Hondisi Bareyiri Kannada New Full Movie Out Now Full [HD] | On Sunday Cinemas YouTube Channel

Музыка

If You Liked Our Movie and Want to Support Sunday cinemas Projects, Here Are the Details.
UPI: sundaycinemas@ybl
Phone pay/Google pay/Paytm/BHIM Number: +91- 8904070385
Payment through Pay Pal: www.paypal.com/paypalme/sunda...
USD Payment through Zelle: vishwa.shambhulingappa@gmail.com
Bank Details:
Account Name: Sunday Cinemas
Account Number: 50200091779392
IFSC: HDFC0004053
Branch: Arekere Branch, Bangalore
Bank: HDFC
Hondisi Bareyiri is a 2023 Indian-Kannada language Romantic, comedy drama film written and directed by Ramenahalli Jagannatha. It features Praveen Tej, Bhavana Rao, Samyukta Hornad, Aishani Shetty, Naveen Shankar, Shri, Archana Jois and Anirudh Acharya in the leading roles.
Plot:
A story of a bunch of college friends who re-unite at their friend’s wedding after a span of many years of separation. This opens up a fun-filled series of their college life, leading to the responsibilities of adulthood and their struggle to find solace amidst their complex relationships.
“Hondisi Bareyiri” is a journey of life through its circumstances and its acceptance.
ಸದಭಿರುಚಿಯ ಚಿತ್ರಗಳ ನಿರ್ಮಾಣದ ಆಶಯದಿಂದ ಆರಂಭವಾಗಿರುವ ನಮ್ಮ SUNDAY CINEMAS ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರ "ಹೊಂದಿಸಿ ಬರೆಯಿರಿ " ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಮುಂದಿನ ಯೋಜನೆಗಳಿಗೆ ಸಹಕಾರಿಯಾಗಲು ನಿಮಗೆ ತೋಚಿದಷ್ಟು ಹಣವನ್ನು ನೀಡುವುದರ ಮೂಲಕ ಕೈ ಜೋಡಿಸಿ, ಹಾಗೂ ನಮ್ಮ ಈ You Tube channel ಗೆ Subscribe ಆಗಿ ನಮ್ಮ ಪ್ರಯತ್ನಗಳಿಗೆ ಪ್ರೋತ್ಸಾಹಿಸಿ.
As filmmaker, it's our responsibility to ensure that everyone can easily access our content. With this in mind, we're thrilled to announce the release of our debut film, "Hondisi Bareyiri," on KZread. We kindly ask for your assistance in reaching a wider audience by sharing and spreading the word among your loved ones. Your feedback is invaluable to us, so please don't hesitate to share your thoughts with us at hondisibareyiri@gmail.com.
SUNDAY CINEMAS was founded with a vision to produce exceptional films. If you enjoyed "Hondisi Bareyiri," we humbly request your support by considering a contribution. Additionally, please remember to subscribe to our KZread channel to stay updated on our latest releases.
ಪ್ರತಿಯೊಬ್ಬ ನೋಡುಗನಿಗೂ ಅವನ ಅನುಕೂಲಕ್ಕೆ ತಕ್ಕಂತೆ ಚಿತ್ರ ತಲುಪಿಸಬೇಕಾಗಿರುವುದು ನಮ್ಮ ಕರ್ತವ್ಯ ಹಾಗಾಗಿ ನಮ್ಮ “ಹೊಂದಿಸಿ ಬರೆಯಿರಿ” ಚಿತ್ರವನ್ನು ಈಗ “SUNDAY CINEMAS YOU TUBE CHANNEL” ನಲ್ಲಿ ಬಿಡುಗಡೆ ಮಾಡಿದ್ದೇವೆ. ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು hondisibareyiri@gmail.comಗೆ ಮರೆಯದೆ ಬರೆದು ಕಳುಹಿಸಿ, ಇದು ನಮ್ಮ ಸರಿ ತಪ್ಪುಗಳನ್ನು ತಿದ್ದಿಕೊಂಡು ಇನ್ನಷ್ಟು ಉತ್ತಮ ಚಿತ್ರ ನೀಡಲು ಸಹಕಾರಿಯಾಗುತ್ತದೆ.
Thank you for your support.
Warm regards,
Ramenahalli Jagannatha & Friends
Movie Credits:
Movie: HONDISI BAREYIRI
Production Banner: SUNDAY CINEMAS
Produced By: Ramenahalli Jagannatha & Friends
Written & Directed By: Ramenahalli Jagannatha
Cinematography: Shanthi Sagar H.G
Music: Joe Costa
Editor: Akshay P Rao
Executive Producer: Shridhara Banavasi
Dialogues: Maasthi, Prashanth Rajappa & Ramenahalli Jagannatha
Sound Design: M. Gita Gurappa
Stunts: Mass Madha Choreography: Madan Harini, Santosh Shekar
Lyrics: K. Kalyan, Hrudaya Shiva, Ramenahalli Jagannatha
Co Director: Sharath Teja
Production Design: Vibha, Sharath K.V, Malla, Siddartha S
Costume Design: Nishara Kiran, Divya Reddy & Aparna R
Dubbing: Raja Shekar
Production Manager: T S Venkatesh
PRO: Harish Arasu
Stills: Manu Shankar Shivashankar Noorambada
Publicity Design: Praveen N Megalamani
VFX: SV Studios
Direction Team: Vishwa Shambulingappa, Aparna.R, Siddhartha.S , Nagarjun Bhupathi Sachin.G, Nandan Jonty, Sharath N.S, Karunakara GS
Subscribe to our You tube Channel: / @sundaycinemas4pm
Follow us on Instagram: / hondisibare. .
Like us on Facebook: profile.php?...
Follow us on Twitter: / sundaycinemas
#HondisiBareyiri #HondisiBareyirionyoutube #SundayCinemas #NaveenShankar #ArchanaJois #SamyuktaHornad #BhavanaRao #PraveenTej #Shree #AishaniShetty #JoeCosta #RamenahalliJagannatha #Hondisibareyirionprime #badukubandantesweekarisi #kannadaMovie #Sandalwood #Karnataka #KannadaFilmIndustry

Пікірлер: 1 100

  • @SUNDAY-CINEMAS
    @SUNDAY-CINEMASАй бұрын

    Contribute... ಆತ್ಮೀಯರೇ, ನಮ್ಮ SUNDAY CINEMAS ನಿರ್ಮಾಣ ಸಂಸ್ಥೆಯ ಈ ಚೊಚ್ಚಲ ಚಿತ್ರ “ ಹೊಂದಿಸಿ ಬರೆಯಿರಿ” ಯನ್ನು ಎಲ್ಲರೂ ಇನ್ನಷ್ಟು ಸುಲಭವಾಗಿ ನೋಡವಂತಾಗಬೇಕು ಎಂಬ ಉದ್ದೇಶದಿಂದ You tube ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದಾಗ ನಮ್ಮ ತಂಡಕ್ಕೆ ಈ ಎರಡು ವಿಷಯಗಳು ಗಮನಕ್ಕೆ ಬಂದವು. 1.) ನಮ್ಮ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಇನ್ನೂ stream ಆಗುತ್ತಿದ್ದರೂ, ಇದು INDIA, USA ಮತ್ತು UK ಹೊರತಾಗಿ ಬೇರೆ ದೇಶಗಳಲ್ಲಿ Streaming ಆಗುತ್ತಿಲ್ಲ ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು. 2.) ಥಿಯೇಟರ್ ನಲ್ಲಿ ಚಿತ್ರ ನೋಡಿರದ ಹಾಗೂ OTT subscription ಇರದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶ ದಿಂದ ಈ ಮೂಲಕ ನಿಮ್ಮ ಬಳಿ ಬರುತ್ತಿದ್ದೇವೆ ನಮ್ಮ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಾಸ್ಸಾಗಿಲ್ಲ ಆದರೂ ,You tube rental model ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ You Tube ನಲ್ಲಿ ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ contribute ಮಾಡಲಿ ಎಂಬ ನಿರ್ಧಾರದಿಂದ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಹಾಗೂ ಚಿತ್ರದ ಕೊನೆಗೆ ನಮ್ಮ ನಿರ್ಮಾಣ ಸಂಸ್ಥೆ “Sunday cinemas” ನ QR CODE , UPI ID ಹಾಗೂ ಬ್ಯಾಂಕ್ Details ಅನ್ನು ಲಗತ್ತಿಸಿಲಾಗಿದೆ ಜೊತೆಗೆ You tube Description ನಲ್ಲು ಇದರ ಬಗ್ಗೆ ಮಾಹಿತಿ ಇದೆ. ನಮ್ಮ “ಹೊಂದಿಸಿ ಬರೆಯಿರಿ” ಚಿತ್ರದ you tube link ನ್ನು ನಿಮ್ಮ social media ದಲ್ಲಿ, whats app Status ನಲ್ಲಿ share ಮಾಡುವ ಮೂಲಕ ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪ್ರೋತ್ಸಾಹಿಸಿ, ಈಗಾಗಲೇ Pre Production ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ. ಮನವಿ: Piracy ಯಿಂದ ಕಡಿಮೆ ಗುಣ ಮಟ್ಟದ ಚಿತ್ರ ನೋಡುತ್ತಿರುವವರೂ ಕೂಡ ಈಗ You tube ನಲ್ಲೆ ಉತ್ತಮ ಗುಣಮಟ್ಟದ ಚಿತ್ರ ನೋಡಿ. ಧನ್ಯವಾದಗಳು ರಾಮೇನಹಳ್ಳಿ ಜಗನ್ನಾಥ ಮತ್ತು ಸ್ನೇಹಿತರು To Support/Donate: Gpay/Phone Pay/Paytm/BHIM: +91-8904070385 UPI: sundaycinemas@ybl

  • @kirankumark6447

    @kirankumark6447

    Ай бұрын

    Wonderful and we always support this kind of movies....Waiting for next project...I watched almost 2 times in theatre and many times in Amazon....Definitely I watch now in KZread

  • @vrloveyou3627

    @vrloveyou3627

    Ай бұрын

    ಎಷ್ಟು ಒಳ್ಳೆ ಮನಸ್ಥಿತಿ ಸರ್ ನಿಮ್ಮ ಟೀಮ್ du

  • @vrloveyou3627

    @vrloveyou3627

    Ай бұрын

    ಖಂಡಿತ contribute ಮಾಡ್ತಿನಿ

  • @AnilAnil-xl3nr

    @AnilAnil-xl3nr

    Ай бұрын

    ಸೂಪರ್ ಬ್ರೋ 🙏ಮೂವಿ ಸೂಪರ್ ❤❤

  • @rakshith1942

    @rakshith1942

    Ай бұрын

    Super movie

  • @user-wp4mz4nh5i
    @user-wp4mz4nh5iАй бұрын

    ನವೀನ್ ಶಂಕರ್ ಅಣ್ಣಾ ಅಭಿಮಾನಿಗಳು ಯಾರ್ ಯಾರು ಇದ್ದಿರಾ ❤️

  • @yamanoorappavalikara3480

    @yamanoorappavalikara3480

    Ай бұрын

    ಅವರನ್ನು ನಾನು ಭೇಟಿ ಆಗಿದ್ದೀನಿ, ತುಂಬಾ ಒಳ್ಳೆವರು ❤️

  • @sureshraj3842

    @sureshraj3842

    Ай бұрын

    Am also bro

  • @kmpreethamkmp4742

    @kmpreethamkmp4742

    Ай бұрын

    Rudra ka sallar

  • @user-qq3ej6oi3u

    @user-qq3ej6oi3u

    Ай бұрын

    ನಾನು ಅವ ಚಡ್ಡಿ ದೋಸ್ತಗಳು ಮೊನ್ನೆ ಎಲೆಕ್ಷನ್ ಗೆ ಊರಿಗೆ ಬಂದ ಹಂಗ ಹೋಗ್ಯಾನ.... ಪೋನ್ ಮಾಡಿ ಬೈದ್ಯಾ sry ಗೆಳೆಯ ಅಂದ

  • @harsha.mharsha.m5538

    @harsha.mharsha.m5538

    Ай бұрын

    Bali❤❤❤

  • @manjubs3464
    @manjubs346421 күн бұрын

    ಹೇಳಿದ ತೀರದ ನೋವಲೂ.. ಅರ್ಥಪೂರ್ಣ ಚಿತ್ರ.. ಭಾವನೆಗಳಿಗೆ ಜೀವ ತುಂಬಿದಂತಿದೆ... 🙏🏼🙏🏼🙏🏼🙏🏼 ಹೊಂದಿಸಿ ಬರೆಯಿರಿ... Team hatsoff 🙏🏼 ಸೂಪರ್...

  • @ambrishambi3923
    @ambrishambi3923Ай бұрын

    ತುಂಬಾ ತುಂಬಾ ಹುಡುಕಿ ಸಾಕಾಗಿ ಹೋಗಿತ್ತು ಆದ್ರೆ ಯೂಟ್ಯೂಬ್ ಅಲ್ಲಿ ಸಡನ್ ಆಗಿ ನೋಡಿ ತುಂಬಾ ಖುಷಿ ಆಯಿತು ತುಂಬಾ ಚೆನ್ನಾಗಿದೆ ನೋಡಿ 🎉

  • @sunil.eswargondesaragond2056

    @sunil.eswargondesaragond2056

    Ай бұрын

    Sem bro ❤

  • @rahulchavan3677

    @rahulchavan3677

    Ай бұрын

    Sem bro ❤🎉

  • @peosys3796

    @peosys3796

    15 күн бұрын

    Aithu nodthivi

  • @BeereshHbevinahalli
    @BeereshHbevinahalli12 күн бұрын

    ಯೂಟ್ಯೂಬ್ ನಲ್ಲಿ ಒಂದೇ ಒಂದು bad comments ಇಲ್ಲದ ಅದ್ಭುತ ಕನ್ನಡ ಚಲನಚಿತ್ರ 👌❤️😍

  • @durgaprasad99250

    @durgaprasad99250

    4 күн бұрын

    💯👌❤️😍

  • @Kartikjh24
    @Kartikjh24Ай бұрын

    ಒಂದು ಚಿತ್ರದಲ್ಲಿ ಇಷ್ಟೊಂದು ಪ್ರಶಾಂತತೆ ಹೇಗೆ ತುಂಬಿದಿರಿ.... ಕನ್ನಡದ ಅತ್ಯುತ್ತಮ ಚಿತ್ರದಲ್ಲಿ ಒಂದು

  • @HarshanKumar-eu8dt
    @HarshanKumar-eu8dtАй бұрын

    One of the most under Rated movie in Kannada industry 🥲🥲 ಕನ್ನಡ ಚಿತ್ರರಂಗದಲ್ಲಿ ಸದಾ ಕಾಲ ಹಸಿರಾಗಿ ಉಳಿಯಲಿರುವ ಸಿನೆಮಾ ಇದು. ಇದೀಗ ಯೂಟ್ಯೂಬ್ ಮೂಲಕ ಮತ್ತಷ್ಟು ನೋಡುಗರನ್ನು ತಲುಪುತ್ತಿರುವ ವಿಷಯ ಖುಷಿ ನೀಡುವಂತದ್ದು. ❤❤

  • @marutikantikar4324

    @marutikantikar4324

    Ай бұрын

    Underrated?

  • @SUNDAY-CINEMAS
    @SUNDAY-CINEMAS14 күн бұрын

    ಆತ್ಮೀಯರೇ, ನೀವು "ಹೊಂದಿಸಿ ಬರೆಯಿರಿ " ಚಿತ್ರಕ್ಕೆ ತೋರುತ್ತಿರುವ ಪ್ರೀತಿಯಿಂದ, ಈಗಾಗಲೇ 7ಲಕ್ಷ views ಕಂಡಿದೆ, ನಮ್ಮದು ಹೊಸ ಚಾನೆಲ್ ಆದರೂ organic ಆಗಿ ಇಷ್ಟು reach ಆಗಿರುವುದಕ್ಕೆ ತುಂಬಾ ಖುಷಿ ಇದೆ. ನಿಮಗೆ ಸಿನಿಮಾ ಇಷ್ಟವಾದಲ್ಲಿ ಚಿತ್ರದ You tube link ಅನ್ನು ನಿಮ್ಮ WhatsApp ಸ್ಟೇಟಸ್, ಫೇಸಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ನಿಮ್ಮ whats app ಗ್ರೂಪ್ ಗಳಿಗೆ ಶೇರ್ ಮಾಡುವುದನ್ನು ಮರೆಯಬೇಡಿ.. ಹಾಗೆ ನಮ್ಮ ಈ ಹೊಸ ಚಾನೆಲ್ subscribe ಆಗುವುದನ್ನು ಮರೆಯಬೇಡಿ.. ಧನ್ಯವಾದಗಳು 🙏 ರಾಮೇನಹಳ್ಳಿ ಜಗನ್ನಾಥ ಮತ್ತು ಸ್ನೇಹಿತರು ಸಂಡೆ ಸಿನಿಮಾಸ್

  • @listing106
    @listing106Ай бұрын

    ಕಾಣದ ನೋವುಂಟು ಎಲ್ಲರೆದೆಯಲಿ, ಬಾಡಿಗೆ ಸಂತೋಷ ಎಲ್ಲರೆದುರಲಿ😍❤ ಸಾಹಿತ್ಯ🔥

  • @vishakachopadi1776

    @vishakachopadi1776

    Ай бұрын

    I downloaded that song and listening 👌

  • @rahuldvasu3972

    @rahuldvasu3972

    22 күн бұрын

    Ohh super Anna hamsalekha nu bariyalla hinge

  • @moni_amaravati5686
    @moni_amaravati5686Ай бұрын

    ನವೀನ್ ಶಂಕರ್ ಅವ್ರ ಕ್ಯಾರೆಕ್ಟರ್ ನನ್ನ ತುಂಬಾ ಕಾಡಿತ್ತು. ಬದುಕು ಬಂದಂತೆ ಸ್ವೀಕರಿಸಿ.... 👍

  • @khushinkhushin

    @khushinkhushin

    20 күн бұрын

    ಹೌದ

  • @VIJIKA07
    @VIJIKA0715 күн бұрын

    After watching this film i read almost all books of poornachandra tejasvi books 📚 this films motivates to accept the reality of life

  • @manjunathabkarigar8932
    @manjunathabkarigar8932Ай бұрын

    ಎಂಥ ಮೂವಿ ರೀ ಇದು ಅದ್ಭುತವಾಗಿದೆ 😍 ಲೈಫ್ ನಲ್ಲಿ ಪ್ರತಿಯೊಬ್ಬ ಮನುಷ್ಯನ ಬದುಕನ್ನು ಎಷ್ಟು ಚನ್ನಾಗಿ ಅನಾವರಣ ಗೊಳಿಸಿದ್ದಾರೆ. ಧನ್ಯವಾದಗಳು ಇಂತಹ ಮೂವಿನಾ ನೀಡಿದಕ್ಕೆ 👌👌

  • @BassammaB-nb1mc

    @BassammaB-nb1mc

    Ай бұрын

    Nija supre hagide 😘✨

  • @malateshmadiwalarmalateshm7701

    @malateshmadiwalarmalateshm7701

    Ай бұрын

    I love you ree​@@BassammaB-nb1mc

  • @nammurumandyabayalu6573

    @nammurumandyabayalu6573

    Ай бұрын

    ದಯವಿಟ್ಟು ಈ ಸಿನಿಮಾ ನೋಡುತ್ತಿರುವವರು ನಿಮಗೆ ಕೈಲಾದಷ್ಟು ಹಣ ನೀಡಿ 🙏 ನಾವು ಕೂಡ ಒಂದು ಸಿನಿಮಾ ಮಾಡಿ ಬಿಡುಗಡೆ ಮಾಡದೆ ಸೋತಿದ್ದೇವೆ, ಇಂತಹ ಒಳ್ಳೆ ಚಿತ್ರಗಳಿಗೆ ಹಣ ನೀಡಿ ಇದರ ಹಿಂದಿನ ನೋವುಗಳು, ಅಲೆದಾಟ, ಸಾಲಗಾರರ ಹಿಂಸೆ ಬೈಗುಳ ಇತ್ಯಾದಿ, ಸಿನಿಮಾ ಜಗತ್ತು ಗೆದ್ದರಷ್ಟೆ ಸೋತರೆ ಸತ್ತಂತೆ ನಮ್ಮ ಸಿನಿಮಾ ಜಗತ್ತು ಆದ್ದರಿಂದ, ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ.

  • @divakark2188
    @divakark218817 күн бұрын

    One of the best movie wonderful 😊👍 my favourite 🎉 ನಾವು ಎಷ್ಟು ಸಲಿ ನೋಡಿದರೂ ಸಾಕು ಎನಿಸದ ಒಂದು ಅತ್ಯ ಅದ್ಬುತ ಚಲನಚಿತ್ರ,,, ನಿರ್ದೇಶಕರಿಗೆ ನನ್ನದೊಂದು ನಮನ,,, ನವೀನ್ ಶಂಕರ್ sir acting super ❤ all over film is very good 👍. ಆದ್ರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂಥ ಸಿನಿಮಾ ಬೆಳೆಸೋದಿಲ್ಲ 😢

  • @iampaatil
    @iampaatilАй бұрын

    ಕನ್ನಡ ಚಿತ್ರರಂಗದಲ್ಲಿ ಸದಾ ಕಾಲ ಹಸಿರಾಗಿ ಉಳಿಯಲಿರುವ ಸಿನೆಮಾ ಇದು. ಇದೀಗ ಯೂಟ್ಯೂಬ್ ಮೂಲಕ ಮತ್ತಷ್ಟು ನೋಡುಗರನ್ನು ತಲುಪುತ್ತಿರುವ ವಿಷಯ ಖುಷಿ ನೀಡುವಂತದ್ದು. 🙏♥️

  • @SUNDAY-CINEMAS

    @SUNDAY-CINEMAS

    Ай бұрын

    ತುಂಬು ಹೃದಯದ ಧನ್ಯವಾದಗಳು.. ಚಿತ್ರ You Tube ನಲ್ಲಿ ಬಿಡುಗಡೆಯಗಿರುವ ಬಗ್ಗೆ ನಿಮ್ಮ ಪರಿಚಿತರೆಲ್ಲರಿಗೂ ತಿಳಿಸಿ.. ಇನ್ನು ಹೆಚ್ಚಿನ ಜನರಿಗೆ ತಲುಪಲು ಸಹಕರಿಸಿ.. ಮರೆಯದೆ ನಿಮ್ಮ social media ನಲ್ಲಿ ಚಿತ್ರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಚಿತ್ರದ You tube link ಜೊತೆ ಶೇರ್ ಮಾಡಿ.. ಧನ್ಯವಾದಗಳು 🙏

  • @Rakesh_adiga
    @Rakesh_adigaАй бұрын

    Ranjith Pallavi Character Pure Gem 🥹🤌🏻❤️

  • @rameshmalipatil4714

    @rameshmalipatil4714

    Ай бұрын

    ❤❤❤

  • @nandanbhat8148
    @nandanbhat8148Ай бұрын

    ನಾನು ನೋಡಿದ ಅತ್ಯಂತ ಒಳ್ಳೆಯ ಚಲನಚಿತ್ರಗಳಲ್ಲಿ ಇದೂ ಕೂಡ ಒಂದು.. ಇಂಥಾ ಅದ್ಭುತ ಸಿನಿಮಾ ನೀಡಿದ ನಿಮಗೆ ಧನ್ಯವಾದಗಳು..🙏😊

  • @hjmanjeshkumar4522
    @hjmanjeshkumar4522Ай бұрын

    ಇತ್ತೀಚೆಗೆ ಬರುತ್ತಿರುವ ಹೊಸ ಕನ್ನಡ ನಟರ ಸಿನೆಮಾಗಳು ತುಂಬಾ ಚೆನ್ನಾಗಿರುತ್ತವೆ

  • @Shammius776
    @Shammius776Ай бұрын

    ದಯಮಾಡಿ ನೋಡಿ ನಾನು ಹಲವು ಬಾರಿ ನೋಡಿದ್ದೇನೆ ಪ್ರತಿ ಸಲವೂ ವಿಭಿನ್ನ ಅನುಭವ ಕಲಿಯುವುದು ತುಂಬಾ ಇದೆ.ಧನ್ಯವಾದಗಳು ಇಡೀ ಚಿತ್ರ ತಂಡಕ್ಕೆ.......

  • @ravishankarhegde9329
    @ravishankarhegde93299 күн бұрын

    ತುಂಬಾssss ಚೆನ್ನಾಗಿದೆ. ಪೋಸ್ಟರ್ ನೋಡಿದಾಗ ಸಿನಿಮಾ ನೋಡುವ ಆಸೆ. ಇಷ್ಟು ನವಿರಾಗಿ ಜಿಗ್ ಜಿಗ್ಗ್ ಎನ್ನುವ ಶಬ್ದದ ಗಿಜಿ ಇಲ್ಲದೇ ತುಂಡು ಬಟ್ಟೆಯ ಅಸಹ್ಯ ಇಲ್ಲದೇ ಒಳ್ಳೆಯ ಸಿನಿಮಾ. ಧನ್ಯವಾದ ನಿಮಗೆ

  • @kittystudioz8302
    @kittystudioz8302Ай бұрын

    🙏🏻🙏🏻 ಖಂಡಿತವಾಗಿ ಸಹ ಕನ್ನಡಿಗರ ಬೆಂಬಲ ಈ ಸಿನಿಮಾಗೆ ಹಾಗು ತಂಡಕ್ಕೆ ಅತ್ಯಗತ್ಯ, ದಯಮಾಡಿ ಎಲ್ಲಾರೂ ಸಹ ಬೆಂಬಲಿಸೋಣ 💐💐

  • @rachanarachanasb.7598
    @rachanarachanasb.7598Ай бұрын

    ಈ ಸಿನಿಮಾ ನೋಡಿದ ಮೇಲೆ ನನ್ನ ಜೀವನದ ಕೆಲವು ಘಟನೆಗಳನ್ನು ಬದಲಾಯಿಸಿ ಕೊಳ್ಳಬೇಕೆಂದು ಬದಲಾಯಿಸಿ ಕೊಳ್ಳಬೇಕೆಂದು ಇಷ್ಟಪಡುತ್ತೇನೆ ಯಾಕೆಂದರೆ ಪ್ರೀತಿ ಮಾಡುವುದು ದೊಡ್ಡ ವಿಷಯ ಅಲ್ಲ ಅದನ್ನು ಅರ್ಥಮಾಡಿಕೊಂಡು ಜೊತೆಯಲ್ಲಿ ಇರಬೇಕು ಅಂತ ತಿಳಿಸಿಕೊಟ್ಟಿದೆ ಅದಕ್ಕೆ ಅದಕ್ಕೆ ನಾನು ನನ್ನ ಗಂಡ ಎಷ್ಟೇ ಜಗಳ ಆಡಿದರು ಇನ್ನ ಮೇಲೆ ಯಾವತ್ತು ಬಿಟ್ಟು ಹೋಗಲ್ಲ ಇಷ್ಟು ಅರ್ಥವಾಗಿರುವ ಸಿನಿಮಾವನ್ನು ನನ್ನ ಜೀವನದಲ್ಲಿ ಯಾವತ್ತು ನೋಡಿಲ್ಲ 😊❤

  • @Kavitassudi

    @Kavitassudi

    Ай бұрын

    Same nanu nan ganda jagala madkondaga nanu bittogbeku anta ankoltidde e movie nodidmele nanu nan jeevanadalli kelavondishtanna badalayisikollabeku anta ankondidini

  • @SUNDAY-CINEMAS

    @SUNDAY-CINEMAS

    Ай бұрын

    ನಿಮ್ಮ ಸಾಲುಗಳಿಗೆ ತುಂಬು ಹೃದಯದ ಧನ್ಯವಾದಗಳು.. 🤗 ಚಿತ್ರದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೆಲ್ಲರಿಗೂ ನೋಡುವಂತೆ ತಿಳಿಸಿ.. ಧನ್ಯವಾದಗಳು 😊

  • @Sandeepalc

    @Sandeepalc

    Ай бұрын

    Hi

  • @ganeshgt7631

    @ganeshgt7631

    17 күн бұрын

    ಜೀವನದ ಸಾಗುತ್ತಿರುವ ಬದುಕು ಜೀವನ ದಲ್ಲಿ ಹೊಂದಾಣಿಕೆ ಬಹುಮುಖ್ಯ ಘಟಕ ಸಣ್ಣ ತಪ್ಪುಗಳು ಬೆಟ್ಟದ ಆಗುತ್ತದೆ ಆದರೆ ಅದನ್ನೇ ಹೊಂದಿಸಿ ಬರೆಯಿರಿ ಜೀವನ ಸಾಗುತ್ತಿದೆ

  • @parashuramritti736

    @parashuramritti736

    16 күн бұрын

    ಇತರ ಡೌವ್ ಬೇಡ

  • @kiranrotti2174
    @kiranrotti2174Ай бұрын

    ಪ್ರತಿಯೊಬ್ಬರ ಮನದಾಳದಲ್ಲಿ ಹಚ್ಚ ಹಸಿರಾಗಿ ಉಳಿಯುವಂತ ಸಿನಿಮಾ, ಪ್ರತಿಯೊಂದು ಪಾತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ, ರಂಜಿತ ಪಲ್ಲವಿ ಬದುಕು ಸಾಗಿದಂತೆ ಜೀವಿಸಬೇಕು ಎಂದು ಕಲಿಸಿಕೊಟ್ಟ ಪಾತ್ರಗಳು, ಯುವ ಪೀಳಿಗೆ ಈ ಚಿತ್ರ ನೋಡಿ ಕಲಿಯಬೇಕಾದ್ದು ತುಂಬಾ ಇದೆ, ಅದ್ಭುತವಾದ ಚಿತ್ರ.. 💝

  • @vidyakulkarni740
    @vidyakulkarni740Ай бұрын

    ತುಂಬಾ ಚನ್ನಾಗಿದೆ 👌.. ಹೃದಯ ಮುಟ್ಟುವ ಚಿತ್ರ.. ಕಣ್ಣಲ್ಲಿ ನೀರು ಬಂತು ತುಂಬಾ ದಿನದ ನಂತರ ಒಂದು ಒಳ್ಳೆ ಚಿತ್ರ ನೋಡಿದ ಹಾಗೆ ಆಯ್ತು 🙂

  • @annapurnavmaradagi1122
    @annapurnavmaradagi112228 күн бұрын

    ನಾವು ಜೀವನದಲ್ಲಿ ಅಂದುಕೊಂಡಿದ್ದೆ ಒಂದು, ಆಗೋದೇ ಇನ್ನೊಂದು 😓 ಬದಕು ಬಂದಂತೆ ಸ್ವೀಕರಿಸಿ 👏👏

  • @chethanvasishta9208
    @chethanvasishta9208Ай бұрын

    ಈ ಸಿನಿಮಾ, ಇದರಲ್ಲಿನ ಸಂಭಾಷಣೆ, ಸಂಗೀತ ಸಾಹಿತ್ಯ ನಿಜಕ್ಕೂ ಒಂದು ಮಾಯವೇ ಸರಿ... ಮನಸ್ಸಿಗೆ ಹತ್ತಿರವಾದ ಅಪರೂಪದ ಸಿನಿಮಾ ಇದು....❤

  • @dharawadtimes6233
    @dharawadtimes6233Ай бұрын

    ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ✍🏿. ಇದೊಂದು ಅದ್ಭುತ ಪೇಂಟಿಂಗ್, ಪ್ರಕೃತಿಯನ್ನೇ ಜೀವನ ಅನ್ಕೊಂಡ ಸರಳ ಜೀವಿಗಳ ಭಾವನೆ!!!... ✍🏿 ಜೈ ಪೂಚಂತೇ... 🦚💐 ಎಲ್ಲ ಪೂಚಂತೇ ಅಭಿಮಾನಿಗಳು,ವೀಕ್ಷಿಸಿ,ಅಭಿನಂದಿಸಿ, ಆಶೀರ್ವದಿಸಿ 🙏🏿🙏🏿

  • @SUNDAY-CINEMAS

    @SUNDAY-CINEMAS

    Ай бұрын

    ಧನ್ಯವಾದಗಳು 🙏

  • @RamangoudaBPatil
    @RamangoudaBPatil22 күн бұрын

    A single film contain too many matters, best film especially for the present generation. I will never forget 2 films 1. Naduve antaravirali 2. Hondisi bareyiri😚

  • @divyasigeon.c4130
    @divyasigeon.c4130Ай бұрын

    ತುಂಬಾ ದಿನಗಳ ನಂತರ ಒಂದು ಒಳ್ಳೆ ಸಿನಿಮಾ ನೋಡಲು ಅವಕಾಶ ಸಿಕ್ಕಿತು. Hats off all❤

  • @ManjuHosamani-vl9fu
    @ManjuHosamani-vl9fuАй бұрын

    The way of Ranjit character written so impactfully ....what a acting...he kills every second .....wow

  • @hosteldayz12
    @hosteldayz1223 күн бұрын

    I am watching this film the next day morning after I have finished my engineering at Bangalore.This one is good and no Bollywood-Hollywood film has provided such a meaningful and practical film, thanks for providing such a valuable content . Let's inculcate sach values in our life❤

  • @SUNDAY-CINEMAS

    @SUNDAY-CINEMAS

    21 күн бұрын

    Thank you so much😊

  • @bharatham1070
    @bharatham1070Ай бұрын

    Superb movie.. 3 times nodidini Amazon Prime nalli. Nam Athihally sakath agi bandide👌👌💝

  • @vichankumar1905
    @vichankumar1905Ай бұрын

    ಈ ಸಿನಿಮಾ ತುಂಬಾ ಇಷ್ಟ ಆಯಿತು ಕೆಲವು ದೃಶ್ಯಗಳು ಕಣ್ಣಲ್ಲಿ ನೀರು ತರಿಸಿದವು ಇಂತಹ ಅದ್ಭುತವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಹೊಂದಿಸಿ ಬರೆಯಿರಿ ಚಿತ್ರ ತಂಡಕ್ಕೆ. ಇಂತಹ ಚಿತ್ರಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬಂದು ಮೆಚ್ಚುಗೆ ಗಳಿಸಲಿ ಚಿತ್ರದ ಕ್ಲೈಮ್ಯಾಕ್ಸ್ ಮನಸಿಗೆ ತುಂಬಾ ಬೇಸರವನ್ನುಂಟು ಮಾಡಿತ್ತು ನಿಜವಾದ ಮಾತು ಬದುಕು ಬಂದಂತೆ ಸ್ವೀಕರಿಸಬೇಕು ಎಂಬುದು 🙏 ❤❤❤❤❤❤❤❤❤ ನಾನು ದೇವರಲ್ಲಿ ಕೇಳುವುದಿಷ್ಟೇ ಯಾರ ಜೀವನದಲ್ಲಿ ಹೆಚ್ಚು ನೋವಿನ ಘಟನೆಗಳು ನಡೆಯದಿರಲಿ ಎಂದು

  • @atavientertainments..8433
    @atavientertainments..843322 күн бұрын

    Regret I coudnt watch this in theatre.. Wat a soullful movie it is..! Really much needed content for this generation !! I liked it very much!❤❤❤

  • @SUNDAY-CINEMAS

    @SUNDAY-CINEMAS

    21 күн бұрын

    Namma next production movie na Theatre alle nodi. Thank you.. spread the word about our KZread release..

  • @shruthikhshruthikh230

    @shruthikhshruthikh230

    18 күн бұрын

    Super movie ​@@SUNDAY-CINEMAS

  • @rameshgouda7441
    @rameshgouda7441Ай бұрын

    ಕನ್ನಡ ಚೀನಿಮಾ ಕ್ಷೇತ್ರದ ಬಹು ಪ್ರೀತಿಯ ಚಲನಚಿತ್ರ ತುಂಬಾ ಚನ್ನಾಗಿದೆ, ಅರ್ಥಗರ್ಭಿತ ವಾಗಿದೆ ಎಷ್ಟು ಸಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅನಿಸುವ ಮುಗ್ದ ಮನಸುಗಳ ಪ್ರೀತಿಯ ಕಥೆ very thanks to the team of this moive tqq💐💐

  • @daneshwarisvijayanagardanu8208
    @daneshwarisvijayanagardanu82084 сағат бұрын

    ದೇವರು ನೋವಲ್ಲಿ ಇರೋರಿಗೆನೆ ಮತ್ತೆ ಮತ್ತೆ ನೋವು ಕೋಡುತ್ತಾನೆ ಅನ್ನೋದಕ್ಕೆ ಈ ಚಿತ್ರ ಸಾಕ್ಷಿ.ಆಸೆ ಹುಟ್ಟಿಸಿ ಮತ್ತೇ ಕಿತ್ತುಕೊಳ್ಳುವ ಅವನು ತುಂಬಾ ಕ್ರುರಿ....💔

  • @attitude6524
    @attitude652410 сағат бұрын

    ಬದುಕು ಬಂದಂತೆ ಸ್ವೀಕರಿಸಿ.......❤ ಹೃದಯ ಮುಟ್ಟಿತು ಈ ಸಿನಿಮಾ ❤

  • @vrloveyou3627
    @vrloveyou3627Ай бұрын

    18 ಮೇ ನನ್ನ ನೆನಪು, ನಾನು ನನ್ನ ಭಾವನೆ ಈ ಮೂವಿ ನಲ್ಲಿ ಇರೋದು ಭಾವನೆ ಇಷ್ಟು ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ ಇಷ್ಟು ವಿಭಿನ್ನ ಪಾತ್ರಗಳು ಆದ್ರೆ ಯಲ್ಲರ ಭಾವನೆ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಂಗೆ ಹೆನೋ ನನ್ನ ಮನಸಲ್ಲಿ ನಂಗೆ ಗೊತ್ತಿಲ್ಲದ ನೋವು ಇತ್ತು ಅದು ಈ ಮುಂಜಾನೆ ಆಚೆ ಬಂತೂ ಮನಸು ತುಂಬಾ ನಿರಾಳ ಅನಿಸ್ತಿದೆ ಸರ್ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ ಇನ್ನೂ ಇಂತಹ ಒಳ್ಳೆ ಮೂವಿ ಮಾಡಿ ಎಂದು ಹರಿಸುತ್ತೇನೆ

  • @devaiahdevaiah5175

    @devaiahdevaiah5175

    Ай бұрын

    Mine 19th May 😊

  • @ShilpaB-mf1ug

    @ShilpaB-mf1ug

    Ай бұрын

    20th may❤

  • @asuran2.086

    @asuran2.086

    25 күн бұрын

    16th may 💔🖤

  • @veenamk1503
    @veenamk1503Ай бұрын

    This is 3rd time i have watched...ಕಣ್ಣೀರು ಬಂತು...ಎಷ್ಟೋ ಸಲ ಜೀವನಾ ಸಾಕು, ನನ್ನು ನಿನ್ನ ಹತ್ರ ಕರ್ಸ್ಕೋರಿ ಪಪ್ಪಾ ಅಂತಿದ್ದೆ , ಆದ್ರೆ ಇವಾಗ ಎಷ್ಟೇ ಕಷ್ಟ ಇದ್ರು ಬದುಕಿ ಬಾಳಿ ಜೀವನಾ ರೂಪಸ್ಕಬೇಕು ಅಂತ ಅನ್ಸ್ತಿದೆ....every one must watch this movie and they definitely change their mind to make beautiful life.

  • @SUNDAY-CINEMAS

    @SUNDAY-CINEMAS

    Ай бұрын

    ತುಂಬು ಹೃದಯದ ಧನ್ಯವಾದಗಳು.. ಖುಷಿ ಇರಲಿ ಬದುಕಲಿ

  • @bharathgowda9650
    @bharathgowda9650Ай бұрын

    ಇವತ್ತಿನ ಜನ ಜೀವನದ ಜಂಜಾಟದಲಿ ಹೇಗೇ ಜೀವನ ನಡೆಸ ಬಹುದೆಂದು || ತೋರ್ಸಿಕೋಟಿದಕೆ ತುಂಬ ದಾನ್ಯವಾದ . Good massage for young generation ...all the best

  • @ambikafs7242
    @ambikafs724214 күн бұрын

    ಬದುಕು ಬಂದಂತೆ ಸ್ವೀಕರಿಸಿ.... ಈ ಒಂದು ಸಾಲಲ್ಲಿ ಅದೆಷ್ಟೂ ಅರ್ಥವಿದೆ ಎಂದರೆ ಅನುಭವಿಸಿದವರಿಗೇನೆ ಅದರ ಮಹತ್ವ ತಿಳಿಯುವುದು😊ತುಂಬಾ ಒಳ್ಳೆಯ ಸಿನಿಮಾ ❤

  • @rockingstaryash1986
    @rockingstaryash1986Ай бұрын

    Hit Like If you Still feel regret for not watching this Epic movie in Theater 😁

  • @VIJIKA07
    @VIJIKA07Ай бұрын

    One of the best film in my life what a Chrecter of Ranjith

  • @dadapeers8008
    @dadapeers8008Ай бұрын

    ಈ ಸಿನಿಮಾ ನಿರ್ದೇಶಕರಿಗೆ. ಕೋಟಿ ಕೋಟಿ ಧನ್ಯವಾದಗಳು 🙏 ಈ ಸಿನಿಮಾ ನೀಡಿದಕ್ಕೆ

  • @mr__shree___
    @mr__shree___Ай бұрын

    ಈ ಒಂದು ಚಲನಚಿತ್ರವನ್ನು ನೋಡಿ ನನಗೆ ತುಂಬಾ ಖುಷಿ ಆಯ್ತು ಹಾಗೆ ನಂಗೆ ಹೊಸ ಅನುಭವ ಮೂಡಿಸಿತು ಇದರಲ್ಲಿ ನಟನೆಯನ್ನು ಮಾಡಿದ ಎಲ್ಲ ನಟನೆಗಾರರಿಗೆ ಮತ್ತು ಆ ತಂಡಕ್ಕೆ ಧನ್ಯವಾದಗಳು. ಏಕೆಂದರೆ ಕನ್ನಡ ಚಿತ್ರರಂಗಕ್ಕೆ ಇದು ಒಂದು ಒಳ್ಳೆಯ ಸಿನಿಮಾ 👍BEST OF LUCK TO ALL TEAM AND ACTORS 🙌

  • @pavanpavann4056
    @pavanpavann4056Ай бұрын

    ಜೀವನ ಒಮ್ಮಮ್ಮೆ ಹೊಂದಿಸಿ ಬರೀಬೇಕಾಗುತ್ತೆ ನಾನು ಕಂಡಂತ ಹೃದಯಕ್ಕೆ ಮುಟ್ಟುವಂತ ಮೂವಿ ಎಲ್ಲರೂ ನೋಡುವಂತ ಮೂವಿ ಸೂಪರ್ ❤

  • @saisavalagi6393
    @saisavalagi6393Ай бұрын

    ಕನ್ನಡ ಚಿತ್ರ ರಂಗದ ಯಶಸ್ವಿ ಆಗಲು ಹಿಂತಹ ಚಿತ್ರ ಗಳು ಇನ್ನೂ ಅನೇಕ ಬಗೆಯ ಕತೆಗಳು ಮುಖ್ಯವಾಗಿವೆ ಸೂಪರ್ ಮೂವೀ ...

  • @manjunathvaddatti940
    @manjunathvaddatti940Ай бұрын

    ಬದುಕು ಬಂದಂತೆ ಸ್ವೀಕರಿಸುವುದೇ ಜೀವನ. ಕನ್ನಡ ಚಿತ್ರರಂಗದ ಒಂದು ಒಳ್ಳೆಯ ಸಿನಿಮಾ. ಸಂಡೇ ಸಿನಿಮಾ ಟೀಮ್ ಇನ್ನೂ ಹೆಚ್ಚು ಇಂತಹ ಸಿನಿಮಾ ನಿರ್ಮಾಣ ಮಾಡಲಿ ಎಂದು ❤ ಆಶಿಸುತ್ತೇನೇ

  • @rameshkambikambi511
    @rameshkambikambi511Ай бұрын

    ತುಂಭಾ ಅದ್ಭುತವಾದ ಚಿತ್ರ... ನೋಡಿ ಎಲ್ಲರೂ... ಒಳ್ಳೆ ಸಂದೇಶ ಇದೆ ನಮ್ಮ ಬದುಕಿಗೆ 😊 ನನ್ನ ಕೆಲವು ಮನ ಕುಲುಕುವ ಚಿತ್ರಗಳಲ್ಲಿ ಇದು ಒಂದು ❤️💐ಮತ್ತೆ ಇನ್ನಷ್ಟು ಹಿಂತಹ ಚಿತ್ರಗಳು ಬರಲಿ...

  • @vishakachopadi1776
    @vishakachopadi1776Ай бұрын

    The climax of the movie, made me cry, this movie will be always close to my heart like Mungaru Male, Gaalipata, Aakash, its not just movie, it brought so many memories to me. Wonderful performance 👏👏👏

  • @rudrakshiproductions1638
    @rudrakshiproductions1638Ай бұрын

    ಏನೋ ಒಂತರ ಮನಸಿಗೆ ಆನಂದ.. ಈ ಸಿನೆಮಾ ನೋಡಿದಮೇಲೆ..❤

  • @chayakumarsedutainment4799
    @chayakumarsedutainment47993 күн бұрын

    life alli ellarigu ondella ondu reeti connect ago anta movie.. thanks for making this movie...

  • @PrabhakarKoppal
    @PrabhakarKoppalАй бұрын

    ತುಂಬಾ ದಿನಗಳ ನಂತರ, ಒಂದು ಅದ್ಭುತವಾದ ಕನ್ನಡ ಸಿನಿಮಾ ನೋಡಿದೆ 😊 , ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಎಲ್ಲಾ ನಟ, ನಟಿಯರಿಗೆ 😍🙏

  • @user-lp4wy4sz5x
    @user-lp4wy4sz5x21 күн бұрын

    ಮೂವಿ ಸೂಪರ್ but ನವೀನ್ ಶಂಕರ್ ಅವ್ರ ಪಾತ್ರ ಮನಸು ಮುಟ್ಟಿತು 🥹 ❤️

  • @vijaybagalkot5455
    @vijaybagalkot5455Ай бұрын

    ತುಂಬಾ ಚೈನಾಗಿ ಮೂಡಿ ಬಂದಿದ್ದ ಮೂವಿ ಭಾವನೈ ಗೇ ತುಂಬಾ ಹತ್ತಿರವಾದದು ಮೂವಿ ಅಲ್ಲಾ ಕ್ಯಾರೆಕ್ಟರ್ ಸೂಪರ್ 😔😔😔❤️👌🙏

  • @Bindukh-yn1kp
    @Bindukh-yn1kp23 сағат бұрын

    ನಾನು ನೋಡಿದ ಅತ್ಯುತ್ತಮ ಕನ್ನಡ ಚಲನಚಿತ್ರ ❤

  • @HemanthGowda-ct1jy
    @HemanthGowda-ct1jy22 күн бұрын

    ಬದುಕು ಬಂದಂತೆ ಸ್ವೀಕರಿಸು good lines❤❤❤

  • @ollehudgavivi1972
    @ollehudgavivi197222 күн бұрын

    ಜೀವನಚರಿತ ಚಿತ್ರ ಇದು ಹೃದಯ ತುಂಬಿ ಬಂತು ನೋಡ್ತಾ ನೋಡ್ತಾ ನನ್ನ ಜೀವನ ನಾನೇ ನೋಡ್ತಾ ಇದೀನಾ ಅನಿಸಿತು ರಂಜಿತ್ ಇಡಿ ಚಿತ್ರ ತುಂಬಿದೆ..😓❤

  • @manasaaradhya5901
    @manasaaradhya5901Ай бұрын

    Movie sub title ali heldange Baduku bandante swikarisu❤️ olle movie must watch friendship value sambangala value yella chanagi movie li nodsidare😊nd more over naveen Shankar avr acting heart touching😇 evgina generation ge olle message kodo movie😊

  • @vidyashreepatil1258
    @vidyashreepatil1258Күн бұрын

    After long time saw one film without skipping and got tears in my eye 😢😢

  • @SUNDAY-CINEMAS

    @SUNDAY-CINEMAS

    3 сағат бұрын

    Thank you so much🤗 spread the word about our You tube release🤗

  • @MahanteshBannishetti
    @MahanteshBannishettiАй бұрын

    ತುಂಬಾ ಅದ್ಭುತವಾದ ಚಲನಚಿತ್ರ ಎಲ್ಲಾ ಕಲಾ ತಂಡದವರಿಗೂ ತುಂಬಾ ಧ್ಯವಾದಗಳು

  • @Suraj-wg7ru
    @Suraj-wg7ruАй бұрын

    One of the best movies ever watched ❤

  • @akash.lakkundi
    @akash.lakkundiАй бұрын

    ಬದುಕು ಬಂದಂತೆ ಸ್ವೀಕರಿಸಿ ❤ ಸದಾಕಾಲ ಮನಸೊಳಗೆ ಅಚ್ಚಳಿಯದೇ ಉಳಿಯುವ ಚಿತ್ರ ಕೊಟ್ಟಂತ ನಿರ್ದೇಶಕರಿಗೆ ಮತ್ತು ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ❤ All time Fav movie 🙏

  • @SUNDAY-CINEMAS

    @SUNDAY-CINEMAS

    Ай бұрын

    ನಿಮ್ಮ ಅನಿಸಿಕೆಗಳಿಗೆ ತುಂಬು ಹೃದಯದ ಧನ್ಯವಾದಗಳು 🙏

  • @user-qf8ir8yc7x
    @user-qf8ir8yc7x12 күн бұрын

    ನಾನು ನೋಡಿದ ಅತ್ಯಂತ ಒಳ್ಳೆಯ ಚಲನಚಿತ್ರಗಳಲ್ಲಿ ಇದೂ ಕೂಡ ಒಂದು.. ಇಂಥಾ ಅದ್ಭುತ ಸಿನಿಮಾ ನೀಡಿದ ನಿಮಗೆ ಧನ್ಯವಾದಗಳು..

  • @jayadevashree1999
    @jayadevashree1999Ай бұрын

    First comment,its asom,, ಪ್ರತಿಯೊಂದು ನೆನಪುಗಳು ಈ ಸಿನಿಮಾದಲ್ಲಿ ಇದೆ ,,,, ಹೃದಯದ ಬಾಗಿಲು ಮತ್ತೊಮ್ಮೆ ತಟ್ಟುವಂತ ಮೂವೀ,

  • @kirankumark6447
    @kirankumark6447Ай бұрын

    Wonderful and we always support this kind of movies....Waiting for next project...I watched almost 2 times in theatre and many times in Amazon....Definitely I watch now in KZread

  • @Hubli791
    @Hubli791Ай бұрын

    very nice movie , loved it. Baduku bandante sweekarisi , what a powerful statement.

  • @vinayakumarn1465

    @vinayakumarn1465

    Ай бұрын

    ಅಷ್ಟೇ ಅಲ್ಲ, ... ಜೊತೆಗಿರುವವರ ಜೊತೆ ಜೀವಿಸಿ ... ಎಂದು ಹೊಂದಿಸಿ ಪೂರ್ಣ ಗೊಳಿಸಿದ್ದಾರೆ ಒಬ್ಬ ಸಹೃದಯಿ .

  • @bhuvis9999
    @bhuvis99992 күн бұрын

    Wow one of the best move in kannada sakkatha agide movee❤❤❤❤

  • @dakshithhm379
    @dakshithhm37925 күн бұрын

    My type of movie after long days.... Very happy.... Wonderful movie.... Lovely movie... Plz watch it without any doubts

  • @shrikanthbetageri6050
    @shrikanthbetageri6050Ай бұрын

    ಸರಳವಾದ ಸುಂದರವಾದ ಅದ್ಭುತವಾದ ನಮ್ಮ ಕನ್ನಡ ಸಿನಿಮಾ

  • @BhoomikaBhoomi-xn9oj
    @BhoomikaBhoomi-xn9ojАй бұрын

    ಬದುಕು ಬಂದಂತೆ ಸ್ವೀಕರಿಸುವುದ ಜೀವನ ❤

  • @veereshakm8479

    @veereshakm8479

    Ай бұрын

    Hagadre ase padodikke artha ne erolla bidi 🙄

  • @ninitavlogskannada8502
    @ninitavlogskannada85024 күн бұрын

    Tumba chanagide movie very nice❤❤ definitely watch this 🎉🎉

  • @thammanna456
    @thammanna45629 күн бұрын

    ಪ್ರಪಂಚ ಸುಂದರ್ವಾಗಿ ಕಾಣ್ಸೊದ್ಕಿಂತ ಸ್ವಚ್ಛವಾಗಿ ಕಾಣ್ಸುದ್ರೆ ಸಾಕು ❤️🧘

  • @sachu27190
    @sachu27190Ай бұрын

    What A Feel Good Movie it Is 😍❤️ Everyone should make themself free to watch this movie and understand life better Atleast from here on 🙏🏻🥰

  • @shrur3527
    @shrur352716 күн бұрын

    ಅದ್ಭುತವಾದ ಸಿನಿಮಾ 🙏🙏❤️❤️ ಪ್ರತಿ ಸಾಲು, ಸಾಹಿತ್ಯ, ಹಾಡು, ಸಂಗೀತ, ಪ್ರತಿಯೊಬ್ಬರ ನಟನೆ ಅದ್ಬುತ 🙏🙏❤️❤️ ನಿಮ್ಮ ತಂಡಕ್ಕೆ ದೇವರು ಒಳ್ಳೇದು ಮಾಡಲಿ 🙏🙏❤️❤️ ಹೀಗೆ ಉತ್ತಮ ಸಿನಿಮಾ ಮಾಡಿ, ತುಂಬಾ ಎತ್ತರಕ್ಕೆ ಬೆಳೆಯಿರಿ 🙏🙏❤️❤️ ಈ ರೀತಿ ಒಳ್ಳೇ ಸಿನಿಮಾ ಥಿಯೇಟರ್ ಲಿ ಓಡಲಿಲ್ಲ ಎಂಬುದೇ ಬೇಸರ 🙄 ನನ್ನ ಸಂತೋಷಕ್ಕೆ ನಿಮಗೆ ಪ್ರೋತ್ಸಾಹಿಸೋಕ್ಕೆ ನನ್ನ ಕಾಣಿಕೆ ನೀಡುತ್ತಿದ್ದೇನೆ 🙏🙏❤️❤️

  • @sankeernagowda8725
    @sankeernagowda87252 күн бұрын

    Abbhaa... story bardirovru great nijvaglu... nam generation avrge olle message...

  • @SUNDAY-CINEMAS

    @SUNDAY-CINEMAS

    3 сағат бұрын

    Dhanyavadagalu 🤗

  • @narayanaprathik9416
    @narayanaprathik941622 күн бұрын

    It was really fantastic and fabulous. I lost my heart after watching this movie. Really good. Special thanks to the director, story writer, dialogue writer, song composer and all the actor who are took part in this movie. In last thing is u gave the good tribute the soldier family. It was literally good. Good message u r sharing to the society. I loved it. Thank you ❤❤❤

  • @black_peppper3860
    @black_peppper3860Ай бұрын

    Tiger annange jai 💪🏻

  • @neelu_kannada_new_movies.
    @neelu_kannada_new_movies.9 күн бұрын

    ಹೊಂದಿಸಿ ಬರೆಯಿರಿ ಚಿತ್ರ , ಬಹಳ ಅರ್ಥಪೂರ್ಣವಾದ ಭಾವನೆಗಳು ತುಂಬಿರುವಂತಹ ಚಿತ್ರ. ಅತ್ಯಂತ ಮನಸ್ಸಿನ ಮೇಲೆ ಗಾಯ ಮಾಡಿದಂತಹ ಈ ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿದೆ. ❤❤❤❤❤

  • @NaguRamesh-zf8it
    @NaguRamesh-zf8it8 күн бұрын

    ತುಂಬಾ ಜವಾಬ್ದಾರಿಯುತ ಅರ್ಥಪೂರ್ಣ ಸಿನೆಮಾ ,thank you so much sir.💯💐🤝❤

  • @meghanam4218
    @meghanam4218Ай бұрын

    One of the best movie....in KFI...big salute to the whole team....badukannu noduva reethi haagu adunnu swikarisiva reethi....ondu olle reethiyalli ee cinema nanna badukige bahala mukya vagida Jagannath Sir....nimma next movie goskara kayutiruva.... abhimani...adastu bega ondu olle suddi barali embudu nanna bedike🙏🙏

  • @thegameaddictor8336
    @thegameaddictor8336Ай бұрын

    Thumba adbutavada cinema nagu aalu sukha dukha family elladra mulya thumba changi torsidira ❤❤❤❤

  • @Carrom592
    @Carrom59223 сағат бұрын

    ಇರಲಿ ಎಷ್ಟೇ ಕಲಹ ಇರಲಾರೆ ನಿನ್ನ ವಿನಹ ಎಷ್ಟೇ ಕೋಪವಿದ್ದರು ನೀ ಇರಲೇ ಬೇಕು ಸನಿಹ...!

  • @gururaj8158
    @gururaj815821 күн бұрын

    ❤❤ ಅದ್ಭುತವಾದ ಸಿನಿಮಾ, ಪ್ರತಿಯೊಂದು ಪಾತ್ರಗಳು ಕೂಡ ಅತ್ಯುತ್ತಮವಾಗಿದೆ❤❤❤ ❤

  • @lakshmimadhu3157
    @lakshmimadhu315716 күн бұрын

    ಬದುಕು ಮತ್ತು ಮನಸ್ಸಿನ ಭಾವನೆಗಳ ಕೈ ಗನ್ನಡಿ .....ಈ ಹೊಂದಿಸಿ ಬರೆಯಿರಿ. ಪ್ರತಿಯೊಂದು ಪಾತ್ರಗಳು ನೈಜತೆಯಿಂದ ಕೂಡಿವೆ ಎಲ್ಲರಿಗೂ ಪ್ರೀತಿಯ ಅಭಿನಂದನೆಗಳು.❤

  • @AshwiniManaguli
    @AshwiniManaguli4 сағат бұрын

    ಕಾಣದ ದಾರಿಯಲಿ ನಗುವಿನ ಪಯಣ 😊😊

  • @veerupakshaschallur5842
    @veerupakshaschallur5842Ай бұрын

    ಸುಮಾರು ಸಲ ಈ ಮೂವಿ ನೋಡಿದ್ದೀನಿ ವಿಭಿನ್ನ ಅನುಭವ ಕಟ್ಟಿ ಕೊಡುವುದರ ಮೂಲಕ ಭಾವುಕರನ್ನಾಗಿಸುತ್ತದೆ. ❤

  • @user-hs6fw3yq2s
    @user-hs6fw3yq2s15 күн бұрын

    Really got tears in my eyes with lots of love for this movie, after a long time watched a meaningful movie of love and relationship ❤

  • @user-kd2yv3qv6e
    @user-kd2yv3qv6e5 күн бұрын

    Hi ಫ್ರೆಂಡ್ ನವೀನ್ best ಮೂವಿ 🫶💐 ನಾವು ಜಮಖಂಡಿ ದವರು ಗೊತ್ತಾ 🎉🚩🚩

  • @chethanhp5677
    @chethanhp567713 күн бұрын

    ತುಂಬಾ ಮನಸಿಗೆ ಇಷ್ಟವಾದ ಮೂವೀ .....❤❤❤❤love you poo❤💕

  • @rameshkittur5096
    @rameshkittur509626 күн бұрын

    ಹೊಂದಿಸಿ ಬರೆಯಿರಿ ಎಂದರೆ ಹೊಂದಿಕೊಂಡು ಬದುಕುವುದು ಒಂದು ಒಳ್ಳೆಯ ಸಿನಿಮಾ 🎉

  • @parashuramparashuram7905
    @parashuramparashuram790519 күн бұрын

    ಅರ್ಥಗರ್ಭಿತವಾದ ಚಿತ್ರ....Really wonderful movie❤🎉

  • @rktech1296
    @rktech12964 күн бұрын

    What a fantastic movie ...specially Naveen s character and acting is superb ,overall casting is mind blowing ....missed to watch it in theatre ....

  • @SUNDAY-CINEMAS

    @SUNDAY-CINEMAS

    3 сағат бұрын

    Next movie Theatre alle nodi🙂 thank you so much🤗

  • @priyasandeeppriyasandeepsa8104
    @priyasandeeppriyasandeepsa8104Ай бұрын

    ಪದಗಳಿಗೆ ನಿಲುಕದ ಸಿನಿಮಾ ♥️♥️ಒಳ್ಳೆಯ ಸಂದೇಶವನ್ನು ನೀಡಿದೆ.

  • @user-yr3ty2os6f
    @user-yr3ty2os6fАй бұрын

    ಹೇಳು ಸಾಲದಾ ಪದಗಳಿಂದ ಕೂಡಿದ ಮೂವೀ ಇದಾಗಿದೆ...❤❤🎻🎻

  • @lofiking709
    @lofiking7098 күн бұрын

    What a music 🎶 What a movie 🎥 Literally I'm just crying at the last movement 😢 All about the movie is good ❤

  • @malluff7620
    @malluff76207 сағат бұрын

    ಸಿನಿಮಾ ತುಂಬಾ ಚೆನ್ನಾಗಿ ❤❤❤

  • @m......kattimani1693
    @m......kattimani1693Ай бұрын

    ಬದುಕು ಬಂದಂತೆ ಸ್ವೀಕರಿಸಿ❤❤ Hats off director and Team🎉❤

  • @SUNDAY-CINEMAS

    @SUNDAY-CINEMAS

    Ай бұрын

    Thank you so much🤗

  • @BinduRBinduR-zz2qt
    @BinduRBinduR-zz2qt17 күн бұрын

    This is one of my best movie Super hit movie im vry impressed.two movies are my favourite 1.Naduve antharaviralli. 2.Hondisi bareyiri l

  • @shwetha.sweety.143
    @shwetha.sweety.143Ай бұрын

    Movie ತುಂಬಾ ಚೆನ್ನಾಗಿದೆ..... Love sunday cinemas😊❤

  • @hcsheethaljain8983
    @hcsheethaljain898329 күн бұрын

    ಕಾಲೇಜು ಮುಗಿಸಿದ ನಂತರದ ಜೀವನ ಹೇಗೆ ಸಾಗುತ್ತದೆ ಅನ್ನೋದು ಈ ಮೂವೀ ಚೆನ್ನಾಗಿ ಅರ್ಥ ಮಾಡಿಸಿದೆ ಸೂಪರ್ ಮೂವೀ ❤❤

Келесі