ್ವ( ನಂಜಮ್ಮನ ಕೊನೆಯ ಮಗ) ನನ್ನು (ಗಂಡಜ್ಜಿ,ತಂದೆ,ಚಿಕ್ಕಪ್ಪ,ಹೆಣ್ತಾತ,ಸೋದರಮಾವ ಎಲ್ಲರೂ ಇದ್ದು,)
ಅಯ್ನೋರು ಒಂದು ಗಟ್ಟಿ ನಿರ್ಧಾರಕ್ಕೆ ಬಂದು ತಮ್ಮೊಡನೆ ಕರೆದೊಯ್ಯುವ ಸನ್ನಿವೇಶ ಎಂತಹ ಕಲ್ಲೆದೆಯವರ ಕಣ್ಣಾಲಿ ತುಂಬಿಸುವುದು ಸುಳ್ಳಲ್ಲ!
ಬರಹದಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.
ಸರಸ್ವತಿ ಸಮ್ಮಾನ್ ಭೈರಪ್ಪನವರಿಗೆ ನಮಿಸುತ್ತಾ!!!🙏🙏🙏🙏

Пікірлер: 23

  • @-banniodona8187
    @-banniodona81873 жыл бұрын

    ಧ್ವನಿ : ಶ್ರೀಮತಿ ಸುಬ್ಬಲಕ್ಷ್ಮೀ ಗೃಹಭಂಗ. ಪುಸ್ತಕ ಪರಿಚಯ :ಶ್ರೀಮತಿ ಶಾಂತಾ ಪಾಟೀಲ್. ಬೇಜವಾಬ್ದಾರಿ ಪತಿ,ಗಯ್ಯಾಳಿ ಅತ್ತೆ ಸಂಸ್ಕಾರವಿಲ್ಲದ ಜೀವನಕ್ರಮ ಹೇಗೆ ಒಂದು ಮನೆತನವನ್ನೇ ಅಧಃಪತನಕ್ಕೆ ನೂಕುತ್ತೆ ಅನ್ನೋದು ತಿಳಿಯಬೇಕಾದ್ರೆ ಎಸ್.ಎಲ್.ಭೈರಪ್ಪನವರ ಗೃಹಭಂಗ ಓದಿ. ಹೆಣ್ಮಕ್ಕಳನ್ನು ಯಾವುದಾದರೂ ಮನೆಗೆ ಸೊಸೆಯಾಗಿ ಕಳಿಸುವ ಮೊದಲು ಮತ್ತು ಮನೆಗೆ ಸೊಸೆಯಾಗಿ ತರುವ ಮೊದಲು ಆ ಕುಟುಂಬದ ಪೂರ್ವಾಪರ ತಿಳಿಯದೇ ಮದುವೆ ಮಾಡಿದರೆ ಸಂಸಾರ ಹೇಗೆ ಅವನತಿ ಕಾಣ್ತಾವೆ ಎನ್ನುವುದಕ್ಕೆ ಈ ಕಾದಂಬರಿಯೇ ಸಾಕ್ಷಿ. ನಂಜಮ್ಮ: ಶಾನುಭೋಗ ಗಂಗಮ್ಮನ ಮನೆಗೆ ಹಿರಿಸೊಸೆಯಾಗಿ ಬರುವ ನಂಜಮ್ಮಬೇಜವಾಬ್ದಾರಿ‌ ತಿರಸೆಟ್ಟಿ ಚೆನ್ನಿಗಾರಯನಂತ ಗಂಡನನ್ನು ತಿದ್ದಲಾಗದೇ ಅವನ ಶಾನುಭೋಗಿಕೆ ಲೆಕ್ಕ ತಾನೇ ಬರೆದು ತನ್ನ ಮಕ್ಕಳಿಗಾಗಿ ಗಟ್ಟಿತನಕ್ಕೆ ಬಿದ್ದು ಸಮಸ್ಯೆಗಳನ್ನು ಎದುರಿಸುವ ಪರಿ ಎಂತವರನ್ನೂ ಕ್ಷಣ ವಿಷಾದಭಾವಕ್ಕೆ ತಳ್ಳುತ್ತೆ. ಕೊನೆಗೆ ತನ್ನ ಬೆಳೆದ ಎರಡು ಮಕ್ಕಳು (ಕಷ್ಟಪಟ್ಟು ಮದುವೆ ಮಾಡಿಕೊಟ್ಟ ಪಾರ್ವತಿ,ಮತ್ತು ಬುದ್ದಿವಂತ ಹಿರಿಮಗ ರಾಮಣ್ಣ)ಪ್ಲೇಗ್ ಮಹಾಮಾರಿಗೆ ತುತ್ತಾದಾಗ ಅವಳು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕಿರಿಯ ಮಗನಿಗಾಗಿ ಬದುಕಬೇಕೆಂದು ಹಿಂತುರಿಗಿ ಬಂದು ಸ್ವಂತ ಮನೆ ಮಾಡಿಕೊಂಡು ಜೀವಿಸಬೇಕೆನ್ನುವಾಗ ಅವಳು ಪ್ಳೇಗ್ ಗೆ ತುತ್ತಾಗಿ ಸಾಯುವುದು ದುರಂತ. ಕಾದಂಬರಿಯಲ್ಲಿ ಬರುವ ಇನ್ನೊಂದು ಪಾತ್ರ ನರಸಿ: ಇವಳು ವೃತ್ತಿಯಲ್ಲಿ ಬೆಲೆವೆಣ್ಣು ಅನ್ನಿಸಿಕೊಂಡರು ತನ್ನ ಮಾನವೀಯತೆ ಮನಸಿನಿಂದ ಮನದಿ ನಿಲ್ಲುತ್ತಾಳೆ. ಹಾಗೆಯೇ ನಂಜಮ್ಮಳ ಮಗಳು ಪಾರ್ವತಿಯನ್ನು ಮದುವೆಯಾಗುವ ಸೂರ್ಯನಾರಾಯಣನ ಪಾತ್ರ ಮತ್ತು ಶಾಲೆಯ ಮೇಸ್ಟ್ರು ವೆಂಕಟೇಶಯ್ಯನೋರು, ಈಶ್ವರ ಗುಡಿಯ ಮಾದೇವಯ್ಯನೋರು,ಕುರುಬರಹಳ್ಳಿಯ ಗುಂಡೇಗೌಡ ಮುಂತಾದವರು ಗಂಡಸರೆಲ್ಲರೂ ಕೆಟ್ಟವರಿರುವುದಿಲ್ಲ ಎನುವುದಕ್ಕೆ ನಿದರ್ಶನವಾಗ್ತಾರೆ. ಗಂಡನೇ ಸರಿಯಿಲ್ಲ ನಾನೇನು ಮಾಡ್ಲಿ ಎನುವಂತ ಗಂಗಮ್ಮನ ಕಿರಿಯ ಮಗ ಅಪ್ಪಣ್ಣಯ್ಯನ ಹೆಂಡ್ತಿ ದಾರಿ ತಪ್ಪಿ ಹಾದರಕ್ಕಿಳಿಯೋದು ಗೃಹಭಂಗಕ್ಕೆ(ಅವನತಿ) ಉದಾಹರಣೆ. ಇವುಗಳಲ್ಲದೆ ನಂಜಮ್ಮನ ತಂದೆ ಕಂಠಿ ಜೋಯ್ಸರು,ಅಣ್ಣಯ್ಯ ಜೋಯ್ಸರ ವರ್ತನೆ ಧರ್ಮ,ಸಂಸ್ಕಾರಗಳ ಇನ್ನೊಂದು ಮುಖವನ್ನು ಪರಿಚಯಿಸುತ್ತವೆ. ನಂಜಮ್ಮನ ಅಜ್ಜಿ ಅಕ್ಕಮ್ಮ,ಅಣ್ಣ ಕಲ್ಲೇಶ ಅವನ ಹೆಂಡತಿ ಕಮಲಿ,ರೇವಣ ಶೆಟ್ಟಿ-ಸರ್ವಕ್ಕ, ಪಟೇಲ ಶಿವರಾಮೇಗೌಡ,ಶಿವಲಿಂಗ,ಕುಳುವಾಡಿ ಇತ್ಯಾದಿ ಪಾತ್ರಗಳು ಬದುಕಿನ ಮಜಲನ್ನು ಅನಾವರಣಗೊಳಿಸುತ್ತವೆ. ಕಾದಂಬರಿ ಅಂತ್ಯದಲ್ಲಿ ತಾಯಿ ಇಲ್ಲದ ತಬ್ಬಲಿ ಮಗು ವಿಶ್ವ( ನಂಜಮ್ಮನ ಕೊನೆಯ ಮಗ) ನನ್ನು (ಗಂಡಜ್ಜಿ,ತಂದೆ,ಚಿಕ್ಕಪ್ಪ,ಹೆಣ್ತಾತ,ಸೋದರಮಾವ ಎಲ್ಲರೂ ಇದ್ದು,) ಅಯ್ನೋರು ಒಂದು ಗಟ್ಟಿ ನಿರ್ಧಾರಕ್ಕೆ ಬಂದು ತಮ್ಮೊಡನೆ ಕರೆದೊಯ್ಯುವ ಸನ್ನಿವೇಶ ಎಂತಹ ಕಲ್ಲೆದೆಯವರ ಕಣ್ಣಾಲಿ ತುಂಬಿಸುವುದು ಸುಳ್ಳಲ್ಲ! ಬರಹದಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ. ಸರಸ್ವತಿ ಸಮ್ಮಾನ್ ಭೈರಪ್ಪನವರಿಗೆ ನಮಿಸುತ್ತಾ!!!🙏🙏🙏🙏

  • @yogeshss7857

    @yogeshss7857

    2 жыл бұрын

    ಎಸ್ ಎಲ್ ಭೈರಪ್ಪನವರ ಬೇರೆ ಪುಸ್ತಕಗಳನ್ನು ಓದಿ.

  • @guruprasanna9831

    @guruprasanna9831

    Жыл бұрын

    Manassinalle odikoLLi please.

  • @bhyrav131
    @bhyrav1313 жыл бұрын

    ಕರ್ವಾಲೋ ಕಾದಂಬರಿ ಯನ್ನ ಓದಿದ್ರಲ್ಲ ಉಮೇಶ್ ಅವರಿಂದ ಓದಿಸಿ

  • @praveendm998
    @praveendm9982 жыл бұрын

    ಕರ್ವಾಲೋ ವಿವರಣೆ ಎಷ್ಟು ಅದ್ಭುತವಾಗಿದೆ, ಅವರ ಧ್ವನಿಯಲ್ಲಿ ಕೇಳಿದ ಮೇಲೆ ನಾನು ಉಳಿದ ಕೃತಿಗಳ ವಿವರಣೆ ಕೇಳಿದಾಗ ತುಂಬಾ ನಿರಾಶೆಯಾಯಿತು.

  • @zeroteamproduction9327
    @zeroteamproduction93272 жыл бұрын

    ಕರ್ವಾಲೋ ಕಾದಂಬರಿಯ ರೀತಿ ಹೇಳಿದ್ರೆ ಕೇಳುಗರು ಕಾದಂಬರಿ ಪೂರ್ತಿ ಕೇಳುತ್ತಾರೆ

  • @subbalakshmihk8316
    @subbalakshmihk83162 жыл бұрын

    ಇದು ತುಂಬಾ ಮೊದಲು ಓದಿದ್ದರಿಂದ ವೇಗವಾಗಿದೆ. ಇತ್ತೀಚೆಗೆ ಓ್ಇರುವ ದುರ್ಗಾಸ್ತಮಾನ, ಜಲಪಾತ, ಅಂಚು ಮುಂತಾದವನ್ನು ಕೇಳಿ

  • @user-el8xt2we2t
    @user-el8xt2we2t3 жыл бұрын

    ಕಥೆ ಹೇಳುವ ರೀತಿ ಸರಿಯಿಲ್ಲ ನಿಧಾನವಾಗಿ ಹೇಳಿ. ಕರ್ವಾಲೋ ತುಂಬಾ ಚೆನ್ನಾಗಿತ್ತು, ಅವರಿಂದ ಹೇಳಿಸುವ ಪ್ರಯತ್ನ ಮಾಡಿ...

  • @jnani85sow
    @jnani85sow2 жыл бұрын

    ಯಾವ ಸ್ಕೂಲ್ ತಾಯೀ ನೀನು ಓದಿದ್ದು ಕರ್ಮ

  • @kiranyadahalli647

    @kiranyadahalli647

    2 жыл бұрын

    😂😂😂😂

  • @supriyanaik1020
    @supriyanaik10203 жыл бұрын

    Umesh sir nivu oduva shaili adbuta.. Dayavittu e kadambariyannu nive heli

  • @vinayakyalasangi3140
    @vinayakyalasangi31403 жыл бұрын

    Kathe oduvudalla ..neat agi helbeku.. Ivru beda... Umesh sir na karsii please

  • @dileepgowda6828
    @dileepgowda6828 Жыл бұрын

    ಗೃಹಭಂಗ ಕೆಳ್ಳಿದ್ದು 0.30 Sec ಅಷ್ಟೇ ಇರ್ಬೋದು. ಉಮೇಶ್ ಸರ್ ತರ ಬಹುತೇಕ ಕಥೆಯ ನಿರೂಪಣೆ ಬೇರೆ ಅವರ್ಗೆ ಬರೋದು ತುಂಬಾ ಕಷ್ಟ.

  • @swathis-lf7gt
    @swathis-lf7gt5 ай бұрын

    Thumba fast aithu

  • @MallayyaBNP
    @MallayyaBNP2 жыл бұрын

    TQ madam Dani Kadambari oduva reeti thumb's channagide mam

  • @viratkohliaddicts9412
    @viratkohliaddicts9412 Жыл бұрын

    Akka ಸ್ಪೀಡ್ ಆಗಿ ಒದೋದ್ರದಲ್ಲಿ 1St ಬರ್ತಾಳೆ😂😂😂

  • @anushab.a4583
    @anushab.a45832 жыл бұрын

    ಇದು ತುಂಬ ಉತ್ತಮವಾದ ಪುಸ್ತಕ ಎಂದು ಕೇಳಿದ್ದೆ, ಆದರೆ ಕ್ಷಮಿಸಿ ಓದುವ ರೀತಿ ಕೇಳಿ ನನಗೆ ಕೇಳುವ ಇಚ್ಚೆಯೇ ಹೋಯಿತು😐

  • @RAMESHR-xm7jf
    @RAMESHR-xm7jf3 жыл бұрын

    ನೀರಸ,ಭಾವರಹಿತ,ಯಾರಿಗೂ ಅರ್ಥ ಮಾಡಿ ಕೊಳ್ಳಲು ಅವಕಾಶ ನೀಡದೆ ವೇಗವಾಗಿ ಓದಿ ಕೇಳುಗರಿಗೆ ಬೇಸರವನ್ನು ಉಂಟುಮಾಡಿದಿರಿ., ,

  • @ravitravi2927
    @ravitravi29272 жыл бұрын

    Karvalo kadambari Umesh sir kaile helsi

  • @shivayogib7174
    @shivayogib71743 жыл бұрын

    This lady is just reading book rather than feeding emotions to the story. We don't need this lady rendering any more novels. She just kills the author's beautiful novel and listeners optimism

  • @NOTHINGONTHISCHANEL-69
    @NOTHINGONTHISCHANEL-695 ай бұрын

    paper odid haage odod alla ododu ond kale madam adanna rudi madkond odi

  • @guruprasanna9831
    @guruprasanna9831 Жыл бұрын

    Usiru bidade, eshtu putagaLanna odakke sadhya anta omme odi torisi. Odidara, kathe heLidahage irabeku. Aaga keLabeku annisutte. Illadiddare, keLoruu kooda pustaka ittukodu enu odutiddira anta check mafikobeku.

  • @rashmipriya6775
    @rashmipriya6775 Жыл бұрын

    Dayavittu Mike use madi sound problem ede

Келесі