ಅಶೋಕೆ ಮಲ್ಲಿಕಾರ್ಜುನ ದೇವಾಲಯದ ಅಷ್ಟಬಂಧ, ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ

ಅಶೋಕೆಯಲ್ಲಿ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಹಾಗಣಪತಿಗೆ ಮಂಗಲ ನೀರಾಜನ ಮಾಡುವಾಗ ವಿಘ್ನೇಶ್ವರ ಸಂತುಷ್ಟಗೊಂಡು ಪ್ರಸಾದವನ್ನಿತ್ತ ಪರಿ
ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ ತಪೋಬಲದಿಂದ, ಪರಂಪರೆಯ ಸುಯೋಗ, ಪರಂಪರೆಯ ಸಂಕಲ್ಪ ಹಾಗೂ ಶ್ರೀಸಂಸ್ಥಾನದವರ ದಿವ್ಯದೃಷ್ಠಿ ಮತ್ತು ದಿವ್ಯಸಂಕಲ್ಪದಿಂದಾಗಿ ಇಂದು ಮೂಲಮಠವು ಪುನರ್ ನಿರ್ಮಾಣಗೊಳ್ಳುತ್ತಿದ್ದು ಶ್ರೀ ಶಂಕರರ ಆದೇಶ, ಆಶಯ ಪರಿಪಾಲನೆ ಆಗುತ್ತಿದೆ. ಹಾಗೆಯೇ ಎಂಟುನೂರು ವರುಷಗಳ ಬಳಿಕ ನಡೆದ ಚಾತುರ್ಮಾಸ್ಯಕ್ಕೆ ಈ ಮೂಲಮಠದ ಸುಂದರ ಪವಿತ್ರಮಯ ಅಶೋಕೆ ಸಾಕ್ಷಿಯಾಯಿತು.
"ಸಮಾಜಕ್ಕೆ ಮಠವೇ ಬೇರು, ಮಠಕ್ಕೆ ಅಶೋಕೆಯೆ ಬೇರು, ಆದ್ದರಿಂದ ಈ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಬ್ಬ ಶಿಷ್ಯನು ಸಿದ್ಧನಾಗಬೇಕು, ಇದು ಪ್ರತಿಯೊಬ್ಬ ಶಿಷ್ಯನ ಹೊಣೆ, ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀಮಠ ಸ್ಥಾಪನೆಯಾಗ ಬೇಕು.ಇದಕ್ಕೆ ಪ್ರತಿಯೊಬ್ಬ ಶಿಷ್ಯನು ಕರ್ತವ್ಯ ಬದ್ಧನಾಗಬೇಕು" ಎಂಬುದು ಶ್ರೀಸಂಸ್ಥಾನದವರ ಆಶಯ.
18.06.2009ರ ಗುರುವಾರ ಶುಭ ಮೂಹುರ್ತದಲ್ಲಿ ನಮ್ಮ ಕುಲಗುರುಗಳಾದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿದ್ಯಾಮಂದಿರ ಮತ್ತು ಮೂಲಮಠದ ಶಿಲಾನ್ಯಾಸ ಮತ್ತು ಶಿಲ್ಪಾವರಣ ಕಾರ್ಯಕ್ರಮ ನೆರವೇರಿಸಿ ಕೊಟ್ಟಿದ್ದಾರೆ . 03.06.2010 ರಿಂದ ಕಟ್ಟಡದ ಕಾಮಾಗಾರಿಗಳು, ಕೆಲಸ ಕಾರ್ಯಗಳು ಆರಂಭಗೊಂಡಿವೆ.
ಅವರ ಆಶಯದಂತೆ ಅಶೋಕೆಯ ಪುಣ್ಯಭೂಮಿಯು ಮಹಾಶುಭಕ್ಕೆ ಸಾಕ್ಷಿಯಾಯಿತು. ದಿನಾಂಕ 29-6-2017 ರ ಪುಣ್ಯ ದಿನದಂದು ಅಶೋಕೆಯಲ್ಲಿ ಮಲ್ಲಿಕಾರ್ಜುನ ದೇವಾಲಯದ ಅಷ್ಟಬಂಧ, ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವಗಳು ನೆರವೇರಿದವು.
Facebook: / shankarapeetham
Twitter: / shankarapeetha
KZread: / shankarapeetha
Website: www.srisamsthana.org
Blog: hareraama.in

Пікірлер

    Келесі