~ Aghanashini ~ (Kannada)

English Version: • ~ Aghanashini ~ (Engl...
ಪಶ್ಚಿಮ ಘಟ್ಟದ ನದಿಗಳಲ್ಲೇ ಬಹು ವಿಶೇಷವಾದದ್ದು ಅಘನಾಶಿನಿ. ಅಭಿವೃದ್ಧಿಯ ನೆಪದಲ್ಲಿ ನಡೆಯುವ ಎಲ್ಲ ಹಿಂಸೆಗಳಿಂದ ಅದೃಷ್ಟವಶಾತ್ ತಪ್ಪಿಸಿಕೊಂಡು ಸಾವಿರಾರು ವರುಷಗಳಿಂದ ತನ್ನದೇ ಹರಿವಿನಲ್ಲಿ ಸಾಗುತ್ತಿದೆ ಅಘನಾಶಿನಿ ನದಿ.
ಯಾವುದೇ ಆಣೆಕಟ್ಟು ಮತ್ತು ಇತರ ಅಡೆತಡೆ ಇಲ್ಲದೇ ಹರಿಯುತ್ತ ತನ್ನತನ ಕಾಪಾಡಿಕೊಂಡಿರುವ ಅಘನಾಶಿನಿ ಅನೇಕ ಕೌತುಕಮಯ ಸಂಗತಿಗಳಿಂದ ತುಂಬಿಕೊಂಡಿದೆ. ಅವುಗಳಲ್ಲಿ ಕೆಲವು ವಿಶ್ವದಲ್ಲೇ ಎಲ್ಲಿಯೂ ಕಾಣಸಿಗದಂತವು. ಅಂತವುಗಳಲ್ಲಿ ಹಲವು ವಿಶೇಷ ಕಥೆಗಳನ್ನು ಆಯ್ದುಕೊಂಡು ನದಿಯ ನಿರೂಪಣೆಯಲ್ಲೇ ಚಿತ್ರ ಮೂಡಿಸಿರುವುದು ಈ ಸಾಕ್ಷ್ಯಚಿತ್ರದ ಹೆಗ್ಗಳಿಕೆ.
ಕಳೆದ ಹಲವಾರು ವರುಷಗಳಿಂದ ಭಾರತ ಭೂದೃಶ್ಯಗಳ ಅನನ್ಯ ಛಾಯಾಗ್ರಹಣದಲ್ಲಿ ತೊಡಗಿಕೊಂಡಿರುವ
ಲ್ಯಾಂಡ್ಸ್ಕೇಪ್ ವಿಝಾರ್ಡ್ಸ್ ಎಂಬ ಛಾಯಾ ತಂಡದಿಂದ ಹೊರಬರುತ್ತಿರುವ “ಅಘನಾಶಿನಿ’ಯು ರೋಹಿಣಿ ನಿಲೇಕಣಿ ಫಿಲಾನ್ಥ್ರೋಪಿಸ್ ಸಹಭಾಗಿತ್ವದಲ್ಲಿ ಮತ್ತು ಕ್ರೌಡ್ ಫಂಡಿಂಗ್ ನಲ್ಲಿ ನಿರ್ಮಾಣ ಗೊಂಡಿದೆ.
More Info: www.landscape-wizards.com/home...
=================================================
ರಚನೆ ಮತ್ತು ನಿರ್ದೇಶನ: ಅಶ್ವಿನಿ ಕುಮಾರ ಭಟ್, ಗಾಳಿಮನೆ
ನಿರ್ಮಾಣ: ಲ್ಯಾಂಡ್ಸ್ಕೇಪ್ ವಿಝಾರ್ಡ್ಸ್
ಪ್ರಧಾನ ಸಹಕಾರ : ರೋಹಿಣಿ ನಿಲೇಕಣಿ ಫಿಲ್ಹಾನ್ ತ್ರೋಪಿಸ್
ಛಾಯಾಗ್ರಹಣ:
ಅಶ್ವಿನಿ ಕುಮಾರ ಭಟ್, ಗಾಳಿಮನೆ
ಸುನಿಲ್ ಹೆಗಡೆ ತಟ್ಟಿಸರ
ಸಹನಾ ಬಾಳ್ಕಲ್
ಶ್ರೀಹರ್ಷ ಗಂಜಾಮ್
ಡ್ರೋನ್ ಛಾಯಾಗ್ರಹಣ : ಸುನಿಲ್ ಹೆಗಡೆ, ತಟ್ಟಿಸರ
ಹೆಚ್ಚುವರಿ ತುಣುಕುಗಳು :
ಕೇಸರಿ ಹರವು (“ಅಘನಾಶಿನಿ ಮತ್ತು ಮಕ್ಕಳು”)
ಶಿವಕುಮಾರ್ ಎಲ್
ಪ್ರಮೋದ್ ವಿಶ್ವನಾಥ್
ಕಥೆ: ಅಶ್ವಿನಿ ಕುಮಾರ ಭಟ್ ಗಾಳಿಮನೆ
ಧ್ವನಿ ಮತ್ತು ಕನ್ನಡ ಕಥಾ ನಿರೂಪಣೆ : ಸಹನಾ ಬಾಳ್ಕಲ್
ಸಂಗೀತ:
ಪ್ರವೀಣ್ ಡಿ ರಾವ್
ವಾರಿಜಶ್ರೀ
ಪ್ರಮಥ ಕಿರಣ್
ವಾಕ್ಲಾ ಝಿಂಪೆಲ್
ಕಾರ್ತಿಕ್ ಎನ್
ಸಂಕಲನ : ಕಾರ್ತಿಕ್ ಮುರಳಿ, ದಿ ಎಡಿಟ್ ರೂಮ್
ಕಲರಿಸ್ಟ್ : ಭರತ್ ಎಂ ಸಿ, ದಿ ರೂಟ್ ರೂಮ್
ಶೀರ್ಷಿಕೆ ಬರಹ : ಸಿಂಧು ವಿ ಮೂರ್ತಿ
ಶೀರ್ಷಿಕೆ ಮತ್ತು ನಕ್ಷೆ ವಿನ್ಯಾಸ: ಜೆಎಫೆಎಕ್ಸ್ ವಿಜಯ್
ಸಾಕ್ಷ್ಯಚಿತ್ರ ಸಂಯೋಜನೆ: ಸಹನಾ ಬಾಳ್ಕಲ್
ಸ್ಥಳೀಯ ಯೋಜನಾ ಸಹಕಾರ : ಮಂಜುನಾಥ್ ಹೆಗಡೆ, ಮಾವಿನಕೊಪ್ಪ
ಫೀಲ್ಡ್ ಸಹಾಯ :
ವಿವೇಕ್ ಹೆಗಡೆ, ಹೆಬ್ಳೆಮನೆ
ವಿಷ್ಣು ಡಿ ಮುಕ್ರಿ, ಕುಮಟಾ
ಗಂಗಾಧರ್ ಲಿಂಗಾ ಗೌಡ, ಹಿಸ್ನಕುಳಿ
ಕನ್ನಡ ಆವೃತ್ತಿಯ ವಿಶೇಷ ಸಹಕಾರ :
ನಾಗೇಶ್ ಹೆಗಡೆ,
ಆರ್.ಎಂ.ಭಟ್, ಬಾಳ್ಕಲ್,
ಸುಚೇತ್ ಬಾಳ್ಕಲ್
ಆರ್.ಎಸ್ .ಭಟ್, ಗಾಳಿಮನೆ
ಆದಿತ್ಯ ಬೀಳೂರು
ಸಂಪನ್ಮೂಲ ವ್ಯಕ್ತಿಗಳು:
ಡಾ. ಬಾಲಚಂದ್ರ ಹೆಗಡೆ, ಸಾಯಿಮನೆ,
ಡಾ. ಎಂ.ಡಿ. ಸುಭಾಷ್ ಚಂದ್ರನ್
ಶ್ರೀ ನಾಗೇಶ್ ಹೆಗಡೆ
ಡಾ. ಸಂತೋಷ್ ಕುಮಾರ್
ಡಾ. ಗುರುರಾಜ ಕೆ.ವಿ.
ಲಯ ಡಿಜಿ ಸ್ಟುಡಿಯೋ ಬೆಂಗಳೂರು
ಎಡಿಟ್ ರೂಮ್
ಗ್ರೇ 18 ಸ್ಟುಡಿಯೋ
Awards and accolades:
“Gold Award” in ‘Spot Light Doc Awards’ of Georgia, USA (2018)
“Award of Excellence” in ImpactDoc Awards, USA (2018)
“Best Documentary 2nd Prize” in Smitha Patil International Documentary and Short Film festival,
Pune, India (2018)
“Best of Show” and Outstanding Excellence: Cinematography (Environmental) in Docs Without
Borders Film Festival, USA (2018)
Official Selection in Borrego Springs Film Festival of California, USA (2018)
Official Selection under Best Environmental Film category in Kashmir International Film Festival, India (2018)
Official Selection in Moving Water Film Festival in Bangalore, India (2018)
Official Selection in Colorado Environmental Film Festival, USA (2018)
Official Selection in Cambodia International Film festival (2018)
Official Selection in RIOS - International Documentary Film Festival and Transmedia, Portugal (2018)
Official Selection in Elements International Environmental Film Festival, Vancouver, Canada (2018)
Official Selection in Sierra Nevada Film Festival, USA (2018)
Official Selection in Voices From The Water Film Festival, India (2018)
Official Selection in DocUtah International Documentary Film Festival, USA (2018)
Official Selection in SunChild International Environmental Festival, Armenia (2018)
Official Selection in Chagrin Documentary Film Festival, USA (2018)
Official Selection in International Ecological Film Festival TO SAVE AND PRESERVE, Russia (2018)
Official Selection in ZAGREB TOURFILM Festival, Croatia (2018)
Official Selection in Ekofilm Festival, Czech Republic (2018)
Official Selection in Eugene Environmental Film Festival, USA (2018)
Official Selection in Matsalu Nature Film Festival (MAFF), Estonia (2018)
Official Selection in Ekofilm Festival, Poland (2018)
Official Selection in Kuala Lumpur Environmental Film Festival, Malaysia (2018)
Official Selection in LIFFT INDIA FILMOTSAV - World Cine Fest, Lonavla, India (2018)
Official Selection in Switzerland International Film Festival, Switzerland (2018)

Пікірлер: 792

  • @mohanj9544
    @mohanj9544 Жыл бұрын

    ಅಘನಾಶಿನಿ ನದಿ ತನ್ನ ಕಥೆಯನ್ನ ತಾನೇ ವಿವರಿಸುವ ಭಾವ ನನ್ನ ಮನ ಮುಟ್ಟಿತ್ತು 😇

  • @marvindileep
    @marvindileep5 жыл бұрын

    ಇನ್ನು ಮುಂದೆ ಕೂಡ ಕನ್ನಡದಲ್ಲಿ ನೋಡುವ ಸೌಭಾಗ್ಯ ಇರಲಿ ಎಂಬ ಆಸೆ.. ಇಷ್ಟು ಒಳ್ಳೆ ವಿಡಿಯೋ ಮಾಡಿರೋ ನಿಮ್ಮ ತಂಡಕ್ಕೆ ಅಭಿನಂದನೆಗಳು.

  • @keshavamurthy8810

    @keshavamurthy8810

    4 жыл бұрын

    ತುಂಬಾ ಚೆನ್ನಾಗಿದೆ, ಖಂಡಿತವಾಗಿಯೂ ನಾವು ಅಘನಾಶಿನಿ ನದಿಯ ಮತ್ತು ದಂಡೆಯ ಮೇಲಿನ ಪರಿಸರ ಮಾಲಿನ್ಯ ನಿವಾರಣೆ ಮಾಡುವ ಮೂಲಕ ಸಂರಕ್ಷಿಸೋಣ

  • @ankush4508

    @ankush4508

    3 жыл бұрын

    Super video

  • @odaadu-4463
    @odaadu-44632 жыл бұрын

    ಉತ್ತರಕನ್ನಡದಿಂದ ಯಾರ್ಯಾರು ನೋಡುತ್ತಿದ್ದೀರ ✌️

  • @ashishraikar7802

    @ashishraikar7802

    Ай бұрын

    From Karwar ❤

  • @harishmr1345
    @harishmr13455 жыл бұрын

    ದೇಶದ ಬೃಹತ್ ವಾಣಿಜ್ಯ ಬಂದರು ಅಘನಾಶಿನಿ ನದಿಯ ದಂಡೆಗೆ ತಂದರು ನದಿಯ ಒಡಲನ್ನು ಒಡೆದು ಮಾಡಿದರು ಬಂಜರು ನದಿಯ ಮೈಜಾಡಿನಲ್ಲಿರುವ ಮುಗಿಲ ಎತ್ತರದ ಮರಗಳನು ತಿಂದರು ಕಾಳಿ ಶರಾವತಿ ನದಿಗಳ ಸಂಗಮದಿ ಅರಬ್ಬಿ ಸಮುದ್ರ ಸೇರುವ ತವಕದಿ ಅಲ್ಲಿನ ಜನರ ಕಷ್ಟಗಳಿಗೆ ಪರಿಹಾರ ನಿಧಿ ಅದುವೇ ಅಘನಾಶಿನಿ ನದಿ ಸಾಸಿರ ಜಲಚರ ಜೀವರಾಶಿಗಳಿಗೆ ಈ ನದಿಯ ಗರ್ಭವೇ ಆಶ್ರಯ ಇಂದು ಈ ನದಿಗೆ ಮೇಲೆ ಅಗುವ ಗರ್ಭಪಾತ ನಿಲ್ಲಿಸುವುದೇ ಪ್ರಧಾನ ವಿಷಯ ಅಘನಾಶಿನಿ ನದಿಯ ಉಳಿವಿಗಾಗಿ ನಾವೆಲ್ಲ ಕೈಜೋಡಿಸಿಣಾ..... ಹರೀಶ್ ಎಂ ಆರ್ ...

  • @srinidhi7140

    @srinidhi7140

    5 жыл бұрын

    ಧನ್ಯವಾದಗಳು 🙏

  • @vijaybidaralli2095

    @vijaybidaralli2095

    11 ай бұрын

    Nisargha devate ninage kooti namana.. estu sogasagi mahiti nodide tandakke shubhavagli ennu hechu hechu ee tarahad video madi nivage shubhavagli .👌👌👌🙏🙏🙏🙏💐💐💐🙏💐👌🙏💐💐

  • @kvsandeepmoudgalya7369
    @kvsandeepmoudgalya73695 жыл бұрын

    ಅತ್ಯದ್ಭುತ ಕಥಾ ನಿರೂಪಣೆ ಹಾಗೂ ಛಾಯಾಗ್ರಹಣ ಮೈನವಿರೇಳಿಸುವಂತಿದೆ. 👌🏿👌🏿👍🏿

  • @veerendrahegde220
    @veerendrahegde2203 жыл бұрын

    ಅಬ್ಬಾ...!ಅಘನಾಶಿನಿ ನೀನೆಷ್ಟು ಅದ್ಭುತ.ನಿನ್ನ ಮಡಿಲಿನಲ್ಲಿ ಹುಟ್ಟಿದ ನಾವೆಲ್ಲರೂ ತುಂಬಾ ಪುಣ್ಯವಂತರು.ನಿನ್ನ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. #ನಮ್ಮ ಉತ್ತರ ಕನ್ನಡ ನಮ್ಮ ಹೆಮ್ಮೆ 😍 Really awesome doccumentary, Amazing cinematography and hat's off to team works...😍🤗 ❤❤ಅಘನಾಶಿನಿ ನಮ್ಮೆಲ್ಲರ ಪಾಪವಿನಾಶಿನಿ❤❤

  • @user-kj5ew9cv4d
    @user-kj5ew9cv4d4 жыл бұрын

    ನದಿಯು ಎಲ್ಲಿ ಎದ್ದು ನನ್ನ ಜೊತೆ ಮಾತನಡುತ್ತಿದೆ ಅನ್ನೋ ಹಾಗೆ ಪ್ರಾರಂಭ ದಿಂದ ಮುಗಿಯುವ ವರೆಗೂ ನನ್ನನ್ನೇ ನಾನು ಮರೆತಿದೆ ಅನ್ನಿಸಿತ್ತು.. ಉಂಚ್ಚಳಿ ಜಲಪಾತ ದೃಶ್ಯ ಇನ್ನು ಕಣ್ಣಿಗೆ ಕಟ್ಟಿದಂತೆ ಭಾಸ ವಾಗುತ್ತಿದೆ .ಇಂತಹ ಭವ್ಯ ಅರಣ್ಯ ಸಂಪತ್ತು ಜನರ ಜೀವನಾಡಿ ನದಿಯನ್ನು ಉಳಿಸುವದು ನನ್ನ ನಿಮ್ಮ ಕರ್ತವ್ಯ ಇದರ ಬದ್ಧತೆಗೆ ಕಂಕಣ ಕಟ್ಟಿ ನಿಲಬೇಕು ನಿಲ್ಲಲ್ಲೆಬೇಕು..! ಪರಿಸರ ನಮ್ಮ ಆಸೆ ಈಡೇರುಸುತ್ತದೆ ಹೊರೆತು ದೂರಸೆಯನ್ನಲ್ಲ ...ಗಾಂಧಿ ಹೇಳಿದ ಮಾತು ಎಷ್ಟು ಸತ್ಯ ಅನಿಸುತ್ತಿದೆ

  • @nagabhushanabandagadde7294
    @nagabhushanabandagadde72945 жыл бұрын

    ಕನ್ನಡದಲ್ಲಿ ನೋಡ್ತಾ ಇರೋದು ಇದೇ ಮೊದಲು... ತುಂಬಾ ಚೆನ್ನಾಗಿ ಬಂದಿದೆ... 👍👌

  • @SnehaSHegde
    @SnehaSHegde3 жыл бұрын

    ಎಂತಹ ಸುಂದರ ನಿರೂಪಣೆ... ಸಂಜೆ ಸಮಯದಲ್ಲಿ, ನಾನೇ ಅಘನಾಶಿನಿ ನದಿಯೊಂದಿಗೆ ಕೂತು, ಕೊಂಚ ಸಲ್ಲಾಪ ನಡೆಸಿದಂತ ಅನುಭವ. ಧನ್ಯವಾದಗಳು, ಇಂತಹ ಛಾಯಾಗ್ರಹಣ ಹಾಗೂ ನಿರೂಪಣೆಗಾಗಿ.

  • @harsha_yagati
    @harsha_yagati5 жыл бұрын

    ಹೃದಯ ಸ್ಪರ್ಶಿ ನೈಜ ಕಥನ. ಅಳಿದುಳಿದ ಕಾಡು ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಬೇಡುತ್ತಿರಲು ಮಾನವನೆಂಬ ಎನಗೆ ಪಾಪ ಪ್ರಗ್ನೆ ಕಾಡುತ್ತಿದೆ..

  • @vishalg7081

    @vishalg7081

    5 жыл бұрын

    kzread.info/dash/bejne/pJtlydaDm7ytaKg.html Watch to support us

  • @praveenudagatti6844

    @praveenudagatti6844

    4 жыл бұрын

    Heartwarming, environmental video 👌👌📷

  • @gurum9494
    @gurum94944 жыл бұрын

    ಆಹಾ!!ಕನ್ನಡ ಪದಗಳನ್ನು ಕೇಳಲು ಎಷ್ಟು ಮಧುರ🎄🎼🎸

  • @munikrishnahv8789
    @munikrishnahv878925 күн бұрын

    ಭೂಮಿ ಮೇಲಿನ ಸ್ವರ್ಗ ತುಂಬಾ ಅಪರೂಪದ ಅದ್ಭುತವಾಗಿ ಮೂಡಿ ಬಂದಿರುವ ಚಿತ್ರ ಹಾಗೂ ಭಾಷೆ ಗಡಿಗಳ ಬೇಧವಿಲ್ಲದೆ ಎಲ್ಲರೂ ನೋಡಲೇ ಬೇಕಾದ ಚಿತ್ರ ಅದ್ಭುತವಾದ ವಿವರಣೆ ಹಾಗೂ ಮೂಕ ವಿಸ್ಮಿತ ಧ್ವನಿಯ ನಿರೂಪಣೆ ❤❤ ಮರಗಳನ್ನು ಬೆಳೆಸೋಣ ನದಿಗಳನ್ನು ಉಳಿಸೋಣ

  • @powerstar.8825
    @powerstar.88253 жыл бұрын

    ಆಹಾ ಎಂಥಹಾ ಪ್ರಕೃತಿ ವೈವಿದ್ಯಮಯ ಸಿರಿ... ಎಂಥಹಾ ವರ್ಣನೆ... ಮನಸ್ಸಿಗೆ ಬಹಳಷ್ಟು ಮುದ ನೀಡಿತು.. ಸ್ವರ್ಗದ ಹೆಬ್ಬಾಗಿಲು... ನಿಮ್ಮ ಇಂಥಹ ಪ್ರಯತ್ನ ಇನ್ನೂ ಮುಂದೊರೆಯಲಿ... ಈ ಪ್ರಕೃತಿ ಸದಾ ಹೀಗೆ ಇರಲಿ.. ಈ ಮಣ್ಣಿನ ಉಸಿರಾಗಿ ... ಅಘನಾಶಿನಿ ತಾಯಿ ಆಶೀರ್ವಾದ ಈ ಕರುನಾಡಿಗೆ ಸದಾ ಇರಲಿ...

  • @poornaacharya6730
    @poornaacharya67304 жыл бұрын

    ‌ಅತ್ಯದ್ಭುತ... ತುಂಬಾ ಸುಂದರವಾದ ರಚನೆ ಮತ್ತು ಛಾಯಾಗ್ರಹಣ.. ಉತ್ತಮವಾದ ವರ್ಣನೆ... ತುಂಬಾ ಸುಂದರವಿದು ನಮ್ಮ ಅಘನಾಶಿನಿ.. ಹೀಗೇ ನಮ್ಮ ಕರಾವಳಿಯ ಕೀರ್ತಿ ಎಲ್ಲೆಡೆಯೂ ಹಬ್ಬಲಿ... ಧನ್ಯವಾದಗಳು ನಿಮಗೆ... ♡♡♡♡♡

  • @lohithmalnad7732
    @lohithmalnad77324 жыл бұрын

    ನದಿಯೇ ಮನಬಿಚ್ಚಿ ಮಾತಾಡಿದಂತಿದೆ. Hats off to the makers.

  • @neelesh-1846
    @neelesh-18465 жыл бұрын

    ಅದ್ಭುತ ನಿರೂಪಣೆ ಹಾಗೂ ಚಿತ್ರೀಕರಣ. ಕರ್ತಾರರಿಗೆ ತುಂಬು ಹೃದಯದ ಧನ್ಯವಾದಗಳು.

  • @julietdias4775

    @julietdias4775

    Жыл бұрын

    A❤❤✌

  • @subramanyakumar8217
    @subramanyakumar82173 жыл бұрын

    ನಾವೇ ಧನ್ಯ, ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅದ್ಭುತ ಸಾಕ್ಷಚಿತ್ರ, ಅದ್ಭುತ ನಿರೂಪಣೆ, ಅನಂತ ಧನ್ಯವಾದ ನಿಮಗೆ🙏 ಇನ್ನೂ ಹಲವಾರು ಮೂಡಿ ಬರಲಿ

  • @bhagyalaxmihegde3359
    @bhagyalaxmihegde33594 жыл бұрын

    ಕನ್ನಡಿಗರ ಅದ್ಭುತ ಸಾಧನೆ...ಅತ್ಯಂತ ಸುಂದರ-ಮನಮೋಹಕ ಛಾಯಾಗ್ರಹಣ... ಕನ್ನಡದಲ್ಲಿ ಸುಸ್ಪಷ್ಟ ವಿವರಣೆ, ಅಘನಾಶಿನಿಯ ಅಪಾರ ವಿಷಯಗಳ ಅರಿವುಂಟಾಯ್ತು...ತುಂಬಾ ಧನ್ಯವಾದಗಳು...ಒಳ್ಳೇದಾಗ್ಲಿ...

  • @kavanatanaya
    @kavanatanaya4 жыл бұрын

    ಆಹಾ ಎಷ್ಟು ಅದ್ಭುತ!! ಎಷ್ಟೊಂದು ವಿಷಯಗಳನ್ನ ಒಳಗೂಡಿಸಿದ್ದೀರ!! ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ.. 👌👌

  • @nandannaik221
    @nandannaik2215 жыл бұрын

    ನಮ್ಮ ಉತ್ತರ ಕನ್ನಡದ ಹೆಮ್ಮೆ

  • @HosmaneVideos
    @HosmaneVideos Жыл бұрын

    ಅದ್ಭುತ ಚಿತ್ರೀಕರಣ... ಘಟ್ಟ ಭಾಗದ ವೈವಿಧ್ಯ ಕತೆ ಇನ್ನೂ ತೆರೆದುಕೊಳ್ಳಬೇಕಿತ್ತು.

  • @darshanhm8541
    @darshanhm85414 жыл бұрын

    ಅಘನಾಶಿನಿ ನದಿಯ ಅದ್ಭುತ ದೃಶ್ಯಗಳನ್ನು ಹಾಗೂ ಜೀವಿಗಳ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @mimicryvijay6923
    @mimicryvijay69234 жыл бұрын

    ಅದ್ಬುತ ಕಿರುಚಿತ್ರ , ವಿಭಿನ್ನ ಕಲ್ಪನೆ ಪರಿಸರದ ಜೋತೆ ನಾವು ಕೂಡ ಒಟ್ಟಾಗಿ ಸಾಗಬೇಕು ಅದುವೇ ಜೀವನ , ಈ ಕಿರುಚಿತ್ರಕ್ಕೆ ಶ್ರಮವಹಿಸಿದ ಪ್ರತಿಒಬ್ಬರಿಗೂ ಧನ್ಯವಾದಗಳು...

  • @rajendrahiregoudar5866
    @rajendrahiregoudar58664 жыл бұрын

    ಅದ್ಭುತ ದೃಶ್ಯ ಕಾವ್ಯ,ಪ್ರಕೃತಿಯ ಮಹತ್ವ ಸಾರುವ ಇಂತಹ ಚಿತ್ರ ನಿರ್ಮಾಣ ಬಲು ಅಪರೂಪದ, ಆದರೆ ಎಲ್ಲರಿಗೂ ಈ ಬಗ್ಗೆ ಅಪಾರವಾದ ಚಿಂತನೆ-ಕಾಳಜಿ-ದೂರಗಾಮಿ ದೃಷ್ಟಿ ಅತ್ಯಗತ್ಯ, ಜೀವನದಿ ಸತ್ಯವಾಗ್ಲೂ ಜೀವನದಾಯಿನೇ.

  • @narendragowda436
    @narendragowda4363 жыл бұрын

    ಇದು ಒಂದು ಅದ್ಭುತ ವಾದ ಚಿತ್ರಣ ಮತ್ತು ಉತ್ತಮ ಗುಣಮಟ್ಟ ವೀಡಿಯೊ ನನ್ನ ಊರಿನ ವೈವಿಧ್ಯಮಯ ನೋಡಲು ತುಂಬಾ ಚಂದ ಧನ್ಯವಾದಗಳು 😍😍😍

  • @bossvlogs7063
    @bossvlogs70633 жыл бұрын

    ನಿಮ್ಮ ತಂಡದ ಜೊತೆ ಕೆಲಸ ಮಾಡುವ ಆಸೆ ನನಗೂ ಇದೆ.. ಜೈ ಕರ್ನಾಟಕ ಮಾತೆ 💙❤️

  • @shivarajkumarbabaladi8997
    @shivarajkumarbabaladi89973 жыл бұрын

    Dear Team Aghanashini Documentary, Its a treat to eyes. I am very much pleasured to be part of Karnataka, which is having such a beautiful nature. I saw this Documentary in 2019 and now my Daughter Name is Aghanashini. She is 6 months old. I wish to show her this Film and take her to this wonderful place, and explain Why is Her Name AGHANASHINI. I also wish to meet Ashwin Kumar Bhat and Congratulate him for this wonderful piece of work. Thank You.

  • @ashwinikumarbhat8397

    @ashwinikumarbhat8397

    3 жыл бұрын

    Thank you very much. I am very glad that our film is touching the lives of many people in various ways! 🙏🙏

  • @shivarajkumarbabaladi8997

    @shivarajkumarbabaladi8997

    3 жыл бұрын

    @@ashwinikumarbhat8397 Its pleasure. I am wishing to buy a piece of land in Sirsi and around place to live the life near to this beautiful river. Any leads are welcomed...

  • @potatoplays9715

    @potatoplays9715

    Жыл бұрын

    @@shivarajkumarbabaladi8997 Hii following

  • @sudheerk1017
    @sudheerk10175 жыл бұрын

    ನಮ್ಮ ಪ್ರಕೃತಿಯನ್ನು ಅದ್ಭುತವಾಗಿ ತೋರಿಸಿದಕ್ಕಾಗಿ ಧನ್ಯವಾದಗಳು. ಪಶ್ಚಿಮಘಟ್ಟ ದ ಸೌಂದರ್ಯ ಹಾಗು ಅದರ ವಿಶೇಷ ಗುಣಲಕ್ಷಣಗಳನ್ನು ಸುಂದರವಾಗಿ ತೋರಿಸಿದ್ದೀರಿ.

  • @tejassl5101
    @tejassl51012 жыл бұрын

    ನನ್ನನ್ನು ಹರಿಯಲು ಬಿಡಿ ಎಂದಾಗ ಕಣ್ಣಿನಲ್ಲಿ ಒಂದನಿ ಕಟ್ಟುತ್ತೆ , ಎಂಥ ಅದ್ಭುತ ಚಿತ್ರ , ಇದನ್ನು ಮಾಡಲು ಅನಂತ ಶ್ರದ್ಧೆ ವಹಿಸಿದ ಎಲ್ಲರಿಗೂ ನನ್ನ ಕೋಟಿ ನಮಸ್ಕಾರಗಳು . ಅಶ್ವಿನಿ ಭಟ್ ಅಮ್ಮ ನಿಮಗೆ ನನ್ನ ಅಭಿನಂದನೆ . ಅಘನಾಶಿನಿ ಅನಂತವಾಗಿ ಹರಿದು ಕಡಲ ಸೇರಲಿ .

  • @channakeshavamschannakesha4799
    @channakeshavamschannakesha47994 жыл бұрын

    ತುಂಬಾ ಒಳ್ಳೆಯ ರೂಪಕ,ಇದು ಕೇವಲ ಅಘನಾಶಿಯಕಥೆಯೋಂದೆಯಲ್ಲ ಯಲ್ಲಾ ನದಿಯ ಕಥೆ ಇಂಥಹ ಹಲವಾರು ರೂಪಕಗಳು ಬರಲಿ ಮನುಷ್ಯನ ದುರಾಸೆ ಅಳಿಯಲಿ

  • @llllsudeellll4102
    @llllsudeellll41022 жыл бұрын

    ನಿಮ್ಮ ತಂಡಕ್ಕೆ ಅನಂತ ಅನಂತ ಕೋಟಿ ಅಭಿನಂದನೆ.. 💐💐 ಇನ್ನು ಹಲವು ಕನ್ನಡದ ಚಿತ್ರಗಳನ್ನು ನೀಡಿ.. ✨️❤️🥰

  • @manjunathalokeshamurthy7893
    @manjunathalokeshamurthy78935 жыл бұрын

    ನಿಮ್ಮನ್ನು ಎಷ್ಟು ಕೊಂಡಾಡಿದರು ಸಾಲದು, ನಿಮ್ಮ ಕೆಲಸಕ್ಕೆ ಈ ನೆಲದ ಪರವಾಗಿ ತುಂಬು ಹೃದಯದ ಅಭಿನಂದನೆಗಳು.

  • @rakshith1432
    @rakshith14325 жыл бұрын

    ಇದು ಒಂದು ಒಳ್ಳೆಯ ಮಾಹಿತಿ.... ಚಿತ್ರೀಕರಣ ತುಂಬ ಆಸಕ್ತಿದಾಯಕ ಹಾಗು ರೋಮಾಂಚನಕಾರಿ ಯಾಗಿದೆ 😍

  • @gopikrishnabp5215
    @gopikrishnabp52153 жыл бұрын

    ಬಹಳ ಸುಂದರವಾಗಿ ಮೂಡಿ ಬಂದ ಈ ಸಾಕ್ಷ್ಯ ಚಿತ್ರ ನೋಡಿ ಮೈ ನವಿರೇಳಿತು, ಮಲೆನಾಡಿನ ಈ ಅಘನಾಶಿನಿ ಹೀಗೆ ಇರಲಿ ಎಂಬ ಆಶಯ ಮೂಡಿತು

  • @azhar8924
    @azhar89244 жыл бұрын

    Ultimate next level cinematography ನಂಗೆ ಆ ನದಿ ನೀರು ಹಸಿರೂ ಮರ ಗಿಡಗಳೆ ಮತನಾಡಿದಂಗೆ ಅನಿಸಿತು ಈ ನಂದಿಯ ಅಗಾಧ ಸೌಂದರ್ಯ ಕೇ ನಾ ದಾನ್ಯನಾದೆ ಕೊನೆಯ ಆ ಮಾತುಗಳು ಕೆಳ್ಳಿದರೆ ನೋವಾಗುತ್ತೆ plz save our nature 💚💚💚

  • @aravindakr8092
    @aravindakr80923 жыл бұрын

    ಅಘನಾಶಿನಿ ಸಾಕ್ಷ್ಯಚಿತ್ರದ ಚಿತ್ರೀಕರಣ, ನಿರೂಪಣೆ ಸೊಗಸಾಗಿ ಮೂಡಿಬಂದಿದೆ. ಈ ಕಿರುಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು.

  • @santhubramha2933
    @santhubramha29334 жыл бұрын

    ಕನ್ನಡದಲ್ಲಿನ ಒಂದು ಅತ್ಯುತ್ತಮ ಚಿತ್ರ. ಇಂತಹ ಚಿತ್ರಗಳು ಮತ್ತಷ್ಟು ಮೂಡಿ ಬರಲೆಂದು ನನ್ನ ಹಾರೈಕೆ.

  • @vijayavaman
    @vijayavaman4 жыл бұрын

    ಈ ಜಾಗತಿಕ ಮಟ್ಟದ ಸಾಕ್ಷ್ಯ ಚಿತ್ರಕ್ಕೆ ಋಣಿಯಾಗಿದ್ದೇನೆ. ನಿರ್ದೇಶನ, ಛಾಯಾಗ್ರಹಣ, ನಿರೂಪಣೆ , ನೀಡಿರುವ ತಿಳುವಳಿಕೆ, ಎಚ್ಚರಿಕೆ ಎಲ್ಲಕ್ಕೂ ಧನ್ಯವಾದಗಳು, ಕೃತಜ್ಞತೆಗಳು.

  • @Win-key19-89INDVEN
    @Win-key19-89INDVENАй бұрын

    This is one of the best underrated documentary, I don't know how many times I watched it

  • @anjalichandankera4975
    @anjalichandankera49754 жыл бұрын

    ಆಹಾ ಅದೆಷ್ಟು ಅದ್ಭುತ ಅಘನಾಶಿನಿ ನೀನೂ.. ಅದೆಷ್ಟು ಅದೃಷ್ಟ ಮಾಡಿವೆ ನಿನ್ನ ನೋಡುವ ಆ ಕಣ್ಣುಗಳು🙏🙏🙏🙏

  • @DBS608
    @DBS6084 жыл бұрын

    ಅಘನಾಶಿನಿ ತಾಯಿಗೆ ನಮೋನಮಹ🙏 I bow to Mother Aghanasini. I highly appreciate the Whole team's effort and the caring nature of People of Our Aghanasini. Dattesh currently from Bengaluru Natively from Gokarna, Kumta, UK

  • @padmanabhas4734
    @padmanabhas47344 жыл бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ ಚಿತ್ರ ❤️❤️😍😍😍

  • @mahalaxmiagenciesmahalaxmi6453
    @mahalaxmiagenciesmahalaxmi64535 жыл бұрын

    40 varshada hinde GADHADA GUDI yannu first release nalli nodidde , eega nanu 53 , aadre NIJAWADA GANDHADA GUDI eevathu nodidhe , nanu innu nimma BHAKTHA , good one THANK YOU

  • @sujaylkarinja2558
    @sujaylkarinja2558 Жыл бұрын

    ಅಘನಾಶಿನಿ, ನಿನ್ನ ಕಥೆ ನಮ್ಮೆಲ್ಲರಿಗೂ ಸ್ಪೂರ್ತಿ, ರೋಮಾಂಚಕ ಹಾಗೂ ಎಚ್ಚರಿಕೆಯ ಗಂಟೆ. ನಿನ್ನ ಕಥೆ ಎಂದಿಗೂ ಪ್ರಸ್ತುತ. ಅಘನಾಶಿನಿ, ನಿನ್ನ ನೆಲದಲ್ಲಿ ವಾಸಿಸದೇ ಇದ್ದರೂ ನಿನ್ನ ಕಥೆ ನನ್ನಲ್ಲಿ ಒಂದು ಅಪರಾಧಿ ಭಾವ ಮೂಡಿಸಿದೆ. ಅಘನಾಶಿನಿ, ನಿನ್ನಂತಹ ಅನೇಕ ಅಘನಾಶಿನಿಯರು ವಿಶ್ವದ ಪ್ರತಿಯೊಂದು ಪ್ರದೇಶದಲ್ಲಿ ಇದ್ದಾರೆ,ಅವರೆಲ್ಲರ ಕಥೆಯನ್ನು ಅರಿತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಅಘನಾಶಿನಿ, ನಿನ್ನ ಕಥೆ ಮೈಮರೆತಿರುವ ನಮ್ಮನ್ನು ಜಾಗೃತಗೊಳಿಸಿದೆ .

  • @vinaybs7412
    @vinaybs741221 күн бұрын

    ಅದ್ಭುತವಾದ ಚಿತ್ರೀಕರಣ , ನಿರೂಪಣೆ, ಎಲ್ಲವೂ ಅದ್ಭುತ ನಿಮ್ಮ ಇಡೀ ತಂಡದ ಶ್ರಮಕ್ಕೆ ಶುಭಕೋರುವೆ

  • @divyapatgar5785
    @divyapatgar57855 жыл бұрын

    Ultimate Cinematography.... We Never give up our Aghanashini River...

  • @satishhn2387

    @satishhn2387

    4 жыл бұрын

    Niche wali you Adbhut video thanks

  • @ankush4508

    @ankush4508

    3 жыл бұрын

    S

  • @nidhiacharya1983
    @nidhiacharya19833 жыл бұрын

    ಮಾತಿಲ್ಲ ಎಲ್ಲವೂ ಅದ್ಭುತ, ಖಂಡಿತವಾಗಿ ಈ ರೀತಿಯ ಪ್ರಯತ್ನ ಮುಂದುವರೆಸಿ ಶುಭವಾಗಲಿ

  • @shambhuhaveri7067
    @shambhuhaveri70674 жыл бұрын

    ಅದ್ಭುತ ನಿರೂಪಣೆಗೆ ಧನ್ಯವಾಗಳೊಂದಿಗೆ ಇನ್ನಷ್ಟು ನೋಡುವ ಆಸೆ

  • @shreedeviteli6072
    @shreedeviteli60723 жыл бұрын

    ತುಂಬಾ ಸುಂದರವಾದ ವಿಡಿಯೋ ಮನಸ್ಸಿಗೆ ಮುಟ್ಟುವಂತ ಚಿತ್ರಣ ಕಿವಿಗೆ ಇಂಪು ಕೊಡುವ ನಿಮ್ಮ ಧ್ವನಿ (ಸಹನಾ, ಪ್ರಸ್ತುತ ಸಹಾಯಕ ಆಯುಕ್ತರು, ಕರ್ನಾಟಕ ಸರ್ಕಾರ)... ಸಹನಾ ಮೇಡಂ, We are very much Proud of You and we are so much blessed to be trained by You 😊😇❤️

  • @gurum9494
    @gurum94944 жыл бұрын

    ಅಶ್ವಿನ್ ಸರ್ ನಿಮ್ಮ ಮುಂದಿನ ಯೋಜನೆಗಳಿಗೆ 💐ALL THE BEST💐

  • @haleshag9059
    @haleshag90593 жыл бұрын

    ಎಲ್ಲರಿಗೂ ಧನ್ಯವಾದಗಳು. ವಿಡಿಯೋ ವಿವರಣೆ ಚಿತ್ರಿಕರಣ.ಪ್ರತ್ಯಕ್ಷ-ಪರೋಕ್ಷವಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @littleflower5317
    @littleflower531727 күн бұрын

    What a great documentary ....❤❤ Hatsup to all the single persons who have joined this miraculous VD. I have born and brought up there n it always have my heart....we will always join our hands to protest against this so called development ❤❤# protect Aghanashini

  • @RVSkywalkervlogs
    @RVSkywalkervlogs4 жыл бұрын

    ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ನಮಸ್ಕಾರ

  • @user-xv3hr3fv8g
    @user-xv3hr3fv8g4 жыл бұрын

    ಉತ್ತರ ಕನ್ನಡ.....💙

  • @santosh.devakar3339
    @santosh.devakar33394 жыл бұрын

    ಅದ್ಬುತ ವಿಡಿಯೋ ,ಅಘನಾಶಿನಿ ಯ ಈ ಕತೆಯನ್ನು ಕರ್ನಾಟಕ ಕಣ್ತುಂಬಿಕೊಳ್ಳು ವ ಸಂದರ್ಭ ,, ಅಭಿನಂದನೆಗಳು🌷🙏

  • @kannadacuts4223
    @kannadacuts42234 жыл бұрын

    ಇದು ಮರೆಯಲಾಗದ ಚಿತ್ರ. I love this film.

  • @gayathribs2889
    @gayathribs28893 жыл бұрын

    ಕನ್ನಡದಲ್ಲಿ ಇದನ್ನು ನೋಡಿ ಬಹಳ ಆನಂದ ವಾಯಿತು, ಧನ್ಯವಾದ ವಾದಗಳು

  • @vishwaankolekar6682
    @vishwaankolekar66824 жыл бұрын

    ಅದ್ಭುತ್‌ ನಮ್ಮ ಉತ್ತರ ಕನ್ನಡ

  • @Bellimaggam
    @Bellimaggam5 жыл бұрын

    Excellent, best documentary I ever watched in Kannada. I would recommend to add sub titles in English. I recommend sub title because its a universal concept. Dhanyavadagallu :-)

  • @srinidhi7140

    @srinidhi7140

    5 жыл бұрын

    ಇದು ಇಂಗ್ಲಿಷ್ ನಲ್ಲಿಯು ಸಹ ಲಭ್ಯವಿದೆ 💝

  • @jayasimhasimha9941

    @jayasimhasimha9941

    4 жыл бұрын

    Marvellous in all aspects when we realise these things God only have to save our next generations

  • @The_Unknown_0007
    @The_Unknown_00074 жыл бұрын

    Thank You Mam...... I'm From Kumta ... & Aghnashini Nadi Namma Totadinda Haridu Hogutte ....

  • @shankaryaragatti9729
    @shankaryaragatti97293 жыл бұрын

    ಅತ್ಯದುತವಾಗಿದೆ ಛಾಯಾಗ್ರಹಣ, ನವಿರಾದ ನಿರೂಪಣೆ ನಿಮ್ಮ ಶ್ರಮಕ್ಕೆ ನಮ್ಮ ಅನಂತ ಕೋಟಿ ನಮನಗಳು

  • @vinaychakrasali7394
    @vinaychakrasali73943 жыл бұрын

    ನಿಮ್ಮ ಕನ್ನಡ ಅಧ್ಭುತ .. ಮುಂದೆಯೂ ನೀವು ಕನ್ನಡದಲ್ಲಿಯ ವಿವರಣೆ ಮುಂದುವರೆಸಿ..🙏🙏🙏

  • @globallogs5582
    @globallogs5582 Жыл бұрын

    ಈ ಅಘನಾಶಿನಿ ಚಿತ್ರೀಕರಣಕ್ಕೆ ಧ್ವನಿ ಕೊಟ್ಟವರಿಗೆ ನನ್ನ ಧನ್ಯವಾದಗಳು🙏💐🌹💚🌿👌

  • @maralisantosh1435
    @maralisantosh1435 Жыл бұрын

    ಅಘನಾಶಿನಿ ನದಿಯ ಜೀವ ವೈವಿದ್ಯತೆ ಮತ್ತು ವೈಭವ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಹೀಗೆ ಹಲವು ನದಿಗಳ ಜೀವ ವೈವಿದ್ಯತೆಯನ್ನು ಪ್ರಸಾರ ಮಾಡಿ 🙏🙏🥰🥰💐

  • @shrutihegde6048
    @shrutihegde60485 жыл бұрын

    ಅದ್ಭುತ ಚಿತ್ರೀಕರಣ... 👏👏...ನಿಸರ್ಗ ಸೇವೆಯತ್ತ ಪ್ರೇರೇಪಿಸುವ ಸುಂದರ ಚಿತ್ರ..

  • @vishalakshimalipatil3464
    @vishalakshimalipatil34642 жыл бұрын

    ಅಘನಾಶಿನಿಯೆ ಮಾತನಾಡಿದಂತಿದೆ , ಕನ್ನಡದಲ್ಲಿ ನಿರೂಪಣೆ ಇರುವುದು ಅತಿ ವಿರಳ , ಅತ್ಯದ್ಭುತವಾಗಿದೆ.

  • @ManjunathManju-yg6ix
    @ManjunathManju-yg6ix4 жыл бұрын

    ಕನ್ನಡದಲ್ಲಿ ನೋಡಿದ್ದು ತುಂಬು ಸಂತೋಷ ಆಯಿತು 💚Video ತುಂಬ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಧ್ವನಿ ತುಂಬು ಚೆನ್ನಾಗಿದೆ ಮೇಡಂ

  • @rmk_online
    @rmk_online4 жыл бұрын

    ಈ ವಿಡಿಯೋ ತುಂಬಾ ಚೆನ್ನಾಗಿದೆ. ನಿಮ್ಮ ಪರಿಶ್ರಮಕ್ಕೆ ನನ್ನ ಕಡೆ ಇಂದ ಅಭಿನಂದನೆಗಳು!

  • @sandeepnk1995
    @sandeepnk19952 жыл бұрын

    "ಪರಿಸರವನ್ನು ನಾವು ರಕ್ಷಿಸಿದರೆ, ನಮ್ಮನ್ನು ಪರಿಸರ ರಕ್ಷಿಸುತ್ತದೆ ತುಂಬಾ ಒಳ್ಳೆಯ ವಿಡಿಯೋ

  • @vithalmekhali9988
    @vithalmekhali99884 жыл бұрын

    ನಿಮ್ಮ ಕಾರ್ಯ ಶ್ಲಾಘನೀಯ.... ನಿಮಗೆ ಧನ್ಯವಾದಗಳು

  • @lohithkharvi3497
    @lohithkharvi3497Ай бұрын

    ನಿಸರ್ಗದ ಅದ್ಭುತ ಸೃಷ್ಟಿ ಅಘನಾಶಿನಿ ❤ನಮ್ಮ ಕರಾವಳಿ ನಮ್ಮ ಮಲೆನಾಡು❤

  • @rasukukumar1037
    @rasukukumar10375 жыл бұрын

    ಅತ್ಯದ್ಭುತ ವಿಡಿಯೋ ಮಾಡಿದ್ದಕ್ಕಾಗಿ ನನ್ನ ಅನಂತಾನಂತ ವಂದನೆಗಳು, ಪ್ರಕೃತಿಯ ಹಾಳುಮಾಡುವವರಿಗೆ ಇದನ್ನು ನೋಡುವ ಸೌಭಾಗ್ಯ ಸಿಗಲಿ. ಇದರಿಂದಾಗಿಯಾದರು ಎಚ್ಚೆತ್ತುಕೊಳ್ಳಲಿ.

  • @abhisheknaik2134
    @abhisheknaik2134 Жыл бұрын

    ವಾವ್ ಸೂಪರ್ ಎಷ್ಟು ಚಂದ ಆಗಿದೆ. ನಿರೂಪಣೆ ಮತ್ತು ವಿಡಿಯೋ ಗ್ರಾಫಿ ಅದ್ಭುತ ಅಮೇಜಿಂಗ್. ❤️❤️👏

  • @bmw1956
    @bmw19562 жыл бұрын

    ಅಘಾಶಿನಿ ನದಿಯೇ ಮಾತನ್ನು ಆಡುತಿರುವ ಹಾಗೆ ಅನುಭವವಾಯಿತು.... 😭😭😭 Save rivers ,save nature

  • @anilkumarmodicare2066
    @anilkumarmodicare20664 жыл бұрын

    ಅದ್ಭುತ ಛಾಯಾಗ್ರಹಣ ಸುನಿಲ್ sir ಮತ್ತು ಬಳಗ.. ಹಿತವಾದ ನಿರೂಪಣೆ ಸಹನಾ.. ಮತ್ತೆ ಮತ್ತೆ ನೋಡಬೇಕು ಅನ್ನೊ ಹಾಗೆ ನಿರ್ದೇಶಕ👌💐

  • @gurum9494
    @gurum94944 жыл бұрын

    ಸಹನ ಭಾಳ್ಕರ್ ಮೇಡಮ್ ನಿಮ್ಮ ಧ್ವನಿ ಮತ್ತು ಉಚ್ಛಾರಣೆ ಬಹಳ ಸೊಗಸಾಗಿದೆ|

  • @GaganPrakash7
    @GaganPrakash75 жыл бұрын

    Not one of the best documentary cause this is literally the best documentary I've seen, neve have I ever thought that Aghanashini River has this much heritage and plays a role in environment of Western Ghats. Kudos to the everyone who was part of this venture. Sad that people aren't watching these documentaries instead spending money and time on meaningless things.

  • @aaks1603

    @aaks1603

    5 жыл бұрын

    Yes.... Its absolutely a breath taking video, we have such beautiful heritage and nature.

  • @vishalg7081

    @vishalg7081

    5 жыл бұрын

    kzread.info/dash/bejne/pJtlydaDm7ytaKg.html Watch to support us

  • @PradeepHegde151
    @PradeepHegde1515 жыл бұрын

    ನಾನು ಇದನ್ನು ಮೊದಲು VMware Alli ಹಾಕಿದಾಗ ನೋಡಿದ್ದೆ. ಅದು ಇಂಗ್ಲಿಷ್ನಲ್ಲಿ ಇತ್ತು. ಕನ್ನಡದಲ್ಲಿ ಇದ್ದಿದ್ರೆ ಚೆನ್ನಾಗಿತ್ತು ಅನ್ಸಿತ್ತು. ಈಗ ಕನ್ನಡದಲ್ಲಿ ನೋಡಿ ಇನ್ನೂ ಖುಷಿ ಆತು. Very well documented about Aghanashini and Western Ghat's eco system. All the best for your next Ooty documentary.

  • @sunilrajaput7326
    @sunilrajaput73264 жыл бұрын

    ಎಂತಹ ಸುಂದರ ವಿಶ್ಲೇಷಣೆ.. ಇನ್ನೂ ಮುಂದೆ ಎಲ್ಲಾ ನದಿಗಳ ಸುಂದರ ದೃಶ್ಯ ನಿಮ್ಮ ಕ್ಯಾಮೆರಾ ಕಣ್ಣಿಗೆ ಸೆರೆಯಾಗಲಿ ಕನ್ನಡದ ಧ್ವನಿಯಾಗಲಿ. ಧನ್ಯವಾದಗಳು ನಿಮ್ಮ ತಂಡಕ್ಕೆ... 🙏🙏🙏🙏🙏🙏🙏🙏🙏

  • @santoshmale8512

    @santoshmale8512

    4 жыл бұрын

    ఎంతటి సుందర విశ్లేషణ.. ........... ధన్యవాదాలు మీ సమిష్టి కృషికి...🙏🙏🙏🙏🙏

  • @madhu7189
    @madhu71893 жыл бұрын

    ಅತ್ಯದ್ಭುತ ಚಿತ್ರೀಕರಣ ❤️ ಮತ್ತು ನಿರೂಪಣೆ 🙏

  • @Gouda333
    @Gouda3334 жыл бұрын

    ತುಂಬಾ ಸುಂದರವಾದ ಬದುಕು ತೋರಿಸಿದ ನಿಮಗೆ ಅನಂತ ಧನ್ಯವಾದಗಳು..🙏

  • @naveenkumar_n509
    @naveenkumar_n5093 жыл бұрын

    ಇಂತಹ ಅದ್ಬುತ ಸ್ಥಳ ಮತ್ತು ರಚನೆಗಳನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸುವ ಅದೃಷ್ಟ ದೇವರು ಅನುಗ್ರಹಿಸಲಿ, ನಿಮ್ಮ ಪರಿಶ್ರಮಕ್ಕೆ ನನ್ನ ಹೃದಯ ಪೂರ್ವಕ ನಮನಗಳು.🙏🙏

  • @mahantprasadpattanashetti4447
    @mahantprasadpattanashetti44472 ай бұрын

    ಅತ್ಯಂತ ಮನ ಮುಟ್ಟುವ ಹಾಗೆ ಚಿತ್ರೀಕರಿಸಲಾಗಿದೆ. ಧನ್ಯವಾದಗಳು

  • @amritaprasad2960
    @amritaprasad2960 Жыл бұрын

    ಆಹಾ..ಎಂಥ ಸುಂದರ ಕಥೆ,ಮೈಮನ ಪುಳಕಗೊಂಡಿತು.ಈ ಸಂಪತ್ತು ಹೀಗೇ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ.ಅಬ್ಬಾ ಎಂಥ ಚಿತ್ರೀಕರಣ,ಎಂಥ ನಿರೂಪಣೆ.ಎಲ್ಲದೂ ಅದ್ಭುತ

  • @sandeshrls5713
    @sandeshrls57134 жыл бұрын

    ಪ್ರಕೃತಿ ಮಾತೆಯ ನದಿ ಜಲಧಾರೆಯ ಋಣ ತೀರಿಸಲು ಒಂದು ಅದ್ಭುತ ಪ್ರಯತ್ನ....ತುಂಬಾ ಚೆನ್ನಾಗಿದೆ.. ಇದನ್ನ ನಿರ್ಮಾಣ ಮಾಡಿದ ಎಲ್ಲ ತಂಡ ದವರಿಗೂ ಧನ್ಯವಾದಗಳು...

  • @devarajmatanavar
    @devarajmatanavar4 жыл бұрын

    ನಾನು ನಿಸರ್ಗ ಪ್ರೇಮಿ. ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು 🖤 ನಿಮ್ಮ ಈ ಪ್ರಯತ್ನಕ್ಕೆ.

  • @anandamurthygv4813
    @anandamurthygv48133 жыл бұрын

    ನಿಸರ್ಗದ ಅದ್ಭುತ ಸೃಷ್ಟಿ ಅಘನಾಶಿನಿ ಮತ್ತು ಅದನ್ನು ಅವಲಂಬಿಸಿರುವ ಕಾಡು. Wonderful making.

  • @rakeshachary7543
    @rakeshachary75434 жыл бұрын

    Wow,,,,,!!! Amazing 👌 wonderful narration... Adbhuta Kannada🙏🦚 Amaravagirali Aghanashini... 🍀🌊🌳🌲

  • @joshisr7489
    @joshisr74895 жыл бұрын

    ತುಂಬ ತುಂಬ ಧನ್ಯವಾದಗಳು, ಅದ್ಭುತ ಡಾಕ್ಯುಮೆಂಟರಿ ನೋಡಲು ಸಿಕ್ತು, ಇದರಿಂದ ಜನರಲ್ಲಿ ಸ್ವಲ್ಪವಾದರೂ ಪರಿಸರದ ಬಗ್ಗೆ ಅರಿವು ಮೂಡಿದರೆ ಸಾರ್ಥಕ .

  • @geethanuggihalli9386
    @geethanuggihalli93864 жыл бұрын

    ಅದ್ಭುತ ವಿವರಣೆ ಮತ್ತು ಅರ್ಥಮಾಡಿಕೊಳ್ಳಲು ಸುಲಭ ಧನ್ಯವಾದಗಳು.

  • @ranjanabhat7187
    @ranjanabhat71875 жыл бұрын

    Ultimate.. No words.. ಛಾಯಾಗ್ರಹಣ ಅದ್ಭುತ !!

  • @YAATRInpo
    @YAATRInpo6 күн бұрын

    ನಾನು ಈ ಹಿಂದೆಯೇ ನೋಡಿದ್ದೆ ಈಗ ಮತ್ತೊಮ್ಮೆ ನೋಡುತ್ತಿದ್ದೇನೆ. ಹೊನ್ನವರದಿಂದ❤

  • @ranjithagowda123
    @ranjithagowda1234 жыл бұрын

    ಅಪರೂಪದ ಮಾಹಿತಿಯನ್ನು ಸುಂದರವಾಗಿ ಹಿಡಿದಿಡುವ ಪ್ರಯತ್ನ ಅದ್ಬುತವಾಗಿದೆ ..👌👌👏 ಅಭಿನಂದನೆಗಳು....

  • @balakrishnashettyshetty3024
    @balakrishnashettyshetty30245 жыл бұрын

    ಅದ್ಬುತ... ಅಘನಾಶಿನಿಯ ಒಳಹೊಕ್ಕಂತ ಅನುಭವ

  • @santhoshachar5102
    @santhoshachar51024 жыл бұрын

    Wow truly an amazing documentary in kannada. Never knew Aghanashini has got so wonderful contribution to our state ONE STATE MANY WORLDS🥰. Very unique and I was absolutely stunned by the the way kannada and the wordings😘 are used. One shud difnetly appreciate all ur efforts. Very well done guys👌👌

  • @mdhareesh15
    @mdhareesh155 жыл бұрын

    Hatts off to Ashwini Kumar bhat and team for this wonderful documentary. Each and every aspect of aghanashini has been captured at its best. ಅಘನಾಶಿನಿ ನದಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಪಶ್ಚಿಮ ಘಟ್ಟದ ಜೀವನದಿ ಮತ್ತು ನರನಾಡಿ ನಮ್ಮ ಅಘನಾಶಿನಿ.

  • @deviprasad1490
    @deviprasad14904 жыл бұрын

    This made my day!! Fantastic.. Great team work! Throughout I felt that, Aghanashini was talking to me about her richness.. For the first time ever I was delighted to watch this great thing in kannada. Tnq.

  • @dheeraj1485
    @dheeraj14854 жыл бұрын

    The most beautiful documentary that I had ever seen Heart toching narration Background music was so apt that Captured the emotions very well Proud to be a kumtae Agha Nashini 🙏🙏🙏🙏🙏🙏

  • @KavyaMBhege
    @KavyaMBhege5 жыл бұрын

    Cont express in words. very beautifully captured the Nature. Awesome

  • @SoloAdventureSoul
    @SoloAdventureSoul5 жыл бұрын

    Adhbutavagide documentary. Very knowledgabale documentary. This video should reach every people living in south india so that they get a sense of awareness about river,nature,wildlife. Great job Ashwini Bhat sir. Hatsoff to your work.

Келесі