ಗೃಹಭಂಗ 3 - ಎಸ್.ಎಲ್.ಭೈರಪ್ಪ || Ghrahabhanga 3 - S.L.Bhyrappa

ಧ್ವನಿ : ಶ್ರೀಮತಿ ಸುಬ್ಬಲಕ್ಷ್ಮೀ
ಗೃಹಭಂಗ.
ಪುಸ್ತಕ ಪರಿಚಯ :ಶ್ರೀಮತಿ ಶಾಂತಾ ಪಾಟೀಲ್.
ಬೇಜವಾಬ್ದಾರಿ ಪತಿ,ಗಯ್ಯಾಳಿ ಅತ್ತೆ ಸಂಸ್ಕಾರವಿಲ್ಲದ ಜೀವನಕ್ರಮ ಹೇಗೆ
ಒಂದು ಮನೆತನವನ್ನೇ ಅಧಃಪತನಕ್ಕೆ ನೂಕುತ್ತೆ ಅನ್ನೋದು ತಿಳಿಯಬೇಕಾದ್ರೆ ಎಸ್.ಎಲ್.ಭೈರಪ್ಪನವರ ಗೃಹಭಂಗ ಓದಿ.
ಹೆಣ್ಮಕ್ಕಳನ್ನು ಯಾವುದಾದರೂ ಮನೆಗೆ ಸೊಸೆಯಾಗಿ ಕಳಿಸುವ ಮೊದಲು ಮತ್ತು ಮನೆಗೆ ಸೊಸೆಯಾಗಿ ತರುವ ಮೊದಲು ಆ ಕುಟುಂಬದ ಪೂರ್ವಾಪರ ತಿಳಿಯದೇ ಮದುವೆ ಮಾಡಿದರೆ ಸಂಸಾರ ಹೇಗೆ ಅವನತಿ ಕಾಣ್ತಾವೆ ಎನ್ನುವುದಕ್ಕೆ ಈ ಕಾದಂಬರಿಯೇ ಸಾಕ್ಷಿ.
ನಂಜಮ್ಮ:
ಶಾನುಭೋಗ ಗಂಗಮ್ಮನ ಮನೆಗೆ ಹಿರಿಸೊಸೆಯಾಗಿ ಬರುವ ನಂಜಮ್ಮಬೇಜವಾಬ್ದಾರಿ‌
ತಿರಸೆಟ್ಟಿ ಚೆನ್ನಿಗಾರಯನಂತ ಗಂಡನನ್ನು ತಿದ್ದಲಾಗದೇ ಅವನ ಶಾನುಭೋಗಿಕೆ ಲೆಕ್ಕ ತಾನೇ ಬರೆದು ತನ್ನ ಮಕ್ಕಳಿಗಾಗಿ ಗಟ್ಟಿತನಕ್ಕೆ ಬಿದ್ದು ಸಮಸ್ಯೆಗಳನ್ನು ಎದುರಿಸುವ ಪರಿ ಎಂತವರನ್ನೂ ಕ್ಷಣ ವಿಷಾದಭಾವಕ್ಕೆ ತಳ್ಳುತ್ತೆ.
ಕೊನೆಗೆ ತನ್ನ ಬೆಳೆದ ಎರಡು ಮಕ್ಕಳು (ಕಷ್ಟಪಟ್ಟು ಮದುವೆ ಮಾಡಿಕೊಟ್ಟ ಪಾರ್ವತಿ,ಮತ್ತು ಬುದ್ದಿವಂತ ಹಿರಿಮಗ ರಾಮಣ್ಣ)ಪ್ಲೇಗ್ ಮಹಾಮಾರಿಗೆ ತುತ್ತಾದಾಗ ಅವಳು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕಿರಿಯ ಮಗನಿಗಾಗಿ ಬದುಕಬೇಕೆಂದು ಹಿಂತುರಿಗಿ ಬಂದು ಸ್ವಂತ ಮನೆ ಮಾಡಿಕೊಂಡು ಜೀವಿಸಬೇಕೆನ್ನುವಾಗ ಅವಳು ಪ್ಳೇಗ್ ಗೆ ತುತ್ತಾಗಿ ಸಾಯುವುದು ದುರಂತ.
ಕಾದಂಬರಿಯಲ್ಲಿ ಬರುವ ಇನ್ನೊಂದು ಪಾತ್ರ ನರಸಿ:
ಇವಳು ವೃತ್ತಿಯಲ್ಲಿ ಬೆಲೆವೆಣ್ಣು ಅನ್ನಿಸಿಕೊಂಡರು ತನ್ನ ಮಾನವೀಯತೆ ಮನಸಿನಿಂದ ಮನದಿ ನಿಲ್ಲುತ್ತಾಳೆ.
ಹಾಗೆಯೇ ನಂಜಮ್ಮಳ ಮಗಳು ಪಾರ್ವತಿಯನ್ನು ಮದುವೆಯಾಗುವ ಸೂರ್ಯನಾರಾಯಣನ ಪಾತ್ರ ಮತ್ತು ಶಾಲೆಯ ಮೇಸ್ಟ್ರು ವೆಂಕಟೇಶಯ್ಯನೋರು,
ಈಶ್ವರ ಗುಡಿಯ ಮಾದೇವಯ್ಯನೋರು,ಕುರುಬರಹಳ್ಳಿಯ ಗುಂಡೇಗೌಡ ಮುಂತಾದವರು ಗಂಡಸರೆಲ್ಲರೂ ಕೆಟ್ಟವರಿರುವುದಿಲ್ಲ ಎನುವುದಕ್ಕೆ ನಿದರ್ಶನವಾಗ್ತಾರೆ.
ಗಂಡನೇ ಸರಿಯಿಲ್ಲ ನಾನೇನು ಮಾಡ್ಲಿ ಎನುವಂತ ಗಂಗಮ್ಮನ ಕಿರಿಯ ಮಗ ಅಪ್ಪಣ್ಣಯ್ಯನ ಹೆಂಡ್ತಿ
ದಾರಿ ತಪ್ಪಿ ಹಾದರಕ್ಕಿಳಿಯೋದು ಗೃಹಭಂಗಕ್ಕೆ(ಅವನತಿ) ಉದಾಹರಣೆ.
ಇವುಗಳಲ್ಲದೆ ನಂಜಮ್ಮನ ತಂದೆ ಕಂಠಿ ಜೋಯ್ಸರು,ಅಣ್ಣಯ್ಯ ಜೋಯ್ಸರ ವರ್ತನೆ ಧರ್ಮ,ಸಂಸ್ಕಾರಗಳ ಇನ್ನೊಂದು ಮುಖವನ್ನು ಪರಿಚಯಿಸುತ್ತವೆ.
ನಂಜಮ್ಮನ ಅಜ್ಜಿ ಅಕ್ಕಮ್ಮ,ಅಣ್ಣ ಕಲ್ಲೇಶ ಅವನ ಹೆಂಡತಿ ಕಮಲಿ,ರೇವಣ ಶೆಟ್ಟಿ-ಸರ್ವಕ್ಕ,
ಪಟೇಲ ಶಿವರಾಮೇಗೌಡ,ಶಿವಲಿಂಗ,ಕುಳುವಾಡಿ
ಇತ್ಯಾದಿ ಪಾತ್ರಗಳು ಬದುಕಿನ ಮಜಲನ್ನು ಅನಾವರಣಗೊಳಿಸುತ್ತವೆ.
ಕಾದಂಬರಿ ಅಂತ್ಯದಲ್ಲಿ ತಾಯಿ ಇಲ್ಲದ ತಬ್ಬಲಿ ಮಗು ವಿಶ್ವ( ನಂಜಮ್ಮನ ಕೊನೆಯ ಮಗ) ನನ್ನು (ಗಂಡಜ್ಜಿ,ತಂದೆ,ಚಿಕ್ಕಪ್ಪ,ಹೆಣ್ತಾತ,ಸೋದರಮಾವ ಎಲ್ಲರೂ ಇದ್ದು,)
ಅಯ್ನೋರು ಒಂದು ಗಟ್ಟಿ ನಿರ್ಧಾರಕ್ಕೆ ಬಂದು ತಮ್ಮೊಡನೆ ಕರೆದೊಯ್ಯುವ ಸನ್ನಿವೇಶ ಎಂತಹ ಕಲ್ಲೆದೆಯವರ ಕಣ್ಣಾಲಿ ತುಂಬಿಸುವುದು ಸುಳ್ಳಲ್ಲ!
ಬರಹದಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.
ಸರಸ್ವತಿ ಸಮ್ಮಾನ್ ಭೈರಪ್ಪನವರಿಗೆ ನಮಿಸುತ್ತಾ!!!🙏🙏🙏🙏

Пікірлер: 1

  • @-banniodona8187
    @-banniodona81873 жыл бұрын

    ಧ್ವನಿ : ಶ್ರೀಮತಿ ಸುಬ್ಬಲಕ್ಷ್ಮೀ ಗೃಹಭಂಗ. ಪುಸ್ತಕ ಪರಿಚಯ :ಶ್ರೀಮತಿ ಶಾಂತಾ ಪಾಟೀಲ್. ಬೇಜವಾಬ್ದಾರಿ ಪತಿ,ಗಯ್ಯಾಳಿ ಅತ್ತೆ ಸಂಸ್ಕಾರವಿಲ್ಲದ ಜೀವನಕ್ರಮ ಹೇಗೆ ಒಂದು ಮನೆತನವನ್ನೇ ಅಧಃಪತನಕ್ಕೆ ನೂಕುತ್ತೆ ಅನ್ನೋದು ತಿಳಿಯಬೇಕಾದ್ರೆ ಎಸ್.ಎಲ್.ಭೈರಪ್ಪನವರ ಗೃಹಭಂಗ ಓದಿ. ಹೆಣ್ಮಕ್ಕಳನ್ನು ಯಾವುದಾದರೂ ಮನೆಗೆ ಸೊಸೆಯಾಗಿ ಕಳಿಸುವ ಮೊದಲು ಮತ್ತು ಮನೆಗೆ ಸೊಸೆಯಾಗಿ ತರುವ ಮೊದಲು ಆ ಕುಟುಂಬದ ಪೂರ್ವಾಪರ ತಿಳಿಯದೇ ಮದುವೆ ಮಾಡಿದರೆ ಸಂಸಾರ ಹೇಗೆ ಅವನತಿ ಕಾಣ್ತಾವೆ ಎನ್ನುವುದಕ್ಕೆ ಈ ಕಾದಂಬರಿಯೇ ಸಾಕ್ಷಿ. ನಂಜಮ್ಮ: ಶಾನುಭೋಗ ಗಂಗಮ್ಮನ ಮನೆಗೆ ಹಿರಿಸೊಸೆಯಾಗಿ ಬರುವ ನಂಜಮ್ಮಬೇಜವಾಬ್ದಾರಿ‌ ತಿರಸೆಟ್ಟಿ ಚೆನ್ನಿಗಾರಯನಂತ ಗಂಡನನ್ನು ತಿದ್ದಲಾಗದೇ ಅವನ ಶಾನುಭೋಗಿಕೆ ಲೆಕ್ಕ ತಾನೇ ಬರೆದು ತನ್ನ ಮಕ್ಕಳಿಗಾಗಿ ಗಟ್ಟಿತನಕ್ಕೆ ಬಿದ್ದು ಸಮಸ್ಯೆಗಳನ್ನು ಎದುರಿಸುವ ಪರಿ ಎಂತವರನ್ನೂ ಕ್ಷಣ ವಿಷಾದಭಾವಕ್ಕೆ ತಳ್ಳುತ್ತೆ. ಕೊನೆಗೆ ತನ್ನ ಬೆಳೆದ ಎರಡು ಮಕ್ಕಳು (ಕಷ್ಟಪಟ್ಟು ಮದುವೆ ಮಾಡಿಕೊಟ್ಟ ಪಾರ್ವತಿ,ಮತ್ತು ಬುದ್ದಿವಂತ ಹಿರಿಮಗ ರಾಮಣ್ಣ)ಪ್ಲೇಗ್ ಮಹಾಮಾರಿಗೆ ತುತ್ತಾದಾಗ ಅವಳು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕಿರಿಯ ಮಗನಿಗಾಗಿ ಬದುಕಬೇಕೆಂದು ಹಿಂತುರಿಗಿ ಬಂದು ಸ್ವಂತ ಮನೆ ಮಾಡಿಕೊಂಡು ಜೀವಿಸಬೇಕೆನ್ನುವಾಗ ಅವಳು ಪ್ಳೇಗ್ ಗೆ ತುತ್ತಾಗಿ ಸಾಯುವುದು ದುರಂತ. ಕಾದಂಬರಿಯಲ್ಲಿ ಬರುವ ಇನ್ನೊಂದು ಪಾತ್ರ ನರಸಿ: ಇವಳು ವೃತ್ತಿಯಲ್ಲಿ ಬೆಲೆವೆಣ್ಣು ಅನ್ನಿಸಿಕೊಂಡರು ತನ್ನ ಮಾನವೀಯತೆ ಮನಸಿನಿಂದ ಮನದಿ ನಿಲ್ಲುತ್ತಾಳೆ. ಹಾಗೆಯೇ ನಂಜಮ್ಮಳ ಮಗಳು ಪಾರ್ವತಿಯನ್ನು ಮದುವೆಯಾಗುವ ಸೂರ್ಯನಾರಾಯಣನ ಪಾತ್ರ ಮತ್ತು ಶಾಲೆಯ ಮೇಸ್ಟ್ರು ವೆಂಕಟೇಶಯ್ಯನೋರು, ಈಶ್ವರ ಗುಡಿಯ ಮಾದೇವಯ್ಯನೋರು,ಕುರುಬರಹಳ್ಳಿಯ ಗುಂಡೇಗೌಡ ಮುಂತಾದವರು ಗಂಡಸರೆಲ್ಲರೂ ಕೆಟ್ಟವರಿರುವುದಿಲ್ಲ ಎನುವುದಕ್ಕೆ ನಿದರ್ಶನವಾಗ್ತಾರೆ. ಗಂಡನೇ ಸರಿಯಿಲ್ಲ ನಾನೇನು ಮಾಡ್ಲಿ ಎನುವಂತ ಗಂಗಮ್ಮನ ಕಿರಿಯ ಮಗ ಅಪ್ಪಣ್ಣಯ್ಯನ ಹೆಂಡ್ತಿ ದಾರಿ ತಪ್ಪಿ ಹಾದರಕ್ಕಿಳಿಯೋದು ಗೃಹಭಂಗಕ್ಕೆ(ಅವನತಿ) ಉದಾಹರಣೆ. ಇವುಗಳಲ್ಲದೆ ನಂಜಮ್ಮನ ತಂದೆ ಕಂಠಿ ಜೋಯ್ಸರು,ಅಣ್ಣಯ್ಯ ಜೋಯ್ಸರ ವರ್ತನೆ ಧರ್ಮ,ಸಂಸ್ಕಾರಗಳ ಇನ್ನೊಂದು ಮುಖವನ್ನು ಪರಿಚಯಿಸುತ್ತವೆ. ನಂಜಮ್ಮನ ಅಜ್ಜಿ ಅಕ್ಕಮ್ಮ,ಅಣ್ಣ ಕಲ್ಲೇಶ ಅವನ ಹೆಂಡತಿ ಕಮಲಿ,ರೇವಣ ಶೆಟ್ಟಿ-ಸರ್ವಕ್ಕ, ಪಟೇಲ ಶಿವರಾಮೇಗೌಡ,ಶಿವಲಿಂಗ,ಕುಳುವಾಡಿ ಇತ್ಯಾದಿ ಪಾತ್ರಗಳು ಬದುಕಿನ ಮಜಲನ್ನು ಅನಾವರಣಗೊಳಿಸುತ್ತವೆ. ಕಾದಂಬರಿ ಅಂತ್ಯದಲ್ಲಿ ತಾಯಿ ಇಲ್ಲದ ತಬ್ಬಲಿ ಮಗು ವಿಶ್ವ( ನಂಜಮ್ಮನ ಕೊನೆಯ ಮಗ) ನನ್ನು (ಗಂಡಜ್ಜಿ,ತಂದೆ,ಚಿಕ್ಕಪ್ಪ,ಹೆಣ್ತಾತ,ಸೋದರಮಾವ ಎಲ್ಲರೂ ಇದ್ದು,) ಅಯ್ನೋರು ಒಂದು ಗಟ್ಟಿ ನಿರ್ಧಾರಕ್ಕೆ ಬಂದು ತಮ್ಮೊಡನೆ ಕರೆದೊಯ್ಯುವ ಸನ್ನಿವೇಶ ಎಂತಹ ಕಲ್ಲೆದೆಯವರ ಕಣ್ಣಾಲಿ ತುಂಬಿಸುವುದು ಸುಳ್ಳಲ್ಲ! ಬರಹದಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ. ಸರಸ್ವತಿ ಸಮ್ಮಾನ್ ಭೈರಪ್ಪನವರಿಗೆ ನಮಿಸುತ್ತಾ!!!🙏🙏🙏🙏

Келесі