Carbon fibre telescopic poles / Coconut/Arecanut Harvesting Pole | Coconut/Arecanut Plucking Tool

ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ರೈತರ ಮನೆ ಬಾಗಿಲಿಗೆ : ಹರೀಶ್ ಕಾರಿಂಜ.
ನಾವೂರು : ನಾವೂರು ಗ್ರಾಮದ ರೈತ ಬಂಧುಗಳಿಗೆ ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಮತ್ತು ನವೋದಯ ಯುವಕ ಮಂಡಲ (ರಿ) ನಾವೂರು ಇವರ ಜಂಟಿ ಸಹಬಾಗಿತ್ವದಲ್ಲಿ ಕೃಷಿ ಉಪಕರಣಗಳ ಮಾಹಿತಿ ಹಾಗೂ ಕಾರ್ಬನ್ ಪೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮಾಡಲು ಮತ್ತು ಮದ್ದು ಸಿಂಪಡಿಸಲುವ ಬಗ್ಗೆ ದಿನಾಂಕ 26.06.2022 ರಂದು ಬೆಳಿಗ್ಗೆ 10.00 ಗಂಟೆಗೆ ಧರ್ಣಪ್ಪ ಮೂಲ್ಯ ಕಾಯರ್ದಡಿ (ಕಾರಿಂಜ) ಇಲ್ಲಿ ತರಬೇತಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನವೋದಯ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಹರೀಶ್ ಕಾರಿಂಜ ವಹಿಸಿ, ಇವತ್ತು ಬೆಳ್ತಂಗಡಿಯ ಮುಂಚೂಣಿ ಕೃಷಿ ಉಪಕರಣ ಮಾರಾಟ ಸಂಸ್ಥೆಯಾದ ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಇವರು ಕೃಷಿಕರ ಮನೆ ಬಾಗಿಲಿಗೆ ಬಂದು ತರಬೇತಿ ನೀಡಿದ್ದು ಗ್ರಾಮದ ಇತಿಹಾಸದಲ್ಲಿ ಪ್ರಥಮವಾಗಿದೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗಣೇಶ್ ಗೌಡ ನೆಲ್ಲಿಪಲ್ಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ, ಆಧುನಿಕ ಯಂತ್ರೋಪಕರಣವನ್ನು ರೈತರು ಬಳಸಿಕೊಂಡು ಕೃಷಿಯಲ್ಲಿ ಸ್ವಾವಲಂಬನೆ ಪಡೆದುಕೊಳ್ಳಬೇಕೆಂದರು. ಮುಖ್ಯ ಅತಿಥಿಯಾಗಿ ಬಂಗಾಡಿ ಸಿ ಎ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಹರೀಶ್ ಸಾಲ್ಯಾನ್ ಮೋರ್ತಾಜೆಯವರು ಮಾತನಾಡುತ್ತ ಕೃಷಿಗೆ ಸಂಭಂದಿಸಿದ ಉಪಕರಣ ಖರೀದಿ ಮಾಡಲು ರೈತರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಿ ಸಹಕರಿಸಲಾಗುವುದು ಎಂದರು. ವೇದಿಕೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರೂ, ಪ್ರಗತಿಪರ ಕೃಷಿಕರಾದ ಶ್ರೀ ಗಣೇಶ್ ಕಣಾಲ್ ಮತ್ತು ಲ | ಧರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು. ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮಾಲಕರಾದ ಶ್ರೀ ರಾಕೇಶ್ ಹೆಗ್ಡೆಯವರು ಕೃಷಿಕರಿಗೆ ಮಾಹಿತಿ ತರಬೇತಿ ನೀಡಿದರು. ಪ್ರಸ್ತುತ ವರ್ಷದಲ್ಲಿ ಕೃಷಿ ಇಲಾಖೆಯಿಂದ ಸುಮಾರು 15.00 ಲಕ್ಷಕ್ಕೂ ಮಿಕ್ಕಿದ ಸಬ್ಸಿಡಿ ಸೌಲಭ್ಯವನ್ನು ಕೃಷಿಕರಿಗೆ ಒದಗಿಸಿದ ಶ್ರೀಯುತ ರಾಕೇಶ್ ಹೆಗ್ಡೆ ಇವರನ್ನು ನವೋದಯ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಕಾರಿಂಜ ಇವರ ಸಲಹೆಯಂತೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯುವ ಟೆಕ್ನಿಶಿಯನ್ ಶ್ರೀ ಸತೀಶ್ ಕುಲಾಲ್ ಬಾಳ್ತಾರ ಹಾಗೂ ಶ್ರೀ ನಾಗೇಶ್ ಓಂ ನಿವಾಸ ಸಹಕರಿಸಿದರು. ಶ್ರೀ ಕಿರಣ್ ಪ್ರಭು ಯು ಇವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Пікірлер: 2

  • @rameshh5963
    @rameshh59632 жыл бұрын

    Price

  • @veeramaruthiindustriesvm5299

    @veeramaruthiindustriesvm5299

    2 жыл бұрын

    Please contact 8618010550

Келесі