ನಮ್ಮ ಭೂಮಿ ನಮಗೆ ಕೊಡಿ | Save Earth | World Environment Day

#saveearth #savesoil #WorldEnvironmentDay
ಸಾಹಿತ್ಯ : ಡಾ.ಗಜಾನನ ಶರ್ಮಾ
ಸಂಗೀತ : ಶ್ರೀ ಶ್ರೀಕಾಂತ ಕಾಳ್ಮಂಜಿ
ಗಾಯನ : ಕು.ಪೂಜಾ ಭಟ್ , ಕು.ದೀಪಿಕಾ ಭಟ್ , ಶ್ರೀ ಸಾಕೇತ ಶರ್ಮಾ .
ಸಹಕಾರ : ಶ್ರೀ ಪ್ರಜ್ಞಾನಲೀಲಾಶುಕ ಉಪಾಧ್ಯಾಯ
ತಬಲಾ : ಶ್ರೀ ಗಣೇಶ ಭಾಗ್ವತ್ ಗುಂಡ್ಕಲ್
ಕೊಳಲು : ಶ್ರೀ ಸಮೀರ ರಾವ್
ಸಿತಾರ್: ಶ್ರೀ ಸುಬ್ರಹ್ಮಣ್ಯ ಹೆಗಡೆ
ದೃಶ್ಯ ಸಂಯೋಜನೆ : ನಿನಾದ ಸ್ಟುಡಿಯೋ
ಇಂದು ಪ್ರಕೃತಿಯ ನಿಯಮಗಳನ್ನು ಸ್ವಾರ್ಥಕ್ಕಾಗಿ ತಿರುಚಲು ಹೊರಟ ನಮಗೆ, ಪ್ರಕೃತಿಯು ತನ್ನ ನಿಯಮಗಳ ಮೂಲಕವೇ ಬುದ್ಧಿಕಲಿಸುತ್ತಿದೆ..ಆದ್ದರಿಂದಲೇ ಕಣ್ಣಿಗೂ ಕಾಣದ ಸೂಕ್ಷ್ಮ ವೈರಸ್ ನಿಂದ ಕೋಟಿಗೆಟ್ಟಲೆ ಪ್ರಾಣ ಹೋಗುತ್ತಿದೆ.. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕೊಳಕು ಕಸಗಳಿಂದ ತುಂಬಿದ ಬರಡು ಭೂಮಿಯೇ ಉಳಿಯುತ್ತದೆ. ಇನ್ನು ಮುಂದೆಯಾದರೂ ಹೆಚ್ಚಿನ ರೀತಿಯಲ್ಲಿ ಸ್ವಾರ್ಥ ಬಿಟ್ಟು ಪ್ರಕೃತಿಯನ್ನು ಸುಂದರವಾಗಿ ಸ್ವಚ್ಛವಾಗಿ ಇರುವಂತೆ ನೋಡಿಕೊಂಡರೆ ಮಾತ್ರ ನಮ್ಮ ಹಿರಿಯರು ನಮಗೆ ಕೊಟ್ಟ ಸಹಜ ಸುಂದರ ಭೂಮಿಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬಹುದು..
ಇದೇ ರೀತಿ ಬರೀ ಸ್ವಾರ್ಥಕ್ಕಾಗಿ ಬದುಕುತ್ತಾ ಹೋದರೆ ಮುಂದೊಂದು ದಿನ ಮುಂದಿನ ಪೀಳಿಗೆಯ ಮಕ್ಕಳು "ನಮ್ಮ ಭೂಮಿ ನಮಗೆ ಕೊಡಿ" ಎಂದು ಕೇಳುವಂತಾಗಬಹದು..ಅದನ್ನೇ ಡಾ.ಗಜಾನನ ಶರ್ಮಾರವರ ಈ ಕೆಳಗಿನ ಪದ್ಯವು ಭಾವತುಂಬಿದ ಸಾಲುಗಳಿಂದ ಸಾರಿ ಸಾರಿ ಹೇಳುತ್ತಿದೆ....
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದಗಳೊಂದಿಗೆ ೨೦೧೫ರ ಛಾತ್ರಚಾತುರ್ಮಾಸ್ಯದಲ್ಲಿ ಬಿಡುಗಡೆಯಾದ ಡಾ.ಗಜಾನನ ಶರ್ಮಾರವರ "ಮಕ್ಕಳ ರಾಜ್ಯವ ಕಟ್ಟಿಕೊಡು" ಎಂಬ ಕವನ ಸಂಕಲನದ ಕವನವಿದು.

Пікірлер

    Келесі