ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu

#ಲಕ್ಷ್ಮೀಶೋಭಾನ_ಹಾಡು
ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ||
ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||೧||
ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಾಲಕ್ಷುಮಿ ಉದಿಸಿದಳು
ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||೨||
ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||೩||
ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ
ಪೀತಾಂಬರವನುಟ್ಟು ಮೆರೆದಳೆ ||೪||
ಒಂದು ಕರದಿಂದ ಅಭಯವನೀವಳೆ
ಮತ್ತೊಂದು ಕೈಯಿಂದ ವರಗಳ
ಕುಂದಿಲ್ಲಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||೫||
ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||೬||
ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ
ತನ್ನ ಮನೆಯ ವಧೂ-ವರರ ಸಲಹಲಿ ||೭||
ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||೮||
ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ
ಕಸ್ತೂರಿ ತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ
ಸರ್ವತ್ರ ವಧೂವರರ ಸಲಹಲಿ ||೯||
ಅಂಬುಜನಯನಗಳ ಬಿಂಬಾಧರದ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ
ಉಂಬುದಕೀಯಲಿ ವಧುವರರ್ಗೆ ||೧೦||
ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದೆಳೆ
ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ
ಭಕ್ತಿಯ ಜನರ ಸಲಹಲಿ ||೧೧||
ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ
ಚೆಂದದ ತುರುಬಿಗೆ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-
ಯಿಂದ ವಧೂವರರ ಸಲಹಲಿ ||೧೨||
ಎಂದೆಂದಿಗು ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ||೧೩||
ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ
ಭಾಮೆ ಮಹಲಕ್ಷುಮಿ ಧರಿಸಿದಳೆ
ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ
ಸೇವಕ ಜನರ ಸಲಹಲಿ ||೧೪||
ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||೧೫||
ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||೧೬||
ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ ||೧೭||
ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ||೧೮||
ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||
ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ
ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||
ಮಾವನ ಕೊಂದೊಬ್ಬ ಮರುಳಾಗಿಹನು
ಗಾಢ ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||೨೧||
ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||೨೨||
ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳಕ್ಕೆ ಇಳಿದ ಗಡ ||೨೩||
ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದಲಿ ತೊಲಗಿಸುವ
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||೨೪||
ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಾಗಿ ಭವದಲ್ಲಿ
ಸುಖದುಃಖವೆಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||
ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ
ಒಬ್ಬನಾವನಿಗೆ ಶಯನಾಹ
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ
ಅಬ್ಬರದಲಾವಾಗ ಸುಳಿವರು ||೨೬||
ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ
ಸರ್ವರಿಗಾವ ಅಮೃತವ
ಸರ್ವರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ||೨೭||
ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನಬಂದಂತೆ ನುಡಿಯದಿರು ||೨೮||
ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೨೯||
ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿದ್ದ ಹರಿಗೆ ದುರಿತವ
ಭಾವಜ್ನರೆಂಬರೆ ಆಲದೆಲೆಯ ಮೆಲೆ
ಶಿವನ ಲಿಂಗವ ನಿಲಿಸುವರೆ ||೩೦||

Пікірлер: 508

  • @jyothics6611
    @jyothics6611 Жыл бұрын

    ಅಮ್ಮ್ 🙏ನಿಮ್ಮ ದ್ವನಿಯಲ್ಲಿ ಶಾರದಾ ದೇವಿ ಇದಾರೆ ಅಮ್ಮ ಕೆಳಕ್ಕೆ ಎಷ್ಟು ಸೋಗುಸು ದೇವರು ನಮಗೋಸ್ಕರ ನಿಮ್ಮ ಸೃಷ್ಟಿ ಮಾಡಿದಾರೆ ಅಮ್ಮ ನೀವು ಹೇಳಿದ ಯಲ್ಲ ಪೂಜೆಗಳನ್ನ ಮಾಡ್ತಾ ಇದೀನಿ ನನ್ನ ಜೀವನ ಎಷ್ಟೋ ಬದಲಾವಣೆ ಆಗಿದೆ ಅಮ್ಮ ನಿಮ್ಮ ಬಗ್ಗೆ ಹೇಳಲು ಪದಗಳು ಇಲ್ಲ ಅಮ್ಮ 🙏🙏🙏🙏🙏🙏🙏

  • @latavchoukimath8761
    @latavchoukimath8761 Жыл бұрын

    🙏🏻🙏🏻 ಮಾತುಗಳು ಮಂತ್ರ ವಾದಾಗ ಅದು ನಿಜವಾಗುತ್ತದೆಸದುವಿನಯವೇ ಸದಾಶಿವನೊಲುಮೆಯಯ್ಯ ಅಂತಹ ಮಾತುಗಳಿಗೆ ಶಕ್ತಿಯನ್ನು ತುಂಬುತ್ತಿ ದಿರಿ ಈ ಕಾರ್ಯ ಹೀಗೆ ಮುಂದುವರಿಯಲಿ ತಾಯಿ

  • @DeepaJanaR
    @DeepaJanaR Жыл бұрын

    🙏amma Nivu Agni hotri Maduva vidana thilisikodi dayavittu idannu nimminda shastroktavagi tiliyuva ase Ide amma🙏🙏

  • @jayanthinarayan1345
    @jayanthinarayan1345 Жыл бұрын

    ಶ್ರೀ ಧನ್ಯೋಸ್ಮಿ ಗೆಳತಿ ಶೋಭಾನೆ ಹಾಡು ಹೇಳಿ ಕೊಟ್ಟಿದ್ದಕ್ಕೆ🎉

  • @sneharavi7930
    @sneharavi7930 Жыл бұрын

    ನಮಸ್ತೆ ಅಮ್ಮ, ಬಹಳ ಚೆನ್ನಾಗಿದೆ ಅಮ್ಮ ನಾವೂ ಕೂಡ ಲಕ್ಷ್ಮಿ ಸೋಬಾನ ಪ್ರತಿ ಶುಕ್ರವಾರ ಪಠಣ ಮಾಡ್ತೀವಿ. ನೀವು ಪೂಜೆ ಪುನಸ್ಕಾರ ವ್ರತ ಆಚರಣೆ ಕುರಿತು ಬಹಳ ಚೆನ್ನಾಗಿ ಹೇಳಿಕೊಡುತಿದ್ದೀರಿ..... 💐🙏🙏💐 ಧನ್ಯವಾದಗಳು ಅಮ್ಮ 🙏🙏💐💐👌👌👌👌🙏🙏🙏🙏🙏👌👌👌👌

  • @shilpashilpa9723
    @shilpashilpa9723 Жыл бұрын

    ಅಮ್ಮಾ ನಮಸ್ತೆ ನಿಮ್ಮ ಧ್ವನಿ ತುಂಬಾ ಮಧುರವಾಗಿದೆ ❤ ನಿಮ್ಮ ಬಗ್ಗೆ ನಮಗೆ ಇರುವ ಅಭಿಮಾನನ ಕೇವಲ ಎರಡು ವಾಕ್ಯಗಳಲ್ಲಿ ಹೇಳೋಕಾಗಲ್ಲ ಅಮ್ಮ ನಿಮ್ಮ ಪೋಸ್ಟ್ಗಳನ್ನು ನೋಡಿದ್ರೆ ನಮ್ಮ ಯಾವುದೋ ಒಂದು ಸಮಸ್ಯೆಗೆ ಪರಿಹಾರ ನೇ ಅದೇವರು ಸೂಚಿಸಿದ ಅನ್ಸುತ್ತೆ ತುಂಬು ಹೃದಯದ ಧನ್ಯವಾದಗಳು ಅಮ್ಮ 💕🙏🙏🙏

  • @suprithsudarshan
    @suprithsudarshan Жыл бұрын

    ನನ್ನ ಹುಟ್ಟಿದ ಹೆಸರು ಲಕ್ಷ್ಮಿ ಎಂದು ಕರೆಯುವ ಹೆಸರು ಶೋಭಾ ಎಂದು ನೀವು ನಿಮ್ಮ ಶಾರದಾದೇವಿ ಹಾಡು ತುಂಬಾ ಸೊಗಸಾಗಿದೆ

  • @sudhan371
    @sudhan371 Жыл бұрын

    ಧನ್ಯವಾದಗಳು ವೀಣಾ ರವರೆ ಶುಭ ಸಂಜೆ ನಾನು ದಿನಾ ಸಂಜೆ ಲಷ್ಷ್ಮಿ ಶೋಭಾನೆ ಹೇಳುತ್ತೀನಿ ಜೈ ಶ್ರೀ ಮಹಾಲಕ್ಷ್ಮಿ ನಮೋಸ್ತುತೆ 🙏🙏🙏

  • @bhuvaneshwarivr1416
    @bhuvaneshwarivr1416 Жыл бұрын

    ಧನ್ಯವಾದಗಳು ಗುರುಜಿ 🙏🙏🙏🙏🙏🙏

  • @anilsinghrajput255
    @anilsinghrajput255 Жыл бұрын

    Tumba sundaravagi helidiramma tumba tumba dhanyavaadagalu ❤🙏🙏🙏

  • @vasuvasu3345
    @vasuvasu3345 Жыл бұрын

    ಅಮ್ಮ ತುಂಬಾ ಚೆನ್ನಾಗಿ ಲಕ್ಷ್ಮಿ ಶೋಭನಾ ಬಗ್ಗೆ ತಿಳಿಸಿಕೊಟ್ಟಿಧೀರ ನಾನು ಶುಕ್ರವಾರ ಮತ್ತು ಮಂಗಳವಾರ ಹೇಳುತೀನಿ ಅಮ್ಮ Thanks Love you amma 🙏🏻🙏🏻🙏🏻

  • @sumababu4393
    @sumababu4393 Жыл бұрын

    ತುಂಬಾ ಧನ್ಯವಾದಗಳು ವೀಣಾ ಅಕ್ಕ 🙏🏻🙏🏻

  • @roopalibhandiwad9011
    @roopalibhandiwad9011 Жыл бұрын

    Shree Lakshmi Shobhane.,....shubhamangalam🙏🙏🙏🙏🙏

  • @ramdeepa2553
    @ramdeepa2553 Жыл бұрын

    Amma dhanyavaadagalu

  • @santabanta8126
    @santabanta8126 Жыл бұрын

    amma we are all so blessed to have you in our lives..❤ ur teachings make us learn so many things...thank you Amma

  • @kidspadmatv3524
    @kidspadmatv3524 Жыл бұрын

    ನಾನು ಇವತ್ತಿನಿಂದ ಕುಬೇರ ಪೂಜೆ ಮಾಡ್ತಾ ಇದೀನಿ ಮೇಡಂ ಮನಸ್ಸಿಗೆ ತುಂಬಾ ಸಮಾಧಾನ ಆಗಿದೆ ಪೂಜೆನ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ 🙏🙏

  • @dhanyaputhran2465
    @dhanyaputhran2465 Жыл бұрын

    Super Amma 🙏❤️❤️🙏

  • @sudharajendrakumar3579
    @sudharajendrakumar3579 Жыл бұрын

    🙏🏻🙏🏻🙏🏻🙏🏻🙏🏻 ಆಶೀರ್ವಾದ ಇರಲಿ ತಾಯಿ 🙏🏻🙏🏻🙏🏻🙏🏻🙏🏻

  • @geetagk5142
    @geetagk5142 Жыл бұрын

    ಎಲ್ಲಾ. ಪೂಜೆಗಳು. ತುಂಬಾ. ಚೆನ್ನಾಗಿ. ತಿಳಿಸುತ್ತೀರಾ. ತುಂಬಾ. ಧನ್ಯವಾದಗಳುಟಕ್.

  • @sushmakorlahalli3114
    @sushmakorlahalli3114 Жыл бұрын

    Prati shukruvara Laxmi Shobhane helittene amma Adare idra hinnale gottiralilla tilisikottidakke dhanyavadagalu amma. Nimmindda tumba tumba kalitiddeve amma

  • @padmaramesh7448
    @padmaramesh7448 Жыл бұрын

    ಧನ್ಯವಾದಗಳು🙏🙏🌹❤

  • @veerendraprasad27
    @veerendraprasad27 Жыл бұрын

    Amma Namaskaaragalu🙏🙏🙏 💐💐💐✨✨✨🚩🚩🚩...

  • @desaihampiheritage4726
    @desaihampiheritage47262 күн бұрын

    Haresrinivasa dhannyosmi

  • @ravikr7661
    @ravikr7661 Жыл бұрын

    ಹರೇ ಶ್ರೀನಿವಾಸ

  • @sujatavaddar9258
    @sujatavaddar9258 Жыл бұрын

    Amma taie jagadoddarakale nimage nanna koti koti nmskaragalu 🙏🙏🙏🙏🌹🌹🌹🌹🌹❤️ parameshwari

  • @panduk.m7776
    @panduk.m7776 Жыл бұрын

    ತುಂಬಾ ಧನ್ಯವಾದಗಳು ಅಮ್ಮ 🌹🙏🙏🙏🙏🙏🌹

  • @srinivasaiahabhay8030
    @srinivasaiahabhay8030 Жыл бұрын

    🙏🙏🙏Om namo Bhagavati Vasudevaya Namha 🙏🙏🙏

  • @mamatharani2433
    @mamatharani2433 Жыл бұрын

    Amma namasthe.nimma vioce keluthidare postive energy baruthe ..tq amma

  • @radhakhandate2211
    @radhakhandate2211 Жыл бұрын

    ಹರೇ ಶ್ರೀನಿವಾಸ ಅಕ್ಕಾ

  • @supsharag7916
    @supsharag7916 Жыл бұрын

    Namasthe Amma 😊

  • @trivenistribalu2742
    @trivenistribalu2742 Жыл бұрын

    ತುಂಬಾ ಧನ್ಯವಾದಗಳು 👍👌ಮೇಡಂ 🙏🙏🙏🙏🌹🌹🌹🌹

  • @hamanthkumar2639
    @hamanthkumar2639 Жыл бұрын

    Supar amma 🙏🙏🙏🙏

  • @divyashreeckm9502
    @divyashreeckm9502 Жыл бұрын

    🙏🙏🙏🙏🙏 ಧನ್ಯವಾದಗಳು ಅಮ್ಮ ನಿಮ್ಮ ಆರ್ಶಿವಾದ ನನ್ನ ಮೇಲೆ ಇರಲಿ ಅಮ್ಮ 🙏🙏🙏

  • @latadevadiga8480
    @latadevadiga8480 Жыл бұрын

    Vandanegalu🙏🌹

  • @bhuvanads8809
    @bhuvanads8809 Жыл бұрын

    Dhanyavadagalu amma 🙏🙏

  • @aryanasha5141
    @aryanasha5141 Жыл бұрын

    Dhanyosmi amma

  • @user-kw7jl8im3w
    @user-kw7jl8im3w Жыл бұрын

    Amma Nimage Koti Koti Pranamagalu🙏🙏🙏 Nimminda tumba janakke olledu agide amma 🙏

  • @ushamgowdaushamgowda4803
    @ushamgowdaushamgowda4803 Жыл бұрын

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sumams7622
    @sumams7622 Жыл бұрын

    ಅಮ್ಮ ತುಂಬಾ ಧನ್ಯವಾದಗಳು 🙏🙏🙏🙏

  • @SumaLatha-ef7mg
    @SumaLatha-ef7mg Жыл бұрын

    ತುಂಬಾ ಧನ್ಯವಾದಗಳು ಅಮ್ಮ ನಮಗೆ ಪ್ರತಿಯೊಂದು ವಿಷಯವನ್ನು ಅರ್ಥಪೂರ್ಣವಾಗಿ ವಿವರಿಸುತ್ತೀರಿ

  • @RoopaMk-ru7vh
    @RoopaMk-ru7vh Жыл бұрын

    ಧನ್ಯವಾದಗಳು ಅಮ್ಮ ❤️

  • @hemanthbp9415
    @hemanthbp9415 Жыл бұрын

    Tq amma

  • @anithav7308
    @anithav7308 Жыл бұрын

    Amma tumba kushiyagutte nev helkodo pooje yella andre yesttagutto asttu madtha edini esto samasyagalu yochne maddrolage parihara agtha edave ❤ amma

  • @rajanivenkatesh3208
    @rajanivenkatesh3208 Жыл бұрын

    ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏

  • @sunandagolabhavi1015
    @sunandagolabhavi1015 Жыл бұрын

    Dina vandondu valeya vichar galannu tilisiddiri 👌👌🙏🙏🙏💐💐

  • @poojatalli3201
    @poojatalli3201 Жыл бұрын

    Thank you amma i was waiting for this 🙏🙏💐

  • @roopaprasad8170
    @roopaprasad8170 Жыл бұрын

    Thank you for this wonderful video

  • @sudhak.v5568
    @sudhak.v5568 Жыл бұрын

    Shobhane haadu Keli Khushi aythu Amma thank youuu so much 🙏🙏🙏❤️💞

  • @leelavathi7609
    @leelavathi7609 Жыл бұрын

    Amma sogasada vivarane thank you. 🙏

  • @mrmdr9499
    @mrmdr9499 Жыл бұрын

    Tq Amma

  • @neelakelageri3816
    @neelakelageri3816 Жыл бұрын

    Thanks amma 🙏🙏

  • @user-fc6wx3yz5w
    @user-fc6wx3yz5w Жыл бұрын

    Namaste Amma

  • @srinivasaiahabhay8030
    @srinivasaiahabhay8030 Жыл бұрын

    🙏🙏🙏 Amma Mahalakshmi Narayana Sametha Namma Manege Baramma 🙏🙏🙏

  • @devarudevaru8160
    @devarudevaru8160 Жыл бұрын

    Tq so much amma tumba olle mahiti kottiddira

  • @akkamahadevihiremath5523
    @akkamahadevihiremath5523 Жыл бұрын

    Thanks avva 🙏🙏 🤝

  • @sukanyaamingad5865
    @sukanyaamingad5865 Жыл бұрын

    Srii Lakshmi Narsyanaya namaha🙏🙏🙏

  • @savithas2922
    @savithas2922 Жыл бұрын

    Very sweet voice amma nice hear the lakshmi amma song

  • @poornimaguru8757
    @poornimaguru8757 Жыл бұрын

    ಧನ್ಯ ವಾದಗಳು ಅಮ್ಮ 🙏🏻🙏🏻🙏🏻

  • @Saviyaada_saviruchigalu
    @Saviyaada_saviruchigalu Жыл бұрын

    Thank you madam

  • @mahamayi1426
    @mahamayi1426 Жыл бұрын

    Dhanadaya Amma shobhane channagide haadi haaki keltivi

  • @dr.d.meenakshi9797
    @dr.d.meenakshi9797 Жыл бұрын

    Thanq very much veena mam

  • @anjalighatke7433
    @anjalighatke7433 Жыл бұрын

    Today I think God has given relief to me through ur guidance ma 🙏🌹😊

  • @akkuhanchinal518
    @akkuhanchinal518 Жыл бұрын

    Amma namaste

  • @chanduravikumarn2232
    @chanduravikumarn2232 Жыл бұрын

    Namasthe amma

  • @Nila-bh2to
    @Nila-bh2to Жыл бұрын

    namaste Amma 🙏🙏🙏🙏🙏

  • @shwetakeni7837
    @shwetakeni7837 Жыл бұрын

    Amma Thank you ❤

  • @supriyaa9787
    @supriyaa9787 Жыл бұрын

    Jai Maata Di🙏

  • @sunithasuni7948
    @sunithasuni7948 Жыл бұрын

    Tq amma 🙏🙏🙏🙏🙏

  • @ArasuUsha
    @ArasuUsha Жыл бұрын

    Namaste amma

  • @pallavi4832
    @pallavi4832 Жыл бұрын

    Thank you so much

  • @Jagdish-ki5wb
    @Jagdish-ki5wb Жыл бұрын

    Amma namaste Amma

  • @sujatavaddar9258
    @sujatavaddar9258 Жыл бұрын

    Nimma padakke sastanga namskaragalu devi

  • @nirmalarajangtti5355
    @nirmalarajangtti5355 Жыл бұрын

    Thank you amma❤

  • @AnjaneyaH-nb4wy
    @AnjaneyaH-nb4wy Жыл бұрын

    ಅಮ್ಮ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ 🙏🙏

  • @prameelacr9664
    @prameelacr9664 Жыл бұрын

    Very nise Amma

  • @SocialWork27-lb9fg
    @SocialWork27-lb9fg Жыл бұрын

    Namaste amma 🙏🙏🙏🙏🙏🙏🙏🙏🙏

  • @chidanandah2000
    @chidanandah2000 Жыл бұрын

    ನಮಸ್ತೆ ಮೇಡಂ ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ

  • @yogeshanu2644
    @yogeshanu2644 Жыл бұрын

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಮ್ಮ, ಲಕ್ಷ್ಮೀ ಸೋಬಾನೆ ಹೇಳಿಕೊಟ್ಟಿದಕ್ಕೆ ಧನ್ಯವಾದಗಳು ಅಮ್ಮ 🙏🙏🙏

  • @praveendeshpande9535
    @praveendeshpande9535 Жыл бұрын

    🙏🙏ತುಂಬಾ ಧನ್ಯವಾದಗಳು 🙏🙏ನಾನು ಪ್ರತಿ ಶುಕ್ರವಾರ ಹಾಡುತ್ತೇನೆ madam🙏🙏

  • @geethas1996
    @geethas1996 Жыл бұрын

    Thank you amma

  • @rashmirani1915
    @rashmirani1915 Жыл бұрын

    🙏 Thank you Madam.

  • @radhikahortikar9431
    @radhikahortikar9431 Жыл бұрын

    🙏🏻🙏🏻🙏🏻

  • @ranganaths1298
    @ranganaths1298 Жыл бұрын

    Namaskramma

  • @umaambig7762
    @umaambig7762 Жыл бұрын

    🙏🙏 ಅಮ್ಮ

  • @sharanumpatil7528
    @sharanumpatil7528 Жыл бұрын

    Namaste Amma 🙏🙏🌺🌺🙏🙏🌺🌺

  • @rajeahwaribiradar2665
    @rajeahwaribiradar2665 Жыл бұрын

    Tq mam

  • @hemavathij4575
    @hemavathij4575 Жыл бұрын

    Dhanayavadagalu Amma olle shobhane helkottidakke nange tumba ista but nang sikkilirlla nim dayeinda aa bhagya sikthu

  • @likithchangappamj4555
    @likithchangappamj4555 Жыл бұрын

    Namaste amma 🙏

  • @santhoshsanthu6332
    @santhoshsanthu6332 Жыл бұрын

    Thank you akka 🙏🙏🙏🙏

  • @trivenisherikar7104
    @trivenisherikar7104 Жыл бұрын

    🙏🙏❣️

  • @latavchoukimath8761
    @latavchoukimath8761 Жыл бұрын

    🙏🏻🙏🏻

  • @VeenaJoshi
    @VeenaJoshi Жыл бұрын

    Thanks to all

  • @Laxami-ks4ov
    @Laxami-ks4ov Жыл бұрын

    Nice akka

  • @parvathiobalesh6286
    @parvathiobalesh6286 Жыл бұрын

    🙏🙏🙏🌹🌹

  • @padamajakulkarni5390
    @padamajakulkarni5390 Жыл бұрын

    🙏 akka

  • @shwetharaj2092
    @shwetharaj2092 Жыл бұрын

    Amma neevu super❤

  • @VeenaJoshi

    @VeenaJoshi

    Жыл бұрын

    Thanq

  • @SS-qk9np

    @SS-qk9np

    Жыл бұрын

    Thank u amma

  • @rchidanandaprasad9239
    @rchidanandaprasad9239 Жыл бұрын

    ಅಣ್ಣ ಶೋಭಾನೆ ಹಾಡು ಸಂಪೂರ್ಣ ಹೇಳಿ ನಾವು ಕಲಿತು ಕೊಳ್ಳುತ್ತೇವೆ

  • @VeenaJoshi

    @VeenaJoshi

    Жыл бұрын

    ಖಂಡಿತಾ ಸಮಯ ಸಿಕ್ಕಾಗ ಹೇಳಿ ಕೊಡುವೆ

  • @manjulagururaj3869
    @manjulagururaj3869 Жыл бұрын

    🙏💐

  • @VaigyanikIN21
    @VaigyanikIN21 Жыл бұрын

    Thanks Veena 💐🙏

  • @nalinibai2069
    @nalinibai2069 Жыл бұрын

    Amma thank you very mach amma

Келесі