|| Ramachandrapura mutt || lorgest Cow protection center in india || ರಾಮಚಂದ್ರಪುರ ಮಠ ಗೋಶಾಲೆ ||

#Ramachandrapuramatt #COWPROTECTIONCENTERININDIA ಇತಿಹಾಸ : ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಸಮಯದಲ್ಲಿ ಭಾರತದ ಪಶ್ಚಿಮದ ಸಮುದ್ರ ತೀರದಲ್ಲಿರುವ ಗೋಕರ್ಣವನ್ನು ತಲುಪಿದರು. ಅಲ್ಲಿನ ಸ್ಥಳದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ ಶ್ರೀ ವರದೇಶನನ್ನು ಪೂಜಿಸಲು ತಮ್ಮ ಶಿಷ್ಯರೊಂದಿಗೆ ಶತಶೃಂಗಕ್ಕೆ ತೆರಳಿದರು. ಈ ಸ್ಥಳವು ಶಾಂತಿ-ನೆಮ್ಮದಿಯ ಬೀಡಾಗಿದ್ದಿತು. ವನ್ಯ ಮೃಗಗಳಾದ ಹುಲಿ, ಹಾವುಗಳು ಸಾಧು ಪ್ರಾಣಿಗಳಾದ ಹಸು, ಜಿಂಕೆಗಳೊಂದಿಗೆ ಸಖ್ಯದಿಂದಿದ್ದವು. ವರದ ಮುನಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ಅಲ್ಲಿನ ಅಶೋಕ ವನದಲ್ಲಿ ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ ಮಮತೆಯನ್ನು ತೋರಿಸುತ್ತಿದ್ದಿದ್ದನ್ನು ನೋಡಿ ಶಂಕರಾಚಾರ್ಯರು ವಿಸ್ಮಿತರಾದರು. ವರದ ಮುನಿಗಳು ಶಂಕರಾಚಾರ್ಯರನ್ನು ಸ್ವಾಗತಿಸಿ ಮಹಾತ್ಮರು ಸದಾ ಪೂಜಿಸಲು ಅನುಕೂಲವಾಗುವಂತೆ ತಮಗೆ ತಮ ಗುರುಗಳಾದ ಅಗಸ್ತ್ಯ ಮುನಿಗಳು ಕೊಟ್ಟಿದ್ದ ಪವಿತ್ರವಾದ ರಾಮ, ಲಕ್ಷ್ಮಣ, ಸೀತೆ ಮತ್ತು ಚಂದ್ರಮೌಳೀಶ್ವರ ಲಿಂಗಗಳನ್ನು ಕೊಟ್ಟರು. ಆಗ ಶಂಕರಾಚಾರ್ಯರು ಸಮಾಜದ ಉದ್ಧಾರಕ್ಕಾಗಿ ಮತ್ತು ಆ ಪವಿತ್ರ ವಿಗ್ರಹಗಳ ಪೂಜೆಗಾಗಿ ಅಲ್ಲಿ ರಘೂತ್ತಮ ಮಠವನ್ನು ಸ್ಥಾಪಿಸಿದರು.[೧]
ಶಂಕರಾಚಾರ್ಯರು ತಮ್ಮ ಶಿಷ್ಯರಾದ ಸುರೇಶ್ವರಾಚಾರ್ಯರಿಂದ ದೀಕ್ಷೆ ಪಡೆದಿದ್ದ ಶ್ರೀ ವಿದ್ಯಾನಂದರನ್ನು ಅಲ್ಲಿನ ಪ್ರಥಮ ಪೀಠಾಧಿಪತಿಯಾಗಿ ನೇಮಿಸಿದರು. ಹೀಗೆ ಶ್ರೀ ರಾಮಚಂದ್ರಾಪುರ ಮಠ ಎಂದು ಹೆಸರಾಗಿರುವ ರಘೂತ್ತಮ ಮಠದ ಅವಿಚ್ಛಿನ್ನ ಪರಂಪರೆಯು ಆರಂಭವಾಯಿತು. ಎರೆಹುಳು ಗೊಬ್ಬರ ಕ್ಕೆ ಸಂಪರ್ಕಿಸಿ : 08185256048,9449595208,9449595291

Пікірлер: 2

  • @sschiraginformation4926
    @sschiraginformation4926 Жыл бұрын

    ಸೂಪರ್ ಬ್ರದರ್ 👌 ಒಳೆಯ ವಿಡಿಯೋ

  • @rajannasg4744
    @rajannasg4744 Жыл бұрын

    Super sir

Келесі