Kuthar | ಕಳ್ಳನನ್ನು ಹಿಡಿದು ನನ್ನ ಮಗಳ ಸರ ತಂದು ಕೊಟ್ಟ ಪುಣ್ಯಾತ್ಮ ಈ ಯಾಸೀರ್ - ಐತಪ್ಪ ಗಟ್ಟಿ

ಕಳ್ಳನನ್ನು ಹಿಡಿದು ನನ್ನ ಮಗಳ ಸರ ತಂದು ಕೊಟ್ಟ ಪುಣ್ಯಾತ್ಮ ಈ ಯಾಸೀರ್ - ಐತಪ್ಪ ಗಟ್ಟಿ
#abbakkatv #kuthar

Пікірлер: 13

  • @ullalmohammedismail6480
    @ullalmohammedismail64805 күн бұрын

    *ಅಕ್ಷರಶಃ ಮೌನ ಆವರಿಸಿತ್ತು 😥* *ನಿಶ್ಚಿತಾರ್ಥದ ಸಂಭ್ರಮದ ಮನೆ ಕ್ಷಣಾರ್ದದಲ್ಲಿ ಕಣ್ಣೀರ ಕಡಲಾಯಿತು.* ✍️ *-ಕೆ.ಪಿ ಬಾತಿಶ್ ತೆಕ್ಕಾರು* ಮಂಗಳೂರಿನಿಂದ ಇಂದು ಬೆಳ್ಳo ಬೆಳಿಗ್ಗೆ ಬಂದ ವಾರ್ತೆ ಯಾವೊಬ್ಬನನ್ನು ಅಣುಕಿಸಿ ಬಿಡುವಂತಹದ್ದು ಒಂದೇ ಮನೆಯ ನಾಲ್ವರು ತಡೆಗೋಡೆ ಕುಸಿದು ಮೃತಪಟ್ಟ ಘಟನೆ ಉಳ್ಳಾಲದ ಕುತ್ತಾರ್ ನಲ್ಲಿ ಸಂಭವಿಸಿದೆ.ತಂದೆ ತಾಯಿ ತನ್ನಿಬ್ಬರು ಮಕ್ಕಳು ಸಹಿತ ನಾಲ್ವರು ಇದೀಗ ಆರಡಿ ಮಣ್ಣಿನಲ್ಲಿ ಮಲಗಿದ್ದಾರೆ. ಸರಕಾರದ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಭಾಗದ ರಾಜಕಾರಣಿಗಳು ಘಟನಾ ಸ್ಥಳಕ್ಕೆ ಭೇಟಿಯಾಗುತ್ತಲೇ ಇದ್ದಾರೆ. ಯಾವುದೇ ಪರಿಹಾರ ನೀಡಿದರೂ ಅದನ್ನು ಪಡೆಯಲು ಆ ಮನೆಯಲ್ಲಿ ಮನೆಯವರೇ ಇಲ್ಲ ಎಂಬುವುದು ಖೇದಕರ ಸಂಗತಿ. ಮಲಗುವ ಮುನ್ನ ಆ ಕುಟುಂಬ ನಾಳೆಯ ಬಗ್ಗೆ ಅದೆಷ್ಟೋ ಕನಸು ಕಂಡಿರಬಹುದೊ ಏನೋ..? ಆದರೆ ಆ ಕುಟುಂಬಕ್ಕೆ ಇಂದಿನ ಸೂರ್ಯೋದಯವನ್ನೇ ನೋಡಲಾಗಲಿಲ್ಲ. ಮೇಲಿನ ಮನೆಯವರ ತಡೆಗೋಡೆಯೊಂದು ಬಿದ್ದ ರಭಸಕ್ಕೆ ಕೆಳಗಡೆ ಮನೆಯಲ್ಲಿದ್ದ ತಂದೆ ತಾಯಿ ಸಹಿತ ಎರಡು ಹೆಣ್ಣು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆಯಾಗಿದೆ ಕರಾವಳಿಯನ್ನು ಕಣ್ಣೀರಾಗಿಸಿದ್ದು. ನಿಶ್ಚಿತಾರ್ಥವಾಗಿ ಮದುವೆಯ ಕನಸು ಕಂಡ ಹೆಣ್ಣುಮಗಳು ರಿಫಾನ,ನಾಳೆ ಶಾಲೆಗೆ ಕೊಂಡು ಹೋಗುವ ಹೋಮ್ ವರ್ಕ್ ಮಾಡಿ ಮಲಗಿದ್ದ 8ನೇ ತರಗತಿಯ ವಿದ್ಯಾರ್ಥಿನಿ ರಿಯಾನ,ಮಳೆ ಇದೆ ನಾಳೆಯ ಕೆಲಸಕ್ಕೆ ಬೇಗನೇ ಹೋರಡಬೇಕು ಎಂದು ಮೊದಲ ದಿನವೇ ದಿನಚರಿ ಸಿದ್ದಪಡಿಸಿದ್ದ ಆ ಹೆಣ್ಣುಮಕ್ಕಳ ತಂದೆ ಯಾಸಿರ್, ಮಕ್ಕಳು ಮತ್ತು ಗಂಡ ಎದ್ದೇಳುವ ಸಮಯದಲ್ಲಿ ಒಳ್ಳೆಯ ನಾಷ್ಟ ಮಾಡಿ ಬಡಿಸಬೇಕು ಎಂದು ಬೆಳಿಗ್ಗಿನ ತಿಂಡಿಗೆ ಅಕ್ಕಿ ನೆನಸಿ ಹಾಕಿದ ತಾಯಿ ಮರಿಯಮ್ಮ. ಇವರೆಲ್ಲರ ದಿನಚರಿಯ ಲೆಕ್ಕ ಮಾತ್ರ ಬೆಳಗ್ಗೆ ಆಗುವಾಗ ಮಾತ್ರ ಮಣ್ಣಿನಡಿಯಲ್ಲಿತ್ತು.ಮಣ್ಣಿನ ಮೇಲೆ ಮಲಗಿದ್ದ ಯಾಸಿರ್ ರವರ ಕುಟುಂಬ ಇದೀಗ ಮಣ್ಣಿನೊಳಗಡೆ ಮಲಗಿದೆ. ಮೂವರು ಹೆಣ್ಣು ಮಕ್ಕಳಲ್ಲಿ ದೊಡ್ಡವಳು ಮಾತ್ರವೇ ಆ ಕುಟುಂಬದಲ್ಲಿ ಬಾಕಿ ಉಳಿದಿದ್ದು. ಮದುವೆಯಾಗಿ ಗಂಡನ ಮನೆ ಸೇರಿದ್ದ ದೊಡ್ಡವಳು ಈ ಅವಘಡದಿಂದ ಪಾರಾಗಿದ್ದಾಳೆ. ಯಾರಿಗೂ ಮನ ನೋಯಿಸದ ಯಾಸಿರ್ ರವರು ಅವರಾಯಿತು ಅವರ ಪಾಡಾಯಿತು ಎಂಬಂತೆ ಬದುಕಿದವರು. ಕುಟುಂಬಕ್ಕಾಗಿ ಎಲ್ಲವನ್ನೂ ಸಹಿಸಿದ ಆ ಜೀವ ತನ್ನ ಎರಡು ಹೆಣ್ಣುಮಕ್ಕಳೊಂದಿಗೆ ಪರಲೋಕಯಾತ್ರೆಯಾಗಿದ್ದಾರೆ. ಇದೇ ಬಾನುವಾರ ಆ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಭಗವಂತನ ಇಚ್ಛೆ ಬೇರೇನೇ ಆಗಿತ್ತು. ನಿನ್ನೆ ರಾತ್ರಿ ಖುಷಿ ಖುಷಿಯಾಗಿ ಮಾತನಾಡುತ್ತಾ ತಂದೆ ತಾಯಿ ಮಕ್ಕಳು ಒಂದೇ ಕೋಣೆಯಲ್ಲಿ ಸಂಭ್ರಮದಿಂದ ಮಲಗಿದವರು ಇಂದು ಖಬರ್ ಸ್ಥಾನದಲ್ಲಿ ಅವರೆಲ್ಲರೂ ಜತೆಯಾಗಿ ಮಲಗಬೇಕಾಗಿ ಬಂತು. ಅವರೂ ಒಮ್ಮೆಯೂ ಕನಸಲ್ಲೂ ನೆನಸಿರಲು ಸಾಧ್ಯವಿರಲಿಲ್ಲ ನಾಳೆಯ ನಮ್ಮ ಮುಂಜಾನೆ ಈ ರೀತಿಯಿದ್ದಾಗಿರುತ್ತದೆ ಎಂದು. ಆ ಜೀವಗಳಿಗೂ ಅದೆಷ್ಟೋ ಕನಸುಗಳು ಇದ್ದಿರಬಹುದು. ಚಿಕ್ಕ ಮಗಳಿಗೆ ತನ್ನ ಅಕ್ಕಳ ನಿಶ್ಚಿತಾರ್ಥ ದಿನದಂದು ಸಂಭ್ರಮಿಸಬೇಕು, ಆ ದಿನದಂದು ಬರುವ ಅತಿಥಿಗಳಿಗೆ ಆತಿತ್ಯ ನೀಡಲು ಆ ತಂದೆ ಈಗಲೇ ಕಾಲಿಗೆ ಚಕ್ರ ಕಟ್ಟಿದ್ದಿರಬಹುದು. ಆದರೆ ದೇವನ ತೀರ್ಮಾನವೇ ಬೇರೇನೇ ಆಗಿತ್ತು. ಕೆಲ ಹೊತ್ತಿನ ನಿದ್ರೆಗಾಗಿ ಮಲಗಿದವರು ಶಾಶ್ವತ ನಿದ್ರೆಗೆ ಜಾರಿ ಬಿಟ್ಟರು. ಜೀವನ ಇಷ್ಟೇ ರಾತ್ರಿ ಬೆಳಗಾಗುವುದರ ಒಳಗೆ ಎಲ್ಲವೂ ಮುಗಿದಿರುತ್ತದೆ. ಇರುವಷ್ಟು ದಿನ ಸಂಭ್ರಮದಿಂದ ಕಳೆಯುವುದಷ್ಟೇ ಜೀವನ. ಆ ಕುಟುಂಬಕ್ಕೆ ದೇವನು ಕ್ಷಮೆ ನೀಡುವ ಶಕ್ತಿಯ ನೀಡಲಿ ಎಂಬ ಪ್ರಾರ್ಥನೆ ನಮ್ಮದು.

  • @neethaamin153
    @neethaamin1535 күн бұрын

    Om Shanti 🙏🏻🙏🏻🙏🏻

  • @gunapalgowdamaroli5114
    @gunapalgowdamaroli51145 күн бұрын

    Om Shanti 😭

  • @shafisheikh7527
    @shafisheikh75275 күн бұрын

    Innalillahi wainna ilaihiraajivoon

  • @oorudakori766
    @oorudakori7665 күн бұрын

    Om shanthi 👏👏👏👏

  • @Agsgxhk

    @Agsgxhk

    2 күн бұрын

    Aameen ya rabbal alameen

  • @chethansaliyan356
    @chethansaliyan3565 күн бұрын

    REST IN PEACE😢

  • @reenaveenadalmeida2256
    @reenaveenadalmeida22564 күн бұрын

    🙏 😢

  • @chetan_naik
    @chetan_naik4 күн бұрын

    🙏🥺

  • @vaayuputhra8025
    @vaayuputhra80255 күн бұрын

    Daada poora aapunda

  • @_Saarathi_.26
    @_Saarathi_.265 күн бұрын

    😂😂😂😂

Келесі